ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ಗುರುವಾರ ಆರಂಭವಾಗಲಿರುವ ನಾಲ್ಕನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ (IND vs AUS) ಪಂದ್ಯದಲ್ಲಿ ಭಾರತ ತಂಡದ ಹಿರಿಯ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಸ್ಪಿನ್ ಆಲ್ರೌಂಡರ್ ರವೀಂದ್ರ ಜಡೇಜಾ ವಿಶೇಷ ದಾಖಲೆ ಬರೆಯುವ ಸನಿಹಲ್ಲಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಡಿಸೆಂಬರ್ 26 ರಿಂದ ಪ್ರಾರಂಭವಾಗಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯಲಿದೆ. ಉಭಯ ತಂಡಗಳ ನಡುವಣ ಈ ಸರಣಿಯು ಪ್ರಸ್ತುತ 1-1 ಸಮಬಲದಲ್ಲಿದೆ. ಇದೀಗ ಎರಡೂ ತಂಡಗಳು ಮೆಲ್ಬರ್ನ್ನಲ್ಲಿ ಮುನ್ನಡೆ ಸಾಧಿಸಲು ಪ್ರಯತ್ನಿಸಲಿವೆ. ಅದರಲ್ಲೂ ಟೀಮ್ ಇಂಡಿಯಾಗೆ ಎಂಸಿಜಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಲು ಇದೊಂದು ಉತ್ತಮ ಅವಕಾಶ.
ಆದರೆ, ಇದಕ್ಕಾಗಿ ಭಾರತ ತಂಡದ ಆಟಗಾರರು ದಿಟ್ಟ ಪ್ರದರ್ಶನ ನೀಡಬೇಕಿದೆ. ಅದರಲ್ಲೂ ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ. ಈ ಇಬ್ಬರು ಆಟಗಾರರು ಮೆಲ್ಬರ್ನ್ ಮೈದಾನದಲ್ಲಿ ತಮ್ಮ ಮ್ಯಾಜಿಕ್ ಪ್ರದರ್ಶಿಸಿದರೆ ತಂಡಕ್ಕೆ ಜಯದ ಹಾದಿ ಸುಲಭವಾಗುತ್ತದೆ. ಇದರೊಂದಿಗೆ ಇವರಿಬ್ಬರಿಗೂ ಟೆಸ್ಟ್ ಕ್ರಿಕೆಟ್ನಲ್ಲಿ ದೊಡ್ಡ ದಾಖಲೆ ಬರೆಯುವ ಅವಕಾಶವಿದೆ.
IND vs AUS: ಶುಭಮನ್ ಗಿಲ್ ಔಟ್, ಬಾಕ್ಸಿಂಗ್ ಡೇ ಟೆಸ್ಟ್ಗೆ ಭಾರತ ತಂಡದಲ್ಲಿ ಒಂದು ಬದಲಾವಣೆ ಸಾಧ್ಯತೆ!
ಜಸ್ಪ್ರೀತ್ ಬುಮ್ರಾಗೆ 6 ವಿಕೆಟ್ ಅಗತ್ಯ
ಪ್ರಸ್ತುತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಬುಮ್ರಾ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಈ ಸರಣಿಯಲ್ಲಿ ಇದುವರೆಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಬುಮ್ರಾ. ಬುಮ್ರಾ ಈ ಸರಣಿಯ ಮೂರು ಪಂದ್ಯಗಳಲ್ಲಿ 21 ವಿಕೆಟ್ಗಳನ್ನು ಗಳಿಸಿದ್ದಾರೆ. ಇವರು ಮೆಲ್ಬರ್ನ್ನಲ್ಲಿ ಭಾರತದ ಪರ ತಮ್ಮ ವೃತ್ತಿಜೀವನದ 44ನೇ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ. ರೆಡ್ ಬಾಲ್ ಕ್ರಿಕೆಟ್ನಲ್ಲಿ ಜಸ್ಪ್ರೀತ್ ಬುಮ್ರಾ ಅವರ ಖಾತೆಯಲ್ಲಿ ಬುಮ್ರಾ ಅವರ ಹೆಸರಿನಲ್ಲಿ 194 ವಿಕೆಟ್ಗಳಿವೆ. ಇದೀಗ ಇವರಿಗೆ 200ರ ಗಡಿ ತಲುಪಲು ಕೇವಲ 6 ವಿಕೆಟ್ಗಳ ಅಗತ್ಯವಿದೆ. ಪ್ರಸ್ತುತ ಶ್ರೇಷ್ಠ ಫಾರ್ಮ್ನಲ್ಲಿರುವ ಅವರು ಮೆಲ್ಬರ್ನ್ನಲ್ಲಿ ಈ ಸಾಧನೆ ಮಾಡಬಹುದೆಂದು ನಿರೀಕ್ಷಿಸಲಾಗಿದೆ.
There is no substitute for hard work.
— BCCI (@BCCI) December 21, 2024
The relentless effort behind the scenes translates into success on the field. The Indian bowlers are ticking every box as we get ready for the Boxing Day Test 🔥🔥#AUSvIND #TeamIndia pic.twitter.com/ikNQjJz77b
600 ವಿಕೆಟ್ಗಳ ಸನಿಹದಲ್ಲಿ ರವೀಂದ್ರ ಜಡೇಜಾ
ಜಸ್ಪ್ರೀತ್ ಬುಮ್ರಾ ಹೊರತಾಗಿ ರವೀಂದ್ರ ಜಡೇಜಾ ಕೂಡ ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ವಿಶೇಷ ದಾಖಲೆ ಬರೆಯಬಹುದು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಜಡೇಜಾ 600 ಅಂತಾರಾಷ್ಟ್ರೀಯ ವಿಕೆಟ್ ಪಡೆದ ಸಾಧನೆ ಮಾಡುವ ಸಾಧ್ಯತೆ ಇದೆ. ಈ ಸಾಧನೆ ಮಾಡಲು ಜಡೇಜಾಗೆ ಕೇವಲ 7 ವಿಕೆಟ್ಗಳ ಅಗತ್ಯವಿದೆ. ಜಡೇಜಾ ಆಸ್ಟ್ರೇಲಿಯಾ ವಿರುದ್ಧದ ಎರಡೂ ಇನಿಂಗ್ಸ್ಗಳಲ್ಲಿ 7 ವಿಕೆಟ್ ಪಡೆದರೆ, ಭಾರತದ ಪರ 600 ಅಂತಾರಾಷ್ಟ್ರೀಯ ವಿಕೆಟ್ ಪಡೆದ ಐದನೇ ಬೌಲರ್ ಎನಿಸಿಕೊಳ್ಳಲಿದ್ದಾರೆ.
ಭಾರತದ ಸಂಭಾವ್ಯ ಪ್ಲೇಯಿಂಗ್ XI
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ರವೀಂದ್ರ ಜಡೇಜಾ, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್
ಈ ಸುದ್ದಿಯನ್ನು ಓದಿ: Jasprit Bumrah: ಕಪಿಲ್, ಇಶಾಂತ್ ದಾಖಲೆ ಮುರಿದ ಬುಮ್ರಾ