ವಡೋದರ: ಹರ್ಲೀನ್ ಡಿಯೋಲ್ (115) ಆಕರ್ಷಕ ಶತಕದ ನೆರವಿನಿಂದ ಭಾರತ ತಂಡ, ಎರಡನೇ ಮಹಿಳಾ ಏಕದಿನ (INDW vs WIW) ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 115 ರನ್ಗಳಿಂದ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಅಲ್ಲದೆ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಮಹಿಳಾ ಏಕದಿನ ಸರಣಿಯನ್ನು ವಶಪಡಿಸಿಕೊಂಡಿತು. ಹರ್ಮನ್ಪ್ರೀತ್ ಕೌರ್ ನಾಯಕತ್ವದ ಭಾರತ, ಮೊದಲ ಏಕದಿನ ಪಂದ್ಯವನ್ನು 211 ರನ್ಗಳಿಂದ ಗೆದ್ದುಕೊಂಡಿತ್ತು. ಮೂರನೇ ಏಕದಿನ ಪಂದ್ಯ ಡಿಸೆಂಬರ್ 27 ರಂದು ಬರೋಡದಲ್ಲಿ ನಡೆಯಲಿದೆ.
ಇಲ್ಲಿನ ಕೊಟಂಬಿ ಸ್ಟೇಡಿಯಂನಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದ ಭಾರತ ತಂಡ ತನ್ನ ಪಾಲಿನ 50 ಓವರ್ಗಳಿಗೆ ಐದು ವಿಕೆಟ್ ನಷ್ಟಕ್ಕೆ 358 ರನ್ಗಳನ್ನು ಕಲೆ ಹಾಕಿತು.ಆ ಮೂಲಕ ಎದುರಾಳಿ ವೆಸ್ಟ್ ಇಂಡೀಸ್ 359 ರನ್ಗಳ ಗುರಿಯನ್ನು ನೀಡಿತ್ತು. ಬಳಿಕ ಗುರಿ ಹಿಂಬಾಲಿಸಿದ ವಿಂಡೀಸ್, 46.2 ಓವರ್ಗಳಲ್ಲಿ 243 ರನ್ಗಳಿಗೆ ಆಲೌಟ್ ಆಯಿತು. ಆ ಮೂಲಕ ಸತತ ಎರಡನೇ ಸೋಲು ಅನುಭವಿಸಿತು.
ಈ ಮೂಲಕ ಭಾರತ ಏಕದಿನದಲ್ಲಿ ತನ್ನ ಗರಿಷ್ಠ ಸ್ಕೋರ್ ಅನ್ನು ಸರಿಗಟ್ಟಿದೆ. ಇದಕ್ಕೂ ಮುನ್ನ ತಂಡ 2017ರಲ್ಲಿ ಐರ್ಲೆಂಡ್ ವಿರುದ್ಧ ಎರಡು ವಿಕೆಟ್ಗೆ 358 ರನ್ ಗಳಿಸಿತ್ತು. ಇದು ವೆಸ್ಟ್ ಇಂಡೀಸ್ ವಿರುದ್ಧ ಯಾವುದೇ ತಂಡ ಮಾಡಿದ ಗರಿಷ್ಠ ಸ್ಕೋರ್ ಕೂಡ ಆಗಿದೆ.
Comprehensive Victory ✅#TeamIndia complete a 115 runs win over the West Indies Women in the second #INDvWI ODI and take an unassailable 2-0 lead in the series 👍 👍
— BCCI Women (@BCCIWomen) December 24, 2024
Scorecard ▶️ https://t.co/u2CL80qolK@IDFCFIRSTBank pic.twitter.com/Af5oRXQC4n
ಭಾರತದ ಬೌಲರ್ಗಳಿಂದ ಮಿಂಚಿನ ಪ್ರದರ್ಶನ
ಭಾರತದ ಪರ ಯುವ ಸ್ಪಿನ್ನರ್ ಪ್ರಿಯಾ ಮಿಶ್ರಾ 49 ರನ್ಗಳಿಗೆ ಮೂರು ವಿಕೆಟ್ ಪಡೆದರೆ, ದೀಪ್ತಿ ಶರ್ಮಾ, ಟಿಟಾಸ್ ಸಾಧು ಮತ್ತು ಪ್ರತೀಕಾ ರಾವಲ್ ತಲಾ ಎರಡು ವಿಕೆಟ್ ಪಡೆದರು. ರೇಣುಕಾ ಸಿಂಗ್ ಠಾಕೂರ್ ಒಂದು ವಿಕೆಟ್ ಪಡೆದರು. ವೆಸ್ಟ್ ಇಂಡೀಸ್ ಪರ ನಾಯಕ ಹೇಯ್ಲಿ ಮ್ಯಾಥ್ಯೂಸ್ 106 ರನ್ ಗಳಿಸಿದರು. ಆದರೆ ಶಮೆನ್ ಕ್ಯಾಂಪ್ಬೆಲ್ (38) ಹೊರತುಪಡಿಸಿ ಅವರಿಗೆ ಇನ್ನೊಂದು ತುದಿಯಿಂದ ಯಾವುದೇ ಬೆಂಬಲ ಸಿಗಲಿಲ್ಲ. ಅವರ 109 ಎಸೆತಗಳ ಇನಿಂಗ್ಸ್ನಲ್ಲಿ 13 ಬೌಂಡರಿಗಳನ್ನು ಬಾರಿಸಿದ್ದಲ್ಲದೆ, ಅವರು ಐದನೇ ವಿಕೆಟ್ಗೆ ಕ್ಯಾಂಪ್ಬೆಲ್ನೊಂದಿಗೆ 102 ಎಸೆತಗಳಲ್ಲಿ 112 ರನ್ಗಳ ಜೊತೆಯಾಟವನ್ನು ಆಡಿದ್ದರು.
