ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಶತಕದತ್ತ ದಾಪುಗಾಲಿಡುತ್ತಿದೆ. ಸದ್ಯ ಮನೆಯಲ್ಲಿ ಕೇವಲ 10 ಮಂದಿ ಇದ್ದಾರಷ್ಟೆ. ಹೀಗಾಗಿ ಟಾಸ್ಕ್ಗಳು ಕೂಡ ಕಠಿಣವಾಗುತ್ತಾ ಸಾಗಿದೆ. ಇದೀಗ ದೊಡ್ಮನೆ ರೆಸಾರ್ಟ್ ಆಗಿ ಮಾರ್ಪಾಡಾಗಿದೆ. ಇದಕ್ಕಾಗಿ ಮನೆಯ ಸದಸ್ಯರನ್ನು ಎರಡು ಗುಂಪುಗಳಾಗಿ ವಿಂಗಡನೆ ಮಾಡಲಾಗಿದೆ. ಪ್ರತಿಬಾರಿಯಂತೆ ಈ ಬಾರಿ ಕೂಡ ಎರಡು ಗುಂಪುಗಳ ನಡುವೆ ಸಾಕಷ್ಟು ಜಗಳ ನಡೆದಿದೆ.
ಸದ್ಯ ಎರಡು ಗುಂಪುಗಳಾಗಿರುವ ಬಿಗ್ ಬಾಸ್ ಮನೆಯ ಒಂದು ತಂಡದಲ್ಲಿ ಚೈತ್ರಾ ಕುಂದಾಪುರ, ಐಶ್ವರ್ಯಾ ಸಿಂಧೋಗಿ, ಮಂಜು, ಗೌತಮಿ ಹಾಗೂ ಹನುಮಂತ ಇದ್ದರೆ ಮತ್ತೊಂದು ಟೀಮ್ನಲ್ಲಿ ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್, ರಜತ್ ಹಾಗೂ ಮೋಕ್ಷಿತಾ ಇದ್ದಾರೆ. ಇದರಲ್ಲಿ ಭವ್ಯಾ ತಂಡ ಉಳಿದ ಸದಸ್ಯರ ಸೇವೆ ಮಾಡಬೇಕು. ಅಂದರೆ ಚೈತ್ರಾ ಟೀಮ್ನ ಅತಿಥಿಗಳಿಗೆ ಬೇಕಾದ ಎಲ್ಲ ಸೌಕರ್ಯ ಮಾಡಿಕೊಡಬೇಕು.
ಆದರೆ, ಇಲ್ಲಿ ಅತಿಥಿಗಳ ವರ್ತನೆ ಮಿತಿ ಮೀರಿದಂತಿದೆ. ಚೈತ್ರಾ ಕುಂದಾಪುರ ತಂಡದಲ್ಲಿರುವ ಉಗ್ರಂ ಮಂಜು ಕೊಡ್ತಿರುವ ಕಾಟಕ್ಕೆ, ಟಾರ್ಚರ್ಗೆ ಸೇವೆ ಮಾಡುವ ಸಿಬ್ಬಂದಿ ಸುಸ್ತಾಗಿ ಹೋಗದ್ದಾರೆ. ಕಾಟ ತಾಳಲಾರದೇ ರೆಸಾರ್ಟ್ನ ಮ್ಯಾನೇಜರ್ ಭವ್ಯಾ ಗೌಡ ಕಣ್ಣೀರು ಇಟ್ಟಿದ್ದಾರೆ. ಮಧ್ಯರಾತ್ರಿ ಏನೇ ಕೇಳಿದ್ರೂ ಮಾಡಿಕೊಡಬೇಕು ಎಂದು ಅತ್ತಿದ್ದಾರೆ.
ರಾತ್ರಿ ಲೈಟ್ಸ್ ಆಫ್ ಆದರೂ ನೀವು ನಮ್ಮ ಸೇವೆ ಮಾಡಬೇಕು ಎಂದು ಮಂಜು ಹೇಳಿದ್ದಾರೆ. ಇನ್ನೂ ಐಶ್ವರ್ಯ ನನ್ನ ತಲೆ ಒತ್ತಬೇಕು ಎಂದು ಆರ್ಡರ್ ಮಾಡಿದ್ದಾರೆ. ಮಂಜು ನಂಗೆ ಇವತ್ತು ಮ್ಯೂಜಿಕಲ್ ನೈಟ್ ಬೇಕು ಎಂದಿದ್ದಾರೆ. ಇತ್ತ ರೊಚ್ಚಿಗೆದ್ದಿರುವ ರಜತ್, ನಮಗೂ ಬರುತ್ತೆ ಚಾನ್ಸ್. ನಿಮ್ಮನ್ನು ಹಣ್ಣುಗಾಯಿ, ನೀರುಗಾಯಿ ಮಾಡಿಲ್ಲ ಅಂದ್ರೆ ನನ್ನ ಹೆಸರು ಬುಜ್ಜಿ ಅಲ್ಲ ನೋಡಿಕೋ ಎಂದು ಉಗ್ರಂ ಮಂಜುಗೆ ಸವಾಲು ಹಾಕಿದ್ದಾರೆ.
BBK 11: ಬಿಗ್ ಬಾಸ್ಗೆ ಒಪ್ಪಿ ತಪ್ಪು ನಿರ್ಧಾರ ತೆಗೊಂಡೆ: ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟ ಚೈತ್ರಾ ಕುಂದಾಪುರ