Thursday, 26th December 2024

Kazakhstan plane crash: 70ಕ್ಕೂ ಅಧಿಕ ಪ್ರಯಾಣಿಕರಿದ್ದ ವಿಮಾನ ಪತನ- ವಿಡಿಯೊ ಇದೆ

plane crash

ಕಜಕಿಸ್ತಾನ: ಸುಮಾರು 70ಕ್ಕೂ ಅಧಿಕ ಪ್ರಯಾಣಿಕರಿದ್ದ ವಿಮಾನವೊಂದು ಕಜಕಿಸ್ತಾನ್‌ನ ಅಕ್ಟೌ ನಗರದ ಬಳಿ ಪತನ(Kazakhstan plane crash)ಗೊಂಡಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಅಜರ್‌ಬೈಜಾನ್ ಏರ್‌ಲೈನ್ಸ್‌ನ ಪ್ರಯಾಣಿಕ ವಿಮಾನವು ಕಜಕಿಸ್ತಾನ್‌ನ ಅಕ್ಟೌ ನಗರದ ಬಳಿ ಪತನಗೊಂಡ ನಂತರ ಬೆಂಕಿ ಹೊತ್ತಿಕೊಂಡಿದೆ. ಇನ್ನು ವಿಮಾನದಲ್ಲಿದ್ದ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ ಎಂದು ದೇಶದ ತುರ್ತು ಸಚಿವಾಲಯ ಮಾಹಿತಿ ನೀಡಿದೆ.

ಎಂಬ್ರೇರ್ 190 ವಿಮಾನವು ಅಜರ್‌ಬೈಜಾನ್‌ನ ರಾಜಧಾನಿ ಬಾಕುದಿಂದ ರಷ್ಯಾದ ಚೆಚೆನ್ಯಾದ ಗ್ರ್ಜೋನಿಗೆ ತೆರಳುತ್ತಿತ್ತು. ಕೆಲವು ತಾಂತ್ರಿಕ ದೋಷದಿಂದ ಆದರೆ ಗ್ರೋಜ್ನಿಯಲ್ಲಿ ಮಂಜಿನಿಂದಾಗಿ ಮಾರ್ಗವನ್ನು ಬದಲಾಯಿಸಲಾಯಿತು. ಐವರು ಸಿಬ್ಬಂದಿಯೊಂದಿಗೆ ಅರವತ್ತೆರಡು ಪ್ರಯಾಣಿಕರು ವಿಮಾನದಲ್ಲಿದ್ದರು ಎನ್ನಲಾಗಿದೆ. ಇನ್ನು ಈ ಭೀಕರ ವಿಮಾನ ಪತನದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ ಮತ್ತು ಬದುಕುಳಿದವರಿಗೆ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ ಬದುಕುಳಿದವರು ಇದ್ದಾರೆ ಎಂದು ಎಂದು ಸಚಿವಾಲಯ ಹೇಳಿದೆ.

ವಿಮಾನ ಟೇಕ್‌ ಆಫ್‌ ಆಗಿ ಕೆಲ ದೂರ ಚಲಿಸುತ್ತಿದ್ದಂತೆ ಏಕಾಏಕಿ ನಿಯಂತ್ರಣ ಕಳೆದುಕೊಂಡಿದೆ. ಕೂಡಲೇ ಅದು ಗಾಳಿಯಲ್ಲಿ ಗಿರಕಿ ಹೊಡೆದಿದೆ. ಪೈಲಟ್‌ ತುರ್ತು ಭೂಸ್ಪರ್ಶ ಮಾಡಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಕೊನೆಗೆ ಅದು ಕಾರ್ಯನಿರ್ವಹಣೆ ನಿಲ್ಲಿಸಿದ್ದು ಏಕಾಏಕಿ ನೆಲಕ್ಕೆ ಅಪ್ಪಳಿಸಿ ಬೆಂಕಿ ಕಾಣಿಸಿಕೊಂಡಿದೆ. ದೃಶ್ಯಗಳು ಅಪಘಾತದ ಸ್ಥಳದಲ್ಲಿ ಆಂಬ್ಯುಲೆನ್ಸ್‌ಗಳು ದೌಡಾಯಿಸಿ ಕೆಲವು ಜನರನ್ನು ರಕ್ಷಿಸಲಾಯಿತು ಮತ್ತು ವಿಮಾನದ ಹಿಂಭಾಗದ ತುದಿಯಲ್ಲಿರುವ ತುರ್ತು ನಿರ್ಗಮನದಿಂದ ಡಿಬೋರ್ಡಿಂಗ್ ಮಾಡಲಾಯಿತು. ಇನ್ನು ಘಟನೆಯಲ್ಲು ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಈ ಸುದ್ದಿಯನ್ನೂ ಓದಿ: ತಾಂಜೇನಿಯಾ ವಿಮಾನ ಪತನ: 19 ಜನರ ಸಾವು