ಬಾಗೇಪಲ್ಲಿ: “ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬಾಗೇಪಲ್ಲಿ, ಡಾ.ವೀರೇಂದ್ರ ಹೆಗ್ಗಡೆ ಹಾಗೂ ಡಾ.ವಿ.ಹೇಮಾವತಿ ಅವರ ಪ್ರೇರಣೆಯಿಂದ ‘ಜ್ಞಾನವಿಕಾಸ ವಾತ್ಸಲ್ಯ ಕಾರ್ಯಕ್ರಮ’ದಡಿ ಪ್ರತೀ ತಿಂಗಳು ನಿರ್ಗತಿಕ ರಿಗೆ ಮಾಸಾಶನ ವಿತರಣೆ ನಡೆಸಲಾಗುತ್ತಿದೆ ಎಂದು ಸಂಸ್ಥೆಯ ತಾಲ್ಲೂಕು ಯೋಜನಾಧಿಕಾರಿ ಪ್ರವೀಣ್ ಕುಮಾರ್ ಹೇಳಿದರು.
ಬಾಗೇಪಲ್ಲಿ ಕಸಬಾ ಹೋಬಳಿ ಘಂಟಂವಾರಿಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಲ್ಲಪ್ಪರೆಡ್ಡಿಪಲ್ಲಿ ಗ್ರಾಮದ ಒಬ್ಬಣ್ಣ ಎಂಬವರಿಗೆ ಬಾಗೇಪಲ್ಲಿ ಪಟ್ಟಣದ ಧರ್ಮಸ್ಥಳ ಯೋಜನೆಯಿಂದ ಕಿಟ್ ಗಳನ್ನು ವಾತ್ಸಲ್ಯ ಸದಸ್ಯರಿಗೆ ವಿತರಣೆ ಮಾಡಿ ಮಾತನಾಡಿದರು.
ತಾಲ್ಲೂಕಿನಲ್ಲಿ ನೂರಾರು ಅಶಕ್ತ, ಅನಾಥ, ಕಡುಬಡವರ, ದುರ್ಬಲ ಕುಟುಂಬಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ವತಿಯಿಂದ ವಾತ್ಸಲ್ಯ ಕಿಟ್ ಗಳನ್ನು ವಿತರಿಸಲಾಗಿದ್ದು, ಅವುಗಳಲ್ಲಿ ದಿನಬಳಕೆಯ ಅಗತ್ಯ ವಸ್ತು ಗಳನ್ನು ಒಳಗೊಂಡಿವೆ. ಫಲಾನುಭವಿಗಳು ಇದರ ಲಾಭಪಡೆದುಕೊಳ್ಳಬೇಕು ಎಂದು ಹೇಳಿದರು.”
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಮಮತಾ ಹಾಗೂ ಗ್ರಾಮಸ್ಥರು ಹಾಜರಿದ್ದರು.
ಇದನ್ನೂ ಓದಿ: chikkaballapur