Friday, 27th December 2024

Gold Price Today: ಚಿನ್ನದ ದರದಲ್ಲಿ ಸತತ ಎರಡನೇ ದಿನವೂ ಏರಿಕೆ

Gold Price Today

ಬೆಂಗಳೂರು:  ಚಿನ್ನದ ದರ ಇಂದು ಕೊಂಚ ಏರಿಕೆ ಕಂಡಿದೆ (Gold Price Today). ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು(ಡಿ.26) 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ ತಲಾ 25 ರೂ. ಮತ್ತು 28ರೂ. ಏರಿಕೆ ಆಗಿದೆ. ಈ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,125 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,773 ರೂ.ರಷ್ಟಿದೆ.

22 ಕ್ಯಾರಟ್‌ ಚಿನ್ನದ ದರಗಳ ವಿವರ

22 ಕ್ಯಾರಟ್‌ನ 8 ಗ್ರಾಂ ಚಿನ್ನ 57,000 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 71,250 ರೂ. ಮತ್ತು 100 ಗ್ರಾಂಗೆ 7,12,500 ರೂ. ಪಾವತಿಸಬೇಕಾಗುತ್ತದೆ.

24 ಕ್ಯಾರಟ್‌ ಚಿನ್ನದ ದರಗಳ ವಿವರ

24 ಕ್ಯಾರಟ್‌ನ 8 ಗ್ರಾಂ ಚಿನ್ನ 62,184 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 77,730 ರೂ. ಮತ್ತು 100 ಗ್ರಾಂಗೆ 7,77,300 ರೂ. ಪಾವತಿಸಬೇಕಾಗುತ್ತದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
 ಬೆಂಗಳೂರು7,125 ರೂ.7,773 ರೂ.
 ದಿಲ್ಲಿ7,140 ರೂ.7,788 ರೂ.
 ಮುಂಬೈ7,125 ರೂ.7,773 ರೂ.
 ಚೆನ್ನೈ7,125 ರೂ.7,773 ರೂ.
 ಹೈದರಾಬಾದ್7,125 ರೂ.7,773 ರೂ.

ಬೆಳ್ಳಿ ಬೆಲೆ

ಇತ್ತ ಬೆಳ್ಳಿ ಬೆಲೆಯಲ್ಲೂ ಏರಿಕೆ ಆಗಿದೆ. ಬೆಳ್ಳಿ 1 ಗ್ರಾಂನ ಬೆಲೆ 91.60 ರೂ., 8 ಗ್ರಾಂಗೆ 732.80 ರೂ., 10 ಗ್ರಾಂಗೆ 916 ರೂ. ಮತ್ತು 1 ಕೆಜಿಗೆ 91,600 ರೂ. ಪಾವತಿಸಬೇಕಾಗುತ್ತದೆ.

ಚಿನ್ನದ ಬೆಲೆ ಏರಿಕೆಗೆ ಕಾರಣ

ಭಾರತದಲ್ಲಿ ಚಿನ್ನದ ದರ ಪ್ರತಿ ದಿನ ಏರಳಿತವಾಗುತ್ತಲೇ ಇರುತ್ತದೆ. ಅದರಲ್ಲಿಯೂ ಚಿನ್ನದ ಬೆಲೆ ಹೆಚ್ಚಳಕ್ಕೆ ಹಲವು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದುದು ಯಾವುವು ಎನ್ನುವುದನ್ನು ನೋಡೋಣ.

