ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಹದಿಮೂರನೇ ವಾರಕ್ಕೆ ಕಾಲಿಟ್ಟಿದೆ. ಕಳೆದ ವಾರ ಮನೆಯಿಂದ ಯಾರೂ ಎಲಿಮಿನೇಟ್ ಆಗಿಲ್ಲ. ತ್ರಿವಿಕ್ರಮ್ ಅವರನ್ನು ಫೇಕ್ ಎಲಿಮಿನೇಟ್ ಮಾಡಿ ಬಳಿಕ ಪುನಃ ಮನೆಯೊಳಗೆ ಕಳುಹಿಸಲಾಗಿತ್ತು. ಹೀಗಾಗಿ ಸದ್ಯ ಮನೆಯೊಳಗೆ ಹತ್ತು ಮಂದಿ ಇದ್ದಾರೆ. ಇಲ್ಲಿಂದ ಟಾಸ್ಕ್ಗಳು ಮತ್ತಷ್ಟು ಕಠಿಣವಾಗುತ್ತಾ ಸಾಗುತ್ತಿವೆ. ಮನೆಯಲ್ಲಿ ಉಳಿದುಕೊಳ್ಳಲು ಸ್ಪರ್ಧಿಗಳು ನಾನಾ ಕಸರತ್ತು ನಡೆಸುತ್ತಿದ್ದಾರೆ.
ಈವರೆಗೆ ಅನೇಕ ಬಾರಿ ಡೇಂಜರ್ ಝೋನ್ಗೆ ಬಂದು ಕೂದಲೆಳೆಯಲ್ಲಿ ಪಾರಾಗಿದ್ದ ಚೈತ್ರಾ ಕುಂದಾಪುರ ಅವರಿಗೆ ಈ ವಾರ ಮಹತ್ವದ್ದಾಗಿದೆ. ಸದ್ಯ ಮನೆಯಲ್ಲಿರುವ ವೀಕ್ ಕಂಟೆಸ್ಟೆಂಟ್ ಸಾಲಿನಲ್ಲಿ ಇವರೂ ಇದ್ದಾರೆ. ಹೀಗಾಗಿ ಈ ವಾರ ಉಳಿದುಕೊಳ್ಳಲು ಚೈತ್ರಾ ಶ್ರಮಪಡುತ್ತಿದ್ದಾರೆ. ಅಲ್ಲದೆ ಕಳೆದ ವಾರ ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ಳುವಂತೆ ಕೂಡ ಕಾಣುತ್ತಿದೆ.
ಕಲರ್ಸ್ ಕನ್ನಡ ಇಂದಿನ ಎಪಿಸೋಡ್ನ ಪ್ರೊಮೋ ಬಿಡುಗಡೆ ಮಾಡಿದೆ. ಇದರಲ್ಲಿ ಚೈತ್ರಾ ಕುಂದಾಪುರ ಹಾಗೂ ರಜತ್ ಕಿಚನ್ ಅಲ್ಲಿ ಕ್ಲೀನ್ ಮಾಡುತ್ತಿರುತ್ತಾರೆ. ಆಗ ಚೈತ್ರಾ ಬಂದು ಗಲೀಜು ಮಾಡ್ತಿದ್ದಾಳೆ ಎಂದು ರಜತ್ ಹೇಳಿದ್ದಾರೆ. ಆಗ ಚೈತ್ರಾ ಅವರು ರಜತ್ ಮೈಗೆ ಸೋಪಿನ ನೊರೆಯನ್ನು ಅಂಟಿಸಿದ್ದಾರೆ. ಇದರಿಂದ ಕೋಪಿಸಿಕೊಳ್ಳುವ ರಜತ್, ಹಿಂದಿನ ವಾರದ ವಿಚಾರವನ್ನೆಲ್ಲ ಹೇಳಿ ರೇಗಿಸಿದ್ದಾರೆ.
ಮೊನ್ನೆ ಯಾರಿಗೂ ಇಲ್ಲಿ ಚಳಿ ಜ್ವರ ಬಂದಿತ್ತು ಅಲ್ವಾ ಎಂದು ಚೈತ್ರಾಳಿಗೆ ಜ್ವರ ಬಂದ ವಿಚಾರದ ಬಗ್ಗೆ ವ್ಯಂಗ್ಯವಾಡಿದ್ದಾರೆ. ಇದಕ್ಕೆ ಬೇಸರಗೊಂಡ ಚೈತ್ರಾ, ಯಾವ ಆರೋಪಕ್ಕೆ ನನ್ನನ್ನು ಈ ರೀತಿ ಮಾಡುತ್ತಿದ್ದಾರೆ? ನಾನು ನನ್ನನ್ನು ಸಾಬೀತು ಮಾಡಿಕೊಳ್ಳದೇ ಹೋದರೆ, ಬಲಿ ಕಾ ಬಕ್ರಾ ರೀತಿಯಲ್ಲಿ ಎಲ್ಲರೂ ಮಾಡಿರುವ ಆರೋಪಗಳನ್ನು ಸಾಬೀತು ಅಂತಾ ನಾನು ತಲೆಮೇಲೆ ತೆಗೆದುಕೊಳ್ಳಬೇಕಾಗುತ್ತದೆ. ಸರಿ ಇದೀನಾ ನಾನು? ನಾನು ನಾಟಕ ಮಾಡುತ್ತಿದ್ದೀನಾ? ಇಲ್ಲಿ ಆಡಿರುವ ಒಂದೊಂದು ಮಾತುಗಳಿಗೂ, ವ್ಯಂಗ್ಯಗಳಿಗೂ ಸಮಯ ಬರಲಿದೆ ಎಂದು ಹೇಳಿದ್ದಾರೆ.
ನಂತರ ದೇವರ ಮುಂದೆ ಹೋದ ಚೈತ್ರಾ ಚೀಟಿಯಲ್ಲಿ ಏನೋ ಬರೆದು ದೇವಿಯ ಮುಂದೆ ಇಟ್ಟಿದ್ದಾರೆ. ಬಳಿಕ ಹೋಗಿ ದೇವರ ಮುಂದೆಯೇ ಕೂತಿದ್ದಾರೆ. ಸಮಯನೇ ಉತ್ತರ ಕೊಡುತ್ತೆ ಎಂದು ಚೈತ್ರಾ ಜೋರಾಗಿ ಹೇಳಿದ್ದಾರೆ. ಆಗ ಅಚ್ಚರಿಯ ಘಟನೆ ನಡೆದಿದ್ದು, ದೇವರಿಗೆ ಮುಡಿಸಿದ್ದ ಹೂ ಬಲಬಾಗದಿಂದ ಬಿದ್ದಿದೆ. ಇದು ಶುಭ ಎಂಬಂತೆ ತೋರಿಸಲಾಗಿದೆ.
BBK 11: ಸೇಡಿಗೆ ಸೇಡು: ಬಿಗ್ ಬಾಸ್ ಮನೆಯಲ್ಲಿ ರಜತ್ಗೆ ಬೆವರಿಳಿಸಿದ ಚೈತ್ರಾ ಕುಂದಾಪುರ