ಬಿಗ್ ಬಾಸ್ ಸೀಸನ್ 11 ರಲ್ಲಿ (Bigg Boss Kannada 11) ಚೈತ್ರಾ ಕುಂದಾಪುರ ಅವರ ಆಟ ಸ್ವತಃ ಮನೆಯೊಳಗಿರುವ ಸ್ಪರ್ಧಿಗಳಿಗೇ ಇಷ್ಟವಾಗುತ್ತಿಲ್ಲ. ಇದಕ್ಕಾಗಿಯೆ ಅವರು ಪ್ರತಿವಾರ ಕಳಪೆ, ನಾಮಿನೇಷನ್ ಆಗುತ್ತಿದ್ದಾರೆ. ಟಾಸ್ಕ್ ಮಧ್ಯೆ ಕೂಡ ಇವರು ತೆಗೆದುಕೊಳ್ಳುವ ನಿರ್ಧಾರಗಳಿಗೆ ಪ್ರತಿ ಬಾರಿ ಜಗಳ ಆಗುತ್ತದೆ. ಹೆಚ್ಚಿನ ಬಾರಿ ಇವರು ಸುಳ್ಳು ಹೇಳುತ್ತಲೇ ಇರುತ್ತಾರೆ ಎಂಬ ಮಾತು ಕೂಡ ಮನೆಮಂದಿ ಇಂದ ಕೇಳಿಬಂದಿದೆ. ಕಳೆದ ವಾರ ಉಸ್ತುವಾರಿ ವಿಚಾರದಲ್ಲಿ ಚೈತ್ರಾ ತೆಗೆದುಕೊಂಡ ತಪ್ಪು ನಿರ್ಧಾರ ಮತ್ತು ಕಳಪೆ ಹಾಗೂ ವೀಕೆಂಡ್ ಬಂದಾಗ ಹುಷಾರು ತಪ್ಪುವ ಬಗ್ಗೆ ಸುದೀಪ್ ಇವರಿಗೆ ಕ್ಲಾಸ್ ತೆಗೆದುಕೊಂಡಿದ್ದರು.
ಅಲ್ಲದೆ ಭಾನುವಾರ ಸೂಪರ್ ಸಂಡೇ ವಿಥ್ ಸುದೀಪ್ ಎಪಿಸೋಡ್ನಲ್ಲಿ ಕಿಚ್ಚ ಮನೆಮಂದಿಗೆ ಒಂದು ಚಟುವಟಿಕೆ ನೀಡಿದ್ದರು. ಇಲ್ಲಿ ಚೈತ್ರಾ ಅವರನ್ನು ಮನೆಮಂದಿ ಕಸದ ಬುಟ್ಟಿಗೆ ಹೋಲಿಸಿ ವೇಸ್ಟ್ ಎಂದು ಹೇಳಿದ್ದಾರೆ. ಬಿಗ್ಬಾಸ್ ಮನೆಯ ಕಸ ಯಾರೆಂದು ತಿಳಿಸಿ, ಅವರನ್ನು ಆ ಬುಟ್ಟಿಗೆ ಹಾಕಬೇಕು ಎಂದು ಕಿಚ್ಚ ಸುದೀಪ್ ಹೇಳುತ್ತಾರೆ. ಇದಕ್ಕೆ ಹೆಚ್ಚಿನವರು ಚೈತ್ರಾ ಹೆಸರನ್ನೇ ತೆಗೆದುಕೊಂಡಿದ್ದಾರೆ.
ಸದ್ಯ ಪ್ರತಿ ಬಾರಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ನೆನೆದು ಚೈತ್ರಾ ಕುಂದಾಪುರ ಕಣ್ಣೀರಿಟ್ಟಿದ್ದಾರೆ. ಅಲ್ಲದೆ ಬಿಗ್ ಬಾಸ್ ನನಗೆ ಅಲ್ಲ. ತಪ್ಪು ನಿರ್ಧಾರ ತೆಗೆದುಕೊಂಡೆ ಎಂದು ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. ಭವ್ಯಾ ಗೌಡ ಜೊತೆ ತನ್ನ ದುಃಖ ತೋಡಿಕೊಂಡ ಚೈತ್ರಾ, ಬಿಗ್ ಬಾಸ್ ನನಗೆ ಅಲ್ಲ. ತಪ್ಪು ನಿರ್ಧಾರ ತೆಗೆದುಕೊಂಡೆ. ಶಾಲೆಗೆ ಹೋಗುವವರು ಶಾಲೆಗೆ ಹೋಗಬೇಕು. ದೇವಸ್ಥಾನಕ್ಕೆ ಹೋಗುವವರು ದೇವಸ್ಥಾನಕ್ಕೆ ಹೋಗಬೇಕು. ಪಬ್ಗೆ ಹೋಗುವವರು ಪಬ್ಗೆ ಹೋಗಬೇಕು. ನನ್ನಂಥವಳು ಇಲ್ಲಿಗೆ ಬರಬಾರದಾಗಿತ್ತು ಎಂದು ಚೈತ್ರಾ ಕುಂದಾಪುರ ಅವರು ಹೇಳಿದ್ದಾರೆ.
ಇಲ್ಲಿನ ಪರಿಸ್ಥಿತಿಯನ್ನು ಎದುರಿಸಬೇಕು ಅಂತ ತುಂಬಾ ಸಲ ಅಂದುಕೊಳ್ಳುತ್ತೇನೆ. ಆದರೆ ಆಗಲ್ಲ. ನನ್ನ ಮಾತು ಕಿರಿಕಿರಿ ಅಂತ ಯಾರೂ ಹೇಳಿರಲಿಲ್ಲ. ಮಾತು ನನಗೆ ಅನ್ನ ಕೊಟ್ಟಿದೆ, ಬದುಕನ್ನು ಕೊಟ್ಟಿದೆ. ಕಿರಿಕಿರಿ ಅಂತ ಯಾರೂ ಹೇಳಿರಲಿಲ್ಲ ಎಂದು ಹೇಳಿಕೊಂಡು ಚೈತ್ರಾ ಕುಂದಾಪುರ ಅವರು ಕಣ್ಣೀರು ಹಾಕಿದ್ದಾರೆ. ಸದ್ಯ ಈ ವಾರ ಚೈತ್ರಾ ಅವರ ಆರ್ಭಟ ಮತ್ತಷ್ಟು ಜೋರಾಗಿದೆ. ವಾರಾಂತ್ಯದಲ್ಲಿ ಏನಾಗುತ್ತೆ ಎಂಬುದು ನೋಡಬೇಕಿದೆ.
BBK 11: ದೇವರ ಮುಂದೆ ಕುಳಿತು ಕಣ್ಣೀರಿಟ್ಟಿ ಚೈತ್ರಾ ಕುಂದಾಪುರ: ಆಗ ನಡೆಯಿತು ಅಚ್ಚರಿ