ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ (Bhagya Lakshmi Serial) ಭಾಗ್ಯಾ ಹೊಸ ಹೆಜ್ಜೆ ಇಟ್ಟಿದ್ದಾಳೆ. ತನ್ನ ಕುಟುಂಬದಲ್ಲಿ ಆಗಿರುವ ತಪ್ಪುಗಳನ್ನೆಲ್ಲ ಸರಿ ಮಾಡಲು ಹೊರಟಿದ್ದಾಳೆ. ಒಂದುಕಡೆ ತಾನು ಅನುಭವಿಸಿದ ಕಷ್ಟವನ್ನು ತಾಂಡವ್ಗೆ ರಿಟರ್ನ್ ಕೊಡುತ್ತಿದ್ದರೆ ಮತ್ತೊಂದೆಡೆ ಮಕ್ಕಳ ಜೀವನವನ್ನು ಸರಿಪಡಿಸುವತ್ತ ಮೊಲದ ಹೆಜ್ಜೆ ಇಟ್ಟಿದ್ದಾಳೆ.
ಸದ್ಯ ತನ್ವಿ ಕಾಲೇಜಿನಿಂದ ಸಸ್ಪೆಂಡ್ ಆಗಿ ಮನೆಯಲ್ಲಿದ್ದಾಳೆ. ಕೆಲ ದಿನಗಳ ಹಿಂದೆ ತನ್ನನ್ನು ರೇಗಿಸಿದ ಕ್ಲಾಸ್‌ಮೆಟ್‌ಗಳಿಗೆ ತನ್ವಿ ಹಾಕಿ ಸ್ಟಿಕ್‌ನಿಂದ ಹೊಡೆದ ಕಾರಣ ಪ್ರಿನ್ಸಿಪಾಲ್ ಅವಳನ್ನು ಸಸ್ಪೆಂಡ್ ಮಾಡಿದ್ದರು. ಈ ವಿಚಾರ ತಾಂಡವ್ ಕಿವಿಗೂ ಬಿದ್ದಿತ್ತು. ಆದರೆ, ತಾಂಡವ್ ಇದಕ್ಕೆಲ್ಲ ತಲೆಕೆಡಿಸಿಕೊಂಡಿರಲಿಲ್ಲ. ಇದೀಗ ಈ ವಿಚಾರವನ್ನು ಸರಿಪಡಿಸಲು ಭಾಗ್ಯಾ ಮುಂದಾಗಿದ್ದಾಳೆ.
ತಾಂಡವ್ನನ್ನು ಕಾಲೇಜಿಗೆ ಹೋಗಿ ಮಾತನಾಡಿಕೊಂಡು ಬರೋಣ ಎಂದು ಭಾಗ್ಯ ಕರೆದಿದ್ದಾಳೆ. ಆದರೆ, ಇದಕ್ಕೆ ತಾಂಡ್ ವಿರೋಧ ವ್ಯಕ್ತಪಡಿಸಿದ್ದಾನೆ. ನಮ್ಮಿಬ್ಬರ ಸಮಸ್ಯೆಯಿಂದ ಅವಳು ಸಸ್ಪೆಂಡ್ ಆಗಿರೋದು, ನಾವಿಬ್ರು ತನ್ವಿ ಕಾಲೇಜಿಗೆ ಹೋಗ್ತಾ ಇದ್ದೀವಿ ಬನ್ನಿ ಎಂದು ತಾಂಡವ್ನನ್ನು ಕರೆದಿದ್ದಾಳೆ. ಆದರೆ, ತಾಂಡವ್ ನಾನು ಎಲ್ಲೂ ಹೋಗಲ್ಲ ಎಂದಿದ್ದಾನೆ. ಇದರಿಂದ ಕೋಪಗೊಂಡ ಭಾಗ್ಯಾ, ನೀವು ನನ್ ಜೊತೆ ಬರ್ತಾ ಇದ್ದೀರ ಅಷ್ಟೇ ಎಂದಿದ್ದಾಳೆ. ಆಗ ತಾಂಡವ್ ಭಾಗ್ಯಾಳನ್ನು ತಳ್ಳಿ, ನಿನ್ಗೆ ಒಂದು ಸಲ ಹೇಳಿದ್ರೆ ಅರ್ಥ ಆಗಲ್ವ ನಾನು ಎಲ್ಲಿಗೂ ಬರಲ್ಲ ಎಂದು ಏರು ಧ್ವನಿಯಲ್ಲಿ ಹೇಳಿದ್ದಾನೆ.