ಬೇಡಿಕೆ ಮತ್ತು ಪೂರೈಕೆ: ಹಬ್ಬಗಳು ಮತ್ತು ಮದುವೆ ಋತುವಿನಲ್ಲಿ ಚಿನ್ನಾಭರಣಗಳಿಗೆ ಬೇಡಿಕೆ ಹೆಚ್ಚಾಗಿ ದರ ವೃದ್ಧಿಯಾಗುತ್ತದೆ. ಅದೇ ರೀತಿ ಪೂರೈಕೆಯಲ್ಲಿನ ಅಡೆತಡೆಗಳು ಕೂಡ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಸರ್ಕಾರದ ನೀತಿ: ಸರ್ಕಾರ ಆಮದು ಸುಂಕ, ತೆರಿಗೆ ಹೆಚ್ಚಿಸಿದರೆ ಚಿನ್ನದ ಬೆಲೆಯಲ್ಲಿಯೂ ಏರಿಕೆಯಾಗುತ್ತದೆ. ಹಣದುಬ್ಬರಕ್ಕೆ ಸಂಬಂಧಿಸಿದ ಸರ್ಕಾರದ ನೀತಿಗಳು ಚಿನ್ನದ ದರದ ಮೇಲೆ ಪ್ರಭಾವ ಬೀರುತ್ತದೆ. ಸರ್ಕಾರಗಳ ದೊಡ್ಡ ಪ್ರಮಾಣದ ಖರೀದಿ ಅಥವಾ ಮಾರಾಟವು ಚಿನ್ನದ ಮಾರುಕಟ್ಟೆಯಲ್ಲಿ ಅಲೆಗಳನ್ನು ಸೃಷ್ಟಿಸುತ್ತದೆ.

ಹಣದುಬ್ಬರ: ಚಿನ್ನವನ್ನು ಸಾಮಾನ್ಯವಾಗಿ ಹಣದುಬ್ಬರದ ವಿರುದ್ಧ ಹೂಡಿಕೆ ಎಂದು ಪರಿಗಣಿಸಲಾಗಿದೆ. ದೇಶದಲ್ಲಿ ಹೊಸ ನೋಟು, ನಾಣ್ಯಗಳನ್ನು ಹೊರತರಬೇಕಾದರೆ ಅಷ್ಟೇ ಪ್ರಮಾಣದ ಚಿನ್ನವನ್ನು ಆರ್‌ಬಿಐ (RBI) ತೆಗೆದಿರಿಸುತ್ತದೆ. ದೇಶದಲ್ಲಿ ಹಣದುಬ್ಬರದ ಒತ್ತಡದಿಂದಾಗಿ ಕರೆನ್ಸಿಗಳ ಮೌಲ್ಯ ಕಡಿಮೆಯಾಗುತ್ತದೆ. ಆಗ ಚಿನ್ನದ ಬೆಲೆ ತನ್ನಿಂತಾನೇ ಏರಿಕೆಯಾಗುತ್ತದೆ.

ಕಡಿಮೆ ಬಡ್ಡಿ ದರಗಳು: ಬ್ಯಾಂಕ್‌ಗಳಲ್ಲಿ ಬಡ್ಡಿ ದರಗಳು ಕಡಿಮೆಯಾದಾಗ ಜನರಲ್ಲಿ ಹಣದ ಹರಿವಿನ ಪ್ರಮಾಣ ಹೆಚ್ಚಳವಾಗುತ್ತದೆ. ಇದರಿಂದ ಚಿನ್ನ ಖರೀದಿ ಪ್ರಮಾಣ ಹೆಚ್ಚಾಗುತ್ತದೆ. ಇದು ಚಿನ್ನದ ಬೇಡಿಕೆ ಹೆಚ್ಚಾಗಿ ಬೆಲೆ ವೃದ್ಧಿಗೆ ದಾರಿ ಮಾಡಿಕೊಡುತ್ತದೆ.

ಈ ಸುದ್ದಿಯನ್ನೂ ಓದಿ:Tata Power and Tata Motors: ವಿದ್ಯುತ್ ವಾಣಿಜ್ಯ ವಾಹನಗಳಿಗಾಗಿ 200 ಫಾಸ್ಟ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಎಂಓಯು ಗೆ ಸಹಿ ಹಾಕಿದ ಟಾಟಾ ಪವರ್ ರಿನೀವೇಬಲ್ ಎನರ್ಜಿ ಮತ್ತು ಟಾಟಾ ಮೋಟಾರ್ಸ್