Friday, 27th December 2024

Gutka Seize: ಭರ್ಜರಿ ಪೊಲೀಸ್‌ ಕಾರ್ಯಾಚರಣೆ- ಬ್ಯಾನ್‌ ಆಗಿರುವ 8.42 ಲಕ್ಷ ರೂ. ಮೌಲ್ಯದ ಗುಟ್ಕಾ ಸೀಜ್‌

gutka

ಥಾಣೆ: ಮಹಾರಾಷ್ಟ್ರದ ಥಾಣೆಯಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ 8.42 ಲಕ್ಷ ರೂ. ಮೌಲ್ಯದ ಗುಟ್ಕಾಗಳನ್ನು ಸೀಜ್(Gutka Seize) ಮಾಡಿದ್ದಾರೆ. ಥಾಣೆಯಲ್ಲಿ ಬ್ಯಾನ್‌ ಆಗಿರುವ ಗುಟ್ಕಾ ಹೊತ್ತು ಸಾಗುತ್ತಿದ್ದ ಟೆಂಪೋವನ್ನು ಅಡ್ಡಗಟ್ಟಿ ಅದನ್ನು ವಶ‍ಕ್ಕೆ ಪಡೆದಿದ್ದು,ಚಾಲಕನನ್ನು ಅರೆಸ್ಟ್‌ ಮಾಡಿದ್ದಾರೆ. ಭಿವಂಡಿ ಪ್ರದೇಶದ ಕರಿವಾಲಿ ಪೊಲೀಸ್‌ ಚೌಕಿ ಎದುರು ಈ ಘಟನೆ ನಡೆದಿದೆ.

ಪೊಲೀಸ್‌ ಚೌಕಿ ಎದುರು ಎಂದಿನಂತೆ ಪೊಲೀಸರು ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ ಗುಟ್ಕಾ ಸಾಗಿಸುತ್ತಿರುವುದು ಪತ್ತೆಯಾಗಿದೆ ಎಂದು ಭೋಯಿವಾಡ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.ಗುಟ್ಕಾ ವಶಪಡಿಸಿಕೊಂಡು ವಾಹನವನ್ನು ಜಪ್ತಿ ಮಾಡಲಾಗಿದೆ. ಅಲ್ಲದೇ 39 ವರ್ಷದ ಟೆಂಪೋ ಚಾಲಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ವಿಚಾರಣೆ ವೇಳೆ, ಗೈಬಿಬಿ ನಗರದ ವ್ಯಕ್ತಿಯೊಬ್ಬರು ಸ್ಟಾಕ್ ಆರ್ಡರ್ ಮಾಡಿರುವುದಾಗಿ ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಅವರು ಹೇಳಿದರು. ಆರೋಪಿಗಳ ವಿರುದ್ಧ ಸಂಬಂಧಿತ ಕಾನೂನು ನಿಬಂಧನೆಗಳ ಅಡಿಯಲ್ಲಿ ಬುಧವಾರ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಾರಾಮುಲ್ಲಾ(Baramulla) ಜಿಲ್ಲೆಯಲ್ಲಿ ಡ್ರಗ್ ಪೆಡ್ಲರ್‌ಗೆ ಸೇರಿದ 1.72 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದರು ಎಂದು ತಿಳಿದು ಬಂದಿದೆ. ಡ್ರಗ್ ದಂಧೆಕೋರರ ವಿರುದ್ಧ ಕ್ರಮವನ್ನು ಮುಂದುವರಿಸಿರುವ ಪೊಲೀಸರು ಜಮ್ಮುವಿನ ತ್ರಿಕಂಜನ್ ಬೋನಿಯಾರ್‌ನಲ್ಲಿರುವ ಎರಡು ಅಂತಸ್ತಿನ ವಸತಿ ಮನೆ, ಟಿಪ್ಪರ್ ಹಾಗೂ ನಾಲ್ಕು ಚಕ್ರದ ವಾಹನವನ್ನು ಜಪ್ತಿ ಮಾಡಿದ್ದರು. ಈ ಆಸ್ತಿ ಕುಖ್ಯಾತ ಡ್ರಗ್ ಪೆಡ್ಲರ್ ರಫೀಕ್ ಅಹ್ಮದ್ ಖಾನ್ ಅಲಿಯಾಸ್ ರಫಿ ರಫಾ ಪುತ್ರನಿಗೆ ಸೇರಿರುವುದಾಗಿದೆ.

985 ರ ಎನ್‌ಡಿಪಿಎಸ್ ಕಾಯಿದೆಯ ಸೆಕ್ಷನ್ 68-ಎಫ್ (1) ಹಾಗೂ 68-ಇ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರು ನಡೆಸಿದ ತನಿಖೆಯಲ್ಲಿ ಈ ಆಸ್ತಿ ಅಕ್ರಮವಾಗಿ ಸಂಪಾದಿಸಿದ್ದು ಎಂದು ತಿಳಿದುಬಂದಿದೆ. ಮಾದಕವಸ್ತುಗಳು ಹಾಗೂ ಸೈಕೋಟ್ರೋಪಿಕ್ ವಸ್ತುಗಳ ಅಕ್ರಮ ಸಾಗಣೆಯಿಂದ ಆಸ್ತಿಯನ್ನು ಗಳಿಸಿದ್ದಾರೆ ಹಾಗೂ ಕೆಲ ಡ್ರಗ್‌ ಪಡ್ಲರ್‌ಗಳಿಗೆ ಉಗ್ರರ ನಂಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಸಾಂತಾಕ್ಲಾಸ್ ವೇಷ ಧರಿಸಿ ಚಿಮಣಿಯೊಳಗೆ ಅಡಗಿ ಕುಳಿತ ಡ್ರಗ್ ಡೀಲರ್! ಈ ವಿಡಿಯೊ ಭಾರೀ ವೈರಲ್‌