ಈ ಹಿಂದೆ ಈ ಇಂತಹ ವಿಚಾರಕ್ಕೆ ಸುಮ್ಮನಿರುತ್ತಿದ್ದ ಭಾಗ್ಯ ಈಗ ಬದಲಾಗಿದ್ದಾಳೆ. ನಾನು ಬರಲ್ಲ ಎಂದಿದ್ದಕ್ಕೆ ತಾಂಡವ್ನ ಕೈ ಹಿಡಿದು, ಬಿಡುವವರು ಯಾರು?, ನಾವಿಬ್ರೂ ಹೋಗ್ಲೆಬೇಕು ಎಂದು ಎಳೆದುಕೊಂಡು ಹೋಗಿದ್ದಾಳೆ.
ತಂದೆಯ ವರ್ತನೆ ಕಂಡು ಹೆದರಿದ ಮಕ್ಕಳು:
ಹಿಂದಿನ ಸಂಚಿಕೆಯಲ್ಲಿ ತಾಂಡವ್ ಕುಡಿದ ಮತ್ತಿನಲ್ಲಿ ಮನೆಗೆ ಬಂದು ರಂಪಾಟ ಮಾಡಿದ್ದ. ತೂರಾಡಿಕೊಂಡೇ ಒಳಗೆ ಬಂದು ಮನೆಯಲ್ಲಿರುವ ಸಾಮಗ್ರಿಗಳನ್ನು ಒಡೆಯುತ್ತಾನೆ. ಆಗ ಕೋಪಗೊಂಡ ಭಾಗ್ಯಾಳ ಅಮ್ಮ ತಾಂಡವ್ನ ಕಾಲರ್ ಪಟ್ಟಿ ಹಿಡಿದು ಮನೆಯಿಂದ ಆಚೆ ಹಾಕಿ ಬಾಗಲು ಕ್ಲೋಸ್ ಮಾಡುತ್ತಾಳೆ. ಇದರಿಂದ ತನ್ವಿ ಹಾಗೂ ಗುಂಡ ಭಯಗೊಂಡಿದ್ದಾರೆ. ಅಜ್ಜು ಬಳಿ ಹೋಗಿ ಅಪ್ಪ ಯಾಕೆ ಹೀಗೆಲ್ಲ ಮಾಡುತ್ತಿದ್ದಾರೆ, ನಮಗೆ ಭಯ ಆಗುತ್ತಿದೆ ಎಂದಿದ್ದಾರೆ. ಭಯ ಪಡುವಂತದ್ದು ಏನೂ ಇಲ್ಲ, ನಾವೆಲ್ಲ ಇದ್ದೀವಿ ಎಂದು ಹೇಳಿ ಸಮದಾನ ಮಾಡುತ್ತಾರೆ. ಅಮ್ಮ, ಅಜ್ಜ, ಅಜ್ಜಿ ನಾವೆಲ್ಲ ಇದ್ದೀವಿ ಭಯ ಪಡಬೇಡ ಗುಂಡಣ್ಣ ಎಂದು ಅಜ್ಜ ಕೂಡ ಹೇಳುತ್ತಾರೆ. ಅಪ್ಪ ಬೆಳಗ್ಗೆ ನೋಡಿದ್ರೆ ಮದುವೆ ಆಗೋಕ್ಕೆ ಹೊರಟ್ರು, ಈಗ ನೋಡುದ್ರೆ ಇದೆನ್ನೆಲ್ಲ ಒಡೆದು ಹಾಕಿದ್ದಾರೆ, ನಮಗೆ ಏನು ಮಾಡ್ಬೇಕು ಅಂತಾನೆ ಗೊತ್ತಾಗ್ತಿಲ್ಲ ಎಂದು ತಾನ್ವಿ ಹೇಳಿದ್ದಾಳೆ.
BBK 11: ಬಿಗ್ ಬಾಸ್ಗೆ ಒಪ್ಪಿ ತಪ್ಪು ನಿರ್ಧಾರ ತೆಗೊಂಡೆ: ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟ ಚೈತ್ರಾ ಕುಂದಾಪುರ