Friday, 27th December 2024

Trapped In Borewell: ಬೋರ್‌ವೆಲ್‌ಗೆ ಬಿದ್ದ 3 ವರ್ಷದ ಹಾಲುಗಲ್ಲದ ಕಂದ: 70 ಗಂಟೆಗಳಿಂದ ರಕ್ಷಣಾ ಕಾರ್ಯಾಚರಣೆ!

ಜೈಪುರ: ರಾಜಸ್ಥಾನದ(Rajasthan) ಕೊಟ್ ಪುಟ್ಲಿ ಬೆಹ್ರರ್ ಜಿಲ್ಲೆಯಲ್ಲಿ 700 ಅಡಿ ಆಳದ ಬೋರ್‌ವೆಲ್‌ಗೆ ಮೂರು ವರ್ಷದ ಬಾಲಕಿ ಬಿದ್ದಿದ್ದು, ಆಕೆಯನ್ನು ರಕ್ಷಿಸಲು ಸತತ 70 ಗಂಟೆಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ (Trapped In Borewell).

ಜಮೀನಿನಲ್ಲಿ ಆಟವಾಡುತ್ತಿದ್ದ ವೇಳೆ ಬಾಲಕಿ ಚೇತನಾ ಬೋರ್‌ವೆಲ್‌ಗೆ ಬಿದ್ದಿದ್ದಾಳೆ ಎಂಬ ಮಾಹಿತಿಯಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ಇತರ ಅಧಿಕಾರಿಗಳ ತಂಡಗಳು ಸತತ ಮೂರು ದಿನಗಳಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಆದರೆ ಬೋರ್‌ವೆಲ್‌ ಸುತ್ತಲಿನ ಮಣ್ಣು ತೇವಾಂಶದಿಂದ ಕೂಡಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಸಾಕಷ್ಟು ತೊಂದರೆ ಎದುರಾಗಿದೆ ಎಂದು ಹೇಳಿದ್ದಾರೆ.

ನಾವು ಪೈಲಿಂಗ್ ಯಂತ್ರದಿಂದ 160 ಅಡಿ ಆಳದವರೆಗೆ ಅಗೆಯುತ್ತೇವೆ. ನಾವು ಎರಡು ರೀತಿಯಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದೇವೆ. ಬೋರ್‌ವೆಲ್‌ ಬಳಿ ಜೆಸಿಬಿ ಮೂಲಕ 10 ಅಡಿ ಆಳದ ಹೊಂಡವನ್ನು ಅಗೆಯಲಾಗುತ್ತಿದೆ. ಇನ್ನೊಂದು ಕಡೆ ಪೈಲಿಂಗ್ ಯಂತ್ರದ ಸಹಾಯದಿಂದ ಅಗೆಯಲು ಆರಂಭಿಸಿದ್ದೇವೆ. ಈ ಯಂತ್ರದ ಮೂಲಕ 150 ಅಡಿಗಳಷ್ಟು ಆಳಕ್ಕೆ ಅಗೆಯಲು ಸಾಧ್ಯವಾಗುತ್ತದೆ ಎಂದು ಎನ್ ಡಿಆರ್ ಎಫ್ ಉಸ್ತುವಾರಿ ಯೋಗೇಶ್ ಮೀನಾ ತಿಳಿಸಿದ್ದಾರೆ.

ಬಾಲಕಿಗೆ ಆಮ್ಲಜನಕ ಪೂರೈಸಲು ಆಕ್ಸಿಜನ್ ಪೈಪ್ ಅನ್ನು ಬೋರ್‌ವೆಲ್‌ಗೆ ಇಳಿಸಲಾಗಿದೆ.‌ ಈವರೆಗೆ ನಾಲ್ಕು ಆಂಬ್ಯುಲೆನ್ಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಅಧಿಕಾರಿಗಳ ಪ್ರಕಾರ, ಸೋಮವಾರ (ಡಿ. 23) ಮಧ್ಯಾಹ್ನ ಬಾಲಕಿ ಸುಮಾರು 15 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದಾಳೆ. ಆಕೆಯ ಕುಟುಂಬಸ್ಥರು ಆಕೆಯನ್ನು ಹೊರ ತೆಗೆಯಲು ಯತ್ನಿಸಿದಾಗ ಆಕೆ ಮತ್ತಷ್ಟು ಕೆಳಗೆ ಜಾರಿದ್ದಾಳೆ ಎನ್ನಲಾಗಿದೆ. ನಂತರ ಜೈಪುರದಿಂದ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆ‌ರ್‌ಎಫ್ ತಂಡಗಳನ್ನು ಕರೆಸಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಬಾಲಕಿಯ ಚಲನವಲನಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ರಕ್ಷಕರು ಮಗುವಿನ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇನ್ನು ಮಗುವಿಗೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಬೋರ್‌ವೆಲ್ ಸುತ್ತಲಿನ ಪ್ರದೇಶವನ್ನು ಎಚ್ಚರಿಕೆಯಿಂದ ಅಗೆಯಲು ಮತ್ತು ಭದ್ರಪಡಿಸಲು ವಿಶೇಷ ಉಪಕರಣಗಳು ಮತ್ತು ತಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ.

ಈ ಕ್ಷಣಕ್ಕೂ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸೇರಿದಂತೆ ಅಧಿಕಾರಿಗಳು ಮತ್ತು ರಕ್ಷಣಾ ತಂಡಗಳು ಮಗುವನ್ನು ಅಪಾಯಕಾರಿ ಪರಿಸ್ಥಿತಿಯಿಂದ ಸುರಕ್ಷಿತವಾಗಿ ಹೊರತರಲು ಅವಿರತವಾಗಿ ಶ್ರಮಿಸುತ್ತಿವೆ.

ಈ ಸುದ್ದಿಯನ್ನೂ ಓದಿ: Neet Teacher: ಥೂ… ಕರ್ಮ… ಕೋಚಿಂಗ್‌ ಕ್ಲಾಸ್‌ ಆವರಣದಲ್ಲಿ ಬಯಾಲಜಿ ಶಿಕ್ಷಕನ ಸರಸ ಸಲ್ಲಾಪ;‌ ಪೆನ್‌ಡ್ರೈವ್ ವಿಡಿಯೊ ಫುಲ್‌ ವೈರಲ್!