ಹರ್ಲೀನ್ ಡಿಯೋಲ್ ಭರ್ಜರಿ ಶತಕ
ಮೊದಲು ಬ್ಯಾಟ್ ಮಾಡಿದ್ದ ಭಾರತದ ಪರ ಹರ್ಲೀನ್ ಡಿಯೋನ್ ಅವರ ಬ್ಯಾಟಿಂಗ್ ಎಲ್ಲರ ಗಮನವನ್ನು ಸೆಳೆಯಿತು. ಅವರು 103 ಎಸೆತಗಳಲ್ಲಿ 16 ಬೌಂಡರಿಗಳೊಂದಿಗೆ 115 ರನ್ಗಳನ್ನು ಬಾರಿಸಿದರು. ಆ ಮೂಲಕ ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ಚೊಚ್ಚಲ ಶತಕವನ್ನು ಬಾರಿಸಿದರು. ಅವರು ತಮ್ಮ ಇನ್ನಿಂಗ್ಸ್ನಲ್ಲಿ ಮೂರು ಅದ್ಭುತ ಜೊತೆಯಾಟಗಳನ್ನು ಆಡಿದ್ದರು. ಅವರು ಎರಡನೇ ವಿಕೆಟ್ಗೆ ಪ್ರತೀಕಾ (76) ಅವರೊಂದಿಗೆ 75 ಎಸೆತಗಳಲ್ಲಿ 62 ರನ್, ಮೂರನೇ ವಿಕೆಟ್ಗೆ ನಾಯಕಿ ಹರ್ಮನ್ಪ್ರೀತ್ ಕೌರ್ (22) ಅವರೊಂದಿಗೆ 41 ಎಸೆತಗಳಲ್ಲಿ 43 ರನ್ ಮತ್ತು ನಾಲ್ಕನೇ ವಿಕೆಟ್ಗೆ ಜೆಮಿಮಾ ರೊಡ್ರಿಗಸ್ (52) ಅವರೊಂದಿಗೆ 71 ಎಸೆತಗಳಲ್ಲಿ 116 ರನ್ ಗಳಿಸಿದರು.
For a determined and impressive 💯, Harleen Deol is the Player of the Match 🏆
— BCCI Women (@BCCIWomen) December 24, 2024
Scorecard ▶️ https://t.co/u2CL80qolK#TeamIndia | #INDvWI | @IDFCFIRSTBank | @imharleenDeol pic.twitter.com/3ohTRQDB6U
ಸ್ಮೃತಿ ಮಂಧಾನಾ ಫಿಫ್ಟಿ
ಇದಕ್ಕೂ ಮುನ್ನ ಅಮೋಘ ಫಾರ್ಮ್ನಲ್ಲಿರುವ ಸ್ಮೃತಿ ಮಂಧಾನಾ 47 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ಗಳ ನೆರವಿನಿಂದ 52 ರನ್ ಗಳಿಸಿ, ಪ್ರತೀಕಾ ಅವರೊಂದಿಗೆ ಸತತ ಎರಡನೇ ವಿಕೆಟ್ಗೆ ಶತಕದ ಜೊತೆಯಾಟದೊಂದಿಗೆ ಭಾರತಕ್ಕೆ ಉತ್ತಮ ಆರಂಭ ನೀಡಿದ್ದರು. ಪ್ರತೀಕಾ ತನ್ನ 86 ಎಸೆತಗಳ ಇನಿಂಗ್ಸ್ನಲ್ಲಿ 10 ಬೌಂಡರಿ ಮತ್ತು ಒಂದು ಸಿಕ್ಸರ್ಗಳನ್ನು ಬಾರಿಸಿದರು. ಕೊನೆಯ ಓವರ್ಗಳಲ್ಲಿ 36 ಎಸೆತಗಳಲ್ಲಿ ಜೆಮಿಮಾ ರೊಡ್ರಿಗಸ್ ಆರು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದ್ದರು.
ಈ ಸುದ್ದಿಯನ್ನು ಓದಿ:INDW vs WIW: ರೇಣುಕಾ ಸಿಂಗ್ ಮಾರಕ ದಾಳಿಗೆ ವಿಂಡೀಸ್ ತತ್ತರ, ತವರಿನಲ್ಲಿ ಭಾರತಕ್ಕೆ ದಾಖಲೆಯ ಜಯ!