Thursday, 26th December 2024

BBK 11: ಅದಲು-ಬದಲಾದ ರೆಸಾರ್ಟ್ ಆಟ: ಟೊಂಕ-ಕಟ್ಟಿ ನಿಂತ ರಜತ್

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಈಗ ರೆಸಾರ್ಟ್ ಆಟ ನಡೆಯುತ್ತಿದೆ. ದೊಡ್ಮನೆ ರೆಸಾರ್ಟ್ ಆಗಿ ಪರಿವರ್ತನೆಯಾಗಿದೆ. ಮಂಗಳವಾರ ಮನೆಯ 10 ಸದಸ್ಯರನ್ನು ತಲಾ 5 ಜನರಂತೆ ಎರಡು ಗುಂಪುಗಳಾಗಿ ವಿಂಗಡನೆ ಮಾಡಲಾಗಿದೆ. ಒಂದು ತಂಡದಲ್ಲಿ ಚೈತ್ರಾ ಕುಂದಾಪುರ, ಐಶ್ವರ್ಯಾ ಸಿಂಧೋಗಿ, ಮಂಜು, ಗೌತಮಿ ಹಾಗೂ ಹನುಮಂತ ಇದ್ದರೆ ಮತ್ತೊಂದು ಟೀಮ್​ನಲ್ಲಿ ತ್ರಿವಿಕ್ರಮ್​, ಭವ್ಯಾ ಗೌಡ, ಧನರಾಜ್​, ರಜತ್​ ಹಾಗೂ ಮೋಕ್ಷಿತಾ ಇದ್ದಾರೆ.

ಮೊದಲಿಗೆ ಭವ್ಯಾ ತಂಡ ಉಳಿದ ಸದಸ್ಯರ ಸೇವೆ ಮಾಡಬೇಕು ಎಂದು ಬಿಗ್ ಬಾಸ್ ಆದೇಶಿಸಿದ್ದರು. ಅಂದರೆ ಚೈತ್ರಾ ಟೀಮ್​ನ ಅತಿಥಿಗಳಿಗೆ ಬೇಕಾದ ಎಲ್ಲ ಸೌಕರ್ಯ ಮಾಡಿಕೊಡಬೇಕು. ಅತಿಥಿಗಳು ಹೇಳಿದ ಎಲ್ಲಾ ಕೆಲಸವನ್ನು ಮಾಡಿಕೊಡಬೇಕು. ಮನೆಯನ್ನು ಕೂಡ ಕ್ಲೀನ್ ಮಾಡಬೇಕು. ಇದನ್ನು ಭರ್ಜರಿಯಾಗಿ ಉಪಯೋಗಿಸಿಕೊಂಡ ಮಂಜು-ಚೈತ್ರಾ ಪದೇ ಪದೇ ಜ್ಯೂಸ್ ಮಾಡಲು ಹೇಳಿದ್ದು, ಮಧ್ಯ ರಾತ್ರಿ ಮ್ಯೂಸಿಕಲ್ ನೈಟ್ ಬೇಕು ಎಂದಿದ್ದು ಹೀಗೆ ಅನೇಕ ಸೌಲಭ್ಯವನ್ನು ಪಡೆದುಕೊಂಡಿದ್ದರು.

ಇದೀಗ ಈ ರೆಸಾರ್ಟ್ ಆಟ ಅದಲು-ಬದಲಾಗಿದೆ. ಅತಿಥಿಗಳಾಗಿದ್ದವರು ಇಂದು ಕೆಲಸಗಾರರಾಗಿದ್ದಾರೆ. ನಿನ್ನೆ ಕೆಲಸಗಾರರಾಗಿದ್ದರು ಇಂದು ಅತಿಥಿಗಳಾಗಿದ್ದಾರೆ. ಭವ್ಯಾ ಅವರ ತಂಡ ಅತಿಥಿಗಳಾಗಿ, ಚೈತ್ರಾ ಅವರ ತಂಡ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಬೇಕೆಂದು ಬಿಗ್​ ಬಾಸ್​ ಸೂಚಿಸಿದ್ದಾರೆ. ಅದರಂತೆ ಆಟ ಶುರುಮಾಡಿಕೊಂಡಿದ್ದಾರೆ. ರಜತ್​, ತ್ರಿವಿಕ್ರಮ್​, ಮೋಕ್ಷಿತಾ, ಭವ್ಯಾ ಗೌಡ, ಧನರಾಜ್​​ ಇವರ ಅಸಲಿ ಆಟ ಈಗ ಬಿಗ್​ಬಾಸ್​ ಮನೆಯಲ್ಲಿ ಶುರುವಾಗಿದೆ. ನಿನ್ನೆ ಮಾಡಿದ ಎಲ್ಲ ಕೆಲಸವನ್ನು ಭವ್ಯಾ ತಂಡ ಚಾಚು ತಪ್ಪದೇ ವಾಪಸ್​ ತರುತ್ತಿದೆ.

ಧನರಾಜ್​​​ ಬೆಡ್​ ರೂಮ್​ ಏರಿಯಾವನ್ನು ಅವ್ಯವಸ್ಥಿತ ಮಾಡಿಬಿಟ್ಟಿದ್ದಾರೆ. ಬೆಡ್​ಶೀಟ್​​ನಿಂದ ಹಿಡಿದು ವಸ್ತುಗಳನ್ನು ಎತ್ತೆಸೆದಿದ್ದಾರೆ. ರಜತ್‌ ಅಂತೂ ಗೌತಮಿಗೆ ಇನ್ನು ಮುಂದೆ ಬರೀ ನೆಗಟಿವ್‌ ಪಾಸಿಟಿವ್‌ ಏನಿಲ್ಲ ಎಂದಿದ್ದಾರೆ. ಚೈತ್ರಾಗಂತೂ ಪೊರಕೆ ಕೊಟ್ಟು ಸಖತ್‌ ಬೆಂಡೆತ್ತಿದ್ದಾರೆ. ಇಂದಿನ ಸಂಚಿಕೆಯಲ್ಲಿ ರಜತ್‌ ಎದುರಾಳಿಗೆ ತಂಡದವರಿಗೆ ಸಖತ್ ಕ್ವಾಟ್ಲೆ ಕೊಟ್ಟಿದ್ದಾರೆ. ಎದುರಾಳಿಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡುವ ಶಪಥ ಮಾಡಿದ್ದ ರಜತ್ ಅಕ್ಷರಶಃ ಇದನ್ನು ಪಾಲಿಸುತ್ತಿದ್ದಾರೆ.

BBK 11: ಬಿಗ್ ಬಾಸ್ ಮನೆಯಲ್ಲಿ ಮಿಡ್ ನೈಟ್ ಫೈಟ್: ಮಿತಿ ಮೀರಿತಾ ಅತಿಥಿಗಳ ವರ್ತನೆ?