Friday, 27th December 2024

Viral News: ‘ಟ್ರಾಫಿಕ್ ಯಾಕೆ ಭೂಮಿ ಮೇಲಿದೆ..!? : ಉಬರ್ ಇಂಡಿಯಾದಿಂದ ಸಾಂತಾ ಕ್ಲಾಸ್‌ಗೆ ‘ನಾಲ್ಕು ಬೇಡಿಕೆ’, ಇಲ್ಲಿದೆ ಆ ವಿಶ್ ಲಿಸ್ಟ್!

ವಿಶ್ವದೆಲ್ಲೆಡೆ ಕ್ರಿಸ್ಮಸ್ (Christmas) ಸಂಭ್ರಮ. ಕ್ರೈಸ್ತ ಬಾಂಧವರು ಏಸು ಕ್ರಿಸ್ತರು (Jesus Christ) ಭೂಮಿಗೆ ಅವತರಿಸಿದ ಈ ಪುಣ್ಯ ಕ್ಷಣವನ್ನು ಸಂತಸ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಕ್ರಿಸ್ಮಸ್ ಸಂದರ್ಭದಲ್ಲಿ ಮನೆ ಮನೆಗೆ ಬರುವ ಸಾಂತಾಕ್ಲಾಸ್ (Santa Claus) ಕೇಳುಗರ ಆಶೋತ್ತರಗಳನ್ನು ಪೂರೈಸುತ್ತಾರೆ ಎಂಬ ನಂಬಿಕೆಯೂ ಇದೆ. ಇದಕ್ಕೆ ಪೂರಕವಾಗಿ ಉಬರ್ ಇಂಡಿಯಾ (Uber India) ಸಾಂತಾಕ್ಲಾಸ್ ಗೆ ಬರೆದಿರುವ ಕೋರಿಕೆ ಪತ್ರವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು ಎಲ್ಲೆಡೆ ವೈರಲ್ (Viral News) ಆಗುತ್ತಿದೆ. ಹಾಗಾದ್ರೆ, ಏನಿದು ಸ್ಪೆಷಲ್ ಕೋರಿಕೆ? ಏನ್ ಕಥೆ? ನೊಡ್ಕೊಂಡು ಬರೋಣ ಬನ್ನಿ.

ದೇಶದಲ್ಲಿ ಟ್ರಾವೆಲ್ ಸೇವೆಗಳನ್ನು ಒದಗಿಸುತ್ತಿರುವ ಉಬರ್ ಇಂಡಿಯ ಇತ್ತೀಚೆಗೆ ತನ್ನ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ಮಾಡಿರುವ ಪೋಸ್ಟ್ ಒಂದು ಇದಿಗ ನೆಟ್ಟಿಗರ ಗಮನವನ್ನು ಸೆಳೆದಿದೆ. ಕೇಳಿದವರ ಇಷ್ಟಾರ್ಥಗಳನ್ನು ಪೂರೈಸುವ ಸಾಂತಾಕ್ಲಾಸ್ ಗೆ ಉಬರ್ ಇಂಡಿಯಾ ನಾಲ್ಕು ಪ್ರಮುಖ ಬೇಡಿಕೆಗಳನ್ನು ಇರಿಸಿದೆ. ಹಾಗಾದ್ರೆ ಉಬರ್ ಇಂಡಿಯಾದ ಈ ಕೊರಿಕೆ ಲಿಸ್ಟ್ ನಲ್ಲಿ ಏನಿದೆ?

ಇದರಲ್ಲಿ ಮೊದಲನೇ ಕೋರಿಕೆ ಏನಂದ್ರೆ, ಜನರು ಪ್ರತೀ ನಿತ್ಯ ಎದುರಿಸುತ್ತಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕೊಡಿಸುವಂತೆ ಈ ಪತ್ರದಲ್ಲಿ ಕೋರಿಕೆ ಸಲ್ಲಿಸಲಾಗಿದೆ. ಇನ್ನೊಂದು ಕೋರಿಕೆ ಇದಕ್ಕೆ ಸಂಬಂಧಿಸಿದ್ದೇ ಆಗಿದ್ದು, ಪ್ರತಿನಿತ್ಯ ಟ್ರಾವೆಲ್ ಮಾಡುತ್ತಾ ತಮ್ಮ ಆಫೀಸು ಕೆಲಸವನ್ನು ಬ್ಯಾಲೆನ್ಸ್ ಮಾಡಲು ಹೆಣಗಾಡುತ್ತಿರುವವರಿಗೆ ಸಹಾಯ ಮಾಡುವಂತೆ ಸಾಂತಾ ಕ್ಲಾಸ್ ಬಳಿ ಮನವಿ ಸಲ್ಲಿಸಲಾಗಿದೆ.

