Thursday, 26th December 2024

Allu Arjun: ಪುಷ್ಪಾ2 ಕಾಲ್ತುಳಿತ ಪ್ರಕರಣ; ಮೃತ ರೇವತಿ ಕುಟುಂಬಕ್ಕೆ 2 ಕೋಟಿ ರೂ ಪರಿಹಾರ!

ಹೈದರಾಬಾದ್:‌ ಖ್ಯಾತ ನಟ ಅಲ್ಲು ಅರ್ಜುನ್‌(Allu Arjun) ಅವರ ಪುಷ್ಪಾ2(Pushpa2) ಸಿನಿಮಾದ ಪ್ರೀಮಿಯರ್‌ ಶೋ(Premiere Show) ವೇಳೆ ಸಂಧ್ಯಾ ಥಿಯೇಟರ್‌ನಲ್ಲಿ(Sandhya Theatre) ನಡೆದ ಕಾಲ್ತುಳಿತದಿಂದಾಗಿ(Stampede) ರೇವತಿ(Revathi) ಎಂಬ ಮಹಿಳೆ ಮೃತಪಟ್ಟಿದ್ದರು. ಇದೀಗ ಅವರ ಕುಟುಂಬಕ್ಕೆ ನಟನ ತಂದೆ ಅಲ್ಲು ಅರವಿಂದ್‌(Allu Aravind) ಮತ್ತು ಪುಷ್ಪಾ2 ಚಿತ್ರದ ನಿರ್ಮಾಪಕ ಎಲಮಂಚಿಲಿ ರವಿ ಎರಡು ಕೋಟಿ ರೂ ಪರಿಹಾರ( 2 Crore Aid) ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.

ಪುಷ್ಪ 2 ಚಿತ್ರದ ಪ್ರೀಮಿಯರ್ ಶೋಗಾಗಿ ಡಿಸೆಂಬರ್ 4 ರಂದು ರಾತ್ರಿ ಸಂಧ್ಯಾ ಥಿಯೇಟರ್‌ಗೆ ಅಲ್ಲು ಅರ್ಜುನ್ ಜೊತೆಗೆ ಪುಷ್ಪ 2 ಚಿತ್ರತಂಡ ತೆರಳಿತ್ತು. ಈ ವೇಳೆ ಅಲ್ಲು ಅರ್ಜುನ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರಿಂದ ಭಾರೀ ನೂಕುನುಗ್ಗಲು ಉಂಟಾಗಿತ್ತು. ಈ ವೇಳೆ ಕಾಲ್ತುಳಿತಕ್ಕೆ ಸಿಕ್ಕಿ ರೇವತಿ ಎಂಬ ಮಹಿಳೆ ಮೃತಪಟ್ಟಿದ್ದರು. ಗಾಯಗೊಂಡ ಮಹಿಳೆಯ ಮಗ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಪ್ರಕರಣದಿಂದಾಗಿ ಅಲ್ಲು ಅರ್ಜುನ್​ ಅರೆಸ್ಟ್‌ ಆಗಿದ್ದರು. ಜೈಲಿನಲ್ಲಿಯೂ ಇರಬೇಕಾದ ಪರಿಸ್ಥಿತಿ ಎದುರಾಯಿತು. ಹೈದರಾಬಾದ್‌ನಲ್ಲಿಈ ಘಟನೆ ಸಂಬಂಧ ವಿವಾದದ ಕಿಡಿ ಹೊತ್ತಿಕೊಂಡಿದೆ. ಅಲ್ಲು ಅರ್ಜುನ್‌ಗೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದೆ. ಇದೀಗ ಗಂಭೀರವಾಗಿ ಗಾಯಗೊಂಡಿರುವ ಶ್ರೀತೇಜ್ ಅವರನ್ನು ನಿರ್ಮಾಪಕ ದಿಲ್ ರಾಜು, ಅಲ್ಲು ಅರವಿಂದ್ ಮತ್ತು ಪುಷ್ಪಾ2 ನಿರ್ಮಾಪಕ ಎಲಮಂಚಿಲಿ ರವಿ ಭೇಟಿ ಮಾಡಿ ಈ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ ಘೋಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಾಲಕ ಶ್ರೀತೇಜ್ ತಂದೆಗೆ ಧೈರ್ಯ ತುಂಬಿರುವ ನಿರ್ಮಾಪಕ, ರೇವತಿ ಕುಟುಂಬಕ್ಕೆ 2 ಕೋಟಿ ರೂಪಾಯಿ ಪರಿಹಾರ ನೀಡುತ್ತಿದ್ದಾರೆ ಎಂದು ಅಲ್ಲು ಅರವಿಂದ್ ಹೇಳಿದ್ದಾರೆ. ಶ್ರೀತೇಜ್ ಸದ್ಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲು ಅರ್ಜುನ್ ಪರವಾಗಿ ಒಂದು ಕೋಟಿ ರೂ., ಪುಷ್ಪ 2 ನಿರ್ಮಾಪಕರು ಮತ್ತು ನಿರ್ದೇಶಕ ಸುಕುಮಾರ್ 50 ಲಕ್ಷ ರೂ. ಪರಿಹಾರ ನೀಡುತ್ತಿದ್ದಾರೆ.

ಕಣ್ಣೀರು ಹಾಕಿದ ಅಲ್ಲು ಅರ್ಜುನ್!

ಪೊಲೀಸರ ವಿಚಾರಣೆ ವೇಳೆ ನಟ ಅಲ್ಲು ಅರ್ಜುನ್ ಭಾವುಕರಾಗಿದ್ದಾರೆ ಎನ್ನಲಾಗಿದೆ. ಬನ್ನಿ ಸಂಧ್ಯಾ ಥಿಯೇಟರ್ ಘಟನೆಯ ಕುರಿತು ಮತ್ತೊಮ್ಮೆ ವಿಚಾರಣೆ ಎದುರಿಸುವಂತಾಗಿತ್ತು. ಇದೇ ವೇಳೆ ಅಧಿಕಾರಿಗಳು ಸಂಧ್ಯಾ ಥಿಯೇಟರ್ ನಲ್ಲಿ ನಡೆದ ಘಟನೆಯ ವಿಡಿಯೊವನ್ನು ಅಲ್ಲು ಅರ್ಜುನ್​ಗೆ ತೋರಿಸಿದ್ದಾರೆ. ವಿಡಿಯೊ ನೋಡಿ ನಟ ಕಣ್ಣೀರು ಹಾಕಿದ್ದಾರೆ. ವಿಚಾರಣೆ ವೇಳೆ ಹಲವು ಪ್ರಶ್ನೆಗಳಿಗೆ ಅಲ್ಲು ಅರ್ಜುನ್​ ತನಗೇನು ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ:Parliament: ಸಂಸತ್‌ ಭವನದ ಹೊರಗೆ ಬೆಂಕಿ ಹಚ್ಚಿಕೊಂಡ ವ್ಯಕ್ತಿ; ಸ್ಥಿತಿ ಗಂಭೀರ-ಆಸ್ಪತ್ರೆಗೆ ದಾಖಲು!