ಸಾಮಾನ್ಯವಾಗಿ ಪ್ರಾಣಿ, ಪಕ್ಷಿಗಳು ಮನುಷ್ಯರಿಂದ ದೂರ ಇರುತ್ತವೆ. ಇನ್ನು ಕೆಲವೊಮ್ಮೆ ಅವುಗಳು ಹೋಗುತ್ತಿರುವ ದಾರಿಯಲ್ಲಿ ಮನುಷ್ಯರು ಅಡ್ಡ ಬಂದರೆ ಅವರನ್ನು ಕ್ಯಾರೇ ಎನ್ನದೇ ತಮ್ಮ ಪಾಡಿಗೆ ಇದ್ದುಬಿಡುತ್ತವೆ. ಆದರೆ ಇಲ್ಲೊಂದು ವಿಡಿಯೊ ಜನರ ಮೆಚ್ಚುಗೆ ಗಳಿಸಿದೆ. ಅದೇನೆಂದರೆ ತನ್ನ ದಾರಿಗೆ ಅಡ್ಡವಾಗಿರುವ ದಂಪತಿ ದಾರಿ ಬಿಡುವವರೆಗೂ ಪೆಂಗ್ವಿನ್‌ವೊಂದು ವಿನಯದಿಂದ ಕಾದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ವೈರಲ್ ವಿಡಿಯೊದಲ್ಲಿ ಹಿಮಭರಿತ ಪ್ರದೇಶದಲ್ಲಿ ಪೆಂಗ್ವಿನ್ ಬರುತ್ತಿರುವ ದಾರಿಗೆ ಅಡ್ಡಲಾಗಿ ದಂಪತಿ ತಬ್ಬಿಕೊಂಡು ನಿಂತಿದ್ದಾರೆ. ಆದರೆ ದಂಪತಿ ರೊಮ್ಯಾಂಟಿಕ್ ಭಂಗಿಯಲ್ಲಿರುವುದನ್ನು ನೋಡಿದ ಪೆಂಗ್ವಿನ್ ಅವರಿಗೆ ತೊಂದರೆ ಮಾಡಲು ಮುಂದಾಗಲಿಲ್ಲ. ಬದಲಾಗಿ, ಅದು ಅವರ ಹಿಂದೆ ಶಾಂತವಾಗಿ ನಿಂತಿದೆ. ಅವರು ಅದನ್ನು ಗಮನಿಸಿ ನಂತರ ಅದಕ್ಕೆ ದಾರಿ ಬಿಟ್ಟಿದ್ದಾರೆ. ಅಂಟಾರ್ಕ್ಟಿಕ್ ಪರ್ಯಾಯ ದ್ವೀಪದಲ್ಲಿ ಕಂಡುಬಂದ ದೃಶ್ಯ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗಿದೆ.
ದಂಪತಿ ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಪೆಂಗ್ವಿನ್‍ನ ಮುಗ್ಧತೆಯನ್ನು ತೋರಿಸಿದ್ದಾರೆ. ಪೆಂಗ್ವಿನ್ ಸದ್ದಿಲ್ಲದೆ ದಾರಿ ಬಿಡುವ ತನಕ ಕಾಯುತ್ತಿರುವುದನ್ನು ನೋಡಿದ ನೆಟ್ಟಿಗರು, ಮುದ್ದಾದ ಪಕ್ಷಿ ಖಂಡಿತವಾಗಿಯೂ “ಅಂತರ್ಮುಖಿ” ಎಂದಿದ್ದಾರೆ. ಕಾಮೆಂಟ್ ವಿಭಾಗದಲ್ಲಿ, “ಪೆಂಗ್ವಿನ್ ಅಂತರ್ಮುಖಿ” ಎಂದು ಒಬ್ಬರು ಬರೆದಿದ್ದಾರೆ. ಪರಸ್ಪರ ತಬ್ಬಿಕೊಳ್ಳುವ ಮೂಲಕ ಒಟ್ಟಿಗೆ ಪ್ರಣಯ ಕ್ಷಣವನ್ನು ಆನಂದಿಸುತ್ತಿದ್ದ ದಂಪತಿಗೆ ಯಾವುದೇ ಕಿರಿಕಿರಿ ಮಾಡದೇ ಪೆಂಗ್ವಿನ್ ಸುಮ್ಮನೆ ಇರುವುದು ಎಲ್ಲರ ಗಮನ ಸೆಳೆದಿದೆ.
ಈ ಸುದ್ದಿಯನ್ನೂ ಓದಿ:ಇಂಡಿಗೋ ವಿಮಾನದಲ್ಲಿ ʼಟೀ ಸರ್ವ್ʼ ಮಾಡಿದ ಪ್ರಯಾಣಿಕರು; ವೈರಲ್ ಆಯ್ತುಈ ವಿಡಿಯೊ
ಪೆಂಗ್ವಿನ್ ಸ್ಫೆನಿಸ್ಸಿಡೇ ಕುಟುಂಬಕ್ಕೆ ಸೇರಿದ ಜಲವಾಸಿ ಪಕ್ಷಿಯಾಗಿದೆ. ಹೆಚ್ಚಿನ ಪೆಂಗ್ವಿನ್ ಗಳು ಕ್ರಿಲ್, ಮೀನು, ಸ್ಕ್ವಿಡ್ ಮತ್ತು ಇತರ ರೀತಿಯ ಸಮುದ್ರ ಜೀವಿಗಳನ್ನು ತಿನ್ನುತ್ತವೆ.