ಉಬರ್ ಇಂಡಿಯಾ ಸಾಂತಾಕ್ಲಾಸ್ ಗೆ ಸಲ್ಲಿಸಿರುವ ಈ ಮನವಿಯಲ್ಲಿ ‘ಟ್ರಾಫಿಕ್’ ಎಂಬ ಪದವನ್ನೇ ಈ ಭೂಮಿಯಿಂದಲೇ ಅಳಿಸಿ ಹಾಕುವಂತೆ ಕೋರಿಕೊಳ್ಳಲಾಗಿದೆ. ‘ಟ್ರಾಫಿಕ್ ಕಾ ಕಾನ್ಸೆಪ್ಟ್ ಹಿ ದುನಿಯಾ ಸೆ ಮಿಟಾ ದೋ’ ಎಂಬ ಕೊರಿಕೆಯನ್ನು ಸಲ್ಲಿಸಲಾಗಿದೆ. ಎರಡನೇ ಕೋರಿಕೆಯಲ್ಲಿ, ‘ಪರ್ಮನೆಂಟ್ ವರ್ಕ್ ಫ್ರಂ ಪಹಾಡ್ ಕರ್ವಾ ದೋ’, ಅಂದ್ರೆ ಎಲ್ಲರಿಗೂ ಪರ್ಮನೆಂಟಾಗಿ ಬೆಟ್ಟದಿಂದಲೇ ಕೆಲಸ ಮಾಡುವಂತಹ ಸೌಲಭ್ಯ ಕೊಡ್ಸಪ್ಪಾ – ಎಂದಿದೆ.

ಇದರೊಂದಿಗೆ, ಜನರಿಗೆ ಕೊಲ್ಡ್ ಪ್ಲೇ ಟಿಕೆಟ್ ಗಳನ್ನು ಕ್ರಿಸ್ಮಸ್ ಉಡುಗೊರೆಯಾಗಿ ಜನರಿಗೆ ತಂದು ಕೊಡುವಂತೆ ಉಬರ್ ಕೋರಿಕೆ ಸಲ್ಲಿಸಿದೆ.

ಈ ಸುದ್ದಿಯನ್ನೂ ಓದಿ: Viral Video: AI ಚಮತ್ಕಾರದಿಂದ ಸಾಂತಾಕ್ಲಾಸ್ ವೇಷದಲ್ಲಿ ಕಾಣಿಸಿಕೊಂಡ ಕೇಜ್ರಿವಾಲ್;‌ ವಿಡಿಯೊ ಫುಲ್‌ ವೈರಲ್!

ಇನ್ನು, ನಾಲ್ಕನೇ ಮತ್ತು ಕೊನೆಯ ಕೋರಿಕೆ ಮಾತ್ರ ಜಬರ್ದಸ್ತಾಗಿದೆ. ‘ಏಕ್ ಕ್ರೋರ್ ಬ್ಯಾಂಕ್ ಬ್ಯಾಲೆನ್ಸ್ ಕರ್ವಾ ದೋ..’ ಅಂದ್ರೆ ಎಲ್ಲರ ಬ್ಯಾಂಕ್ ಅಕೌಂಟ್ ನಲ್ಲೂ ಒಂದು ಕೋಟಿ ಬ್ಯಾಂಕ್ ಬ್ಯಾಲೆನ್ಸ್ ಕೊಡ್ಸಪ್ಪಾ.. ಎಂದು! ಇದನ್ನು ಕೇಳಿ ಮಾತ್ರ ಸಾಂತಾಕ್ಲಾಸ್ ಗೇ ಒಮ್ಮೆ ಶಾಕ್ ಆಗ್ಬಹುದೇನೋ!? ಕ್ರಿಸ್ಮಸ್ ಸಂಭ್ರಮಕ್ಕೆ ಉಬರ್ ಇಂಡಿಯಾ ಸಾಂತಾಕ್ಲಾಸ್ ಬಳಿ ಇಟ್ಟಿರುವ ಉಡುಗೊರೆಗಳ ಬೇಡಿಕೆ ಹಾಸ್ಯಮಯವಾಗಿದ್ರೂ, ಪ್ರಸ್ತುತ ಜಗತ್ತೇ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕೊಡ್ಸಪ್ಪಾ ಎಂದು ಕೇಳಿಕೊಂಡಂತಿದೆ. ಉಬರ್ ಇಂಡಿಯಾ ಈ ಪೋಸ್ಟನ್ನ ತನ್ನ ಇನ್ ಸ್ಟಾಗ್ರಾಂ ಅಕೌಂಟಿನಲ್ಲಿ ಪೋಸ್ಟ್ ಮಾಡಿದ ಕೂಡಲೇ ನೂರಕ್ಕೂ ಹೆಚ್ಚು ಲೈಕ್ ಗಳು ಬಂದಿವೆ. ಮತ್ತು ಹಲವರು ಇದಕ್ಕೆ ಮೆಚ್ಚುಗೆ ಸೂಚಿಸಿ ಕಮೆಂಟ್ ಮಾಡಿದ್ದಾರೆ.