-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಳಿಗಾಲದ ಟ್ರಾವೆಲ್ ಫ್ಯಾಷನ್ನಲ್ಲಿ (Winter Fashion) ನೋಡಲು ಆಕರ್ಷಕವಾಗಿ ಕಾಣಿಸುವಂತಹ ಕಲರ್ಫುಲ್ ಲೈಟ್ವೇಟ್ ಉಲ್ಲನ್ ಟೋಪಿಗಳು ಮಾರುಕಟ್ಟೆಗೆ ಬಂದಿವೆ. ಹುಡುಗ-ಹುಡುಗಿಯರ ಕಿವಿಯನ್ನು ಬೆಚ್ಚಗಿಡುವುದರೊಂದಿಗೆ ಸ್ಟೈಲಿಶ್ ಆಗಿಯೂ ಬಿಂಬಿಸುತ್ತಿವೆ.
ಲೇಯರ್ ಲುಕ್ಗೆ ಸಾಥ್ ನೀಡುವ ಉಲ್ಲನ್ ಟೋಪಿಗಳು
ಹುಡುಗ-ಹುಡುಗಿಯರು, ಮಹಿಳೆಯರು, ಪುರುಷರು, ಹಿರಿಯರು, ಮಕ್ಕಳು ಹೀಗೆ ಎಲ್ಲಾ ವಯಸ್ಸಿನವರಿಗೂ ಹೊಂದುವಂತಹ ಕಲರ್ಫುಲ್ ಲೈಟ್ವೇಟ್ ಟ್ರಾವೆಲ್ ಉಲ್ಲನ್ ಟೋಪಿಗಳು ಈಗಾಗಲೇ ಟ್ರೆಂಡಿಯಾಗಿದ್ದು, ಈ ಸೀಸನ್ನ ಲೇಯರ್ ಲುಕ್ಗೆ ಸಾಥ್ ನೀಡುತ್ತಿವೆ.
ಅತ್ಯಾಕರ್ಷಕ ಚಿಣ್ಣರ ಟೋಪಿ
ಚಿಣ್ಣರಿಗೆ ವೈಬ್ರೆಂಟ್ ಡಿಸೈನ್ನ ಮಂಕಿ ಕ್ಯಾಪ್ನಂತವು, ಕಿವಿ ಮುಚ್ಚುವ ಟೋಪಿ ಹಾಗೂ ಸ್ಕಾರ್ಫ್ ಮಿಕ್ಸ್ ಮ್ಯಾಚ್ ಡಿಸೈನ್ವು , ಟೈಯಿಂಗ್ ಟೋಪಿಗಳು, ಕಾರ್ಟೂನ್ ಕ್ಯಾರೆಕ್ಟರ್ ಚಿತ್ತಾರಗಳಿರುವ ಪ್ರಿಂಟ್ಸ್ನವು ಟ್ರೆಂಡಿಯಾಗಿವೆ.
ಯಂಗ್ಸ್ಟರ್ಸ್ ಉಲ್ಲನ್ ಟೋಪಿ ಫ್ಯಾಷನ್
ಕಾಲೇಜ್ ಹುಡುಗ-ಹುಡುಗಿಯರ ವೀಕೆಂಡ್ ಔಟಿಂಗ್ ಹಾಗೂ ಟ್ರಾವೆಲ್ ಫ್ಯಾಷನ್ಗೆ ಹಾಗೂ ಫಂಕಿ ಸ್ಟೈಲ್ಗೆ ಸೂಟ್ ಆಗುವಂತೆ ಬೀನ್, ಫ್ರೆಂಚ್ ಸ್ಟೈಲ್, ಸ್ಕಲ್, ಟರ್ಬನ್, ಪೋಮ್ ಪೋಮ್, ಮಫ್ಲರ್ ಕ್ಯಾಪ್ ಸೇರಿದಂತೆ ನಾನಾ ಬಗೆಯವು ಯೂನಿಸೆಕ್ಸ್ ಡಿಸೈನ್ನಲ್ಲಿ ಟ್ರೆಂಡಿಯಾಗಿವೆ.
ಹೊಸ ಲುಕ್ನಲ್ಲಿ ಟೋಪಿಗಳು
ಹೊಸ ಬಗೆಯ ಪೋಮ್ ಪೋಮ್ ಉಲ್ಲನ್ ಟೋಪಿಗಳು ಹೊಸ ಕಲರ್ನಲ್ಲಿ ಕಾಣಿಸಿಕೊಂಡಿವೆ. ಮಹಿಳೆಯರ ವಿಷಯಕ್ಕೆ ಬಂದಲ್ಲಿ, ಎಥ್ನಿಕ್ ಸ್ಟೈಲ್ಗೆ ಉಲ್ಲನ್ ಟೋಪಿ ಧರಿಸದ ಕಾರಣ ಮಫ್ಲರ್ ಶೈಲಿಯವು ಮಾತ್ರ ಬಿಡುಗಡೆಗೊಂಡಿವೆ. ಪುರುಷರಿಗೆ ಹಳೇ ಡಿಸೈನ್ನ ಸಿಂಪಲ್ ಹಾಗೂ ಸ್ಟ್ರೈಪ್ಸ್ನವು ಬಿಡುಗಡೆಗೊಂಡಿವೆ.
ಈ ಸುದ್ದಿಯನ್ನೂ ಓದಿ | Reliance Jio: ಜಿಯೋ ಪೇಮೆಂಟ್ಸ್ ಬ್ಯಾಂಕ್ನಿಂದ ವಿಶೇಷ ಕೊಡುಗೆ; ಹೊಸ ಖಾತೆದಾರರಿಗೆ 5 ಸಾವಿರ ಮೌಲ್ಯದ ರಿವಾರ್ಡ್ಸ್!
ಉಲ್ಲನ್ ಟೋಪಿ ಫ್ಯಾಷನ್ ಟಿಪ್ಸ್
- ಆದಷ್ಟೂ ಫಿಟ್ ಆಗಿ ಕೂರುವಂತಹ ಟೋಪಿಗಳನ್ನು ಆಯ್ಕೆ ಮಾಡಿ.
- ಫೋಟೋಶೂಟ್ಗಳಲ್ಲಿ ಇವು ಆಕರ್ಷಕವಾಗಿ ಕಾಣುತ್ತವೆ
- ಟೋಪಿಗಳು ಕಿವಿಯನ್ನು ಬೆಚ್ಚಗಿಡುತ್ತವೆ. ಕಿವಿ ನೋವು, ತಲೆ ನೋವು ಬಾರದಂತೆ ತಡೆಯುತ್ತವೆ.
- ಉಲ್ಲನ್ ಟೋಪಿಗಳ ನಿರ್ವಹಣೆ ತಿಳಿದುಕೊಂಡಿರಿ.
- ಲೈಟ್ವೇಟ್ ಉಲ್ಲನ್ ಟೋಪಿಗಳನ್ನು ಧರಿಸುವುದು ಕಂಫರ್ಟಬಲ್ ಎಂದೆನಿಸುತ್ತದೆ.
- ಫ್ರೀ ಹೇರ್ಸ್ಟೈಲ್ಗೆ ಸ್ಟೈಲಿಶ್ ಆಗಿ ಧರಿಸಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)