ನೆಲಮಂಗಲ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನವರಿ 3, 4 ಹಾಗೂ 5ರಂದು ನಡೆಯಲಿರುವ ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್‌ಪೋ ಭಾಗವಹಿಸಲು ನೆಲಮಂಗಲ (Nelamangala News) ನಗರದ ತಾಲೂಕು ಕಚೇರಿ ಎದುರಿನ ಕೆಂಗಲ್ ಹನುಮಂತಯ್ಯ ಸರ್ಕಲ್‌ನಲ್ಲಿ ಆಯೋಜಿಸಿದ್ದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ ನಾರಾಯಣ ಗೌಡ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾರಾಯಣಗೌಡ ಅವರು, ಉದ್ಯಮಿ ಒಕ್ಕಲಿಗ ಎಕ್ಸ್ ಪೋನಲ್ಲಿ ರಾಜ್ಯದ 11 ಕ್ಷೇತ್ರಗಳ ಒಕ್ಕಲಿಗ ಉದ್ಯಮಿಗಳು ಭಾಗವಹಿಸಲಿದ್ದು, ನೂರಕ್ಕೂ ಹೆಚ್ಚು ಒಕ್ಕಲಿಗ ಉದ್ದಿಮೆದಾರರು ತಮ್ಮ ಸೇವೆ ಮತ್ತು ಸರಕುಗಳನ್ನು ಸಮಾವೇಶದಲ್ಲಿ ಪ್ರದರ್ಶಿಸಲಿದ್ದಾರೆ. 12 ಉದ್ಯಮ ಕ್ಷೇತ್ರಗಳ ಬಗ್ಗೆ ಚಿಂತನ ಮಂಥನ, ಒಕ್ಕಲಿಗ ಆಹಾರ ಪದ್ಧತಿ ಪರಿಚಯ, ಸಂಸ್ಕೃತಿ ಪರಿಚಯಿಸುವ ದೇವಿ ಮಹಾತ್ಮೆ ಯಕ್ಷಗಾನ, ಕರ್ನಾಟಕ- ತಮಿಳುನಾಡು ಒಕ್ಕಲಿಗ ಉದ್ಯಮಿಗಳ ಸಮನ್ವಯದ ಚರ್ಚೆ ಹಾಗೂ ಗಂಗವಾಡಿ ರಾಜವಂಶದ ಲಾಂಛನ ಪ್ರದರ್ಶನ ಆಯೋಜಿಸಲಾಗಿದೆ. ನೆಲಮಂಗಲ ಒಕ್ಕಲಿಗ ಉದ್ಯಮಿಗಳು, ಉದ್ಯೋಗ ಆಸಕ್ತರು, ಉದ್ಯೋಗಿಗಳು ಭಾಗವಹಿಸಿ ಎಕ್ಸ್‌ಪೋ ಅನುಕೂಲ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ನೆಲಮಂಗಲ ನಗರದ ತಾಲೂಕು ಕಚೇರಿ ಎದುರಿನ ಕೆಂಗಲ್ ಹನುಮಂತಯ್ಯ ಸರ್ಕಲ್ ನಲ್ಲಿನ ಸದಸ್ಯತ್ವ ಅಭಿಯಾನದ ಸ್ಟಾಲ್‌ಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬೈರನಹಳ್ಳಿ ಪ್ರಕಾಶ್ ಮೂರ್ತಿ, ವಿಜಯ್ ಹೊಸಪಾಳ್ಯ, ಪ್ರೇಸ್ ಕ್ಲಬ್ ಕೌನ್ಸಿಲ್ ಜಿಲ್ಲಾಧ್ಯಕ್ಷ ಮಂಜುನಾಥ್, ಬೆಂಗಳೂರು ನಗರ ಪ್ರೆಸ್ ಕ್ಲಬ್ ಕೌನ್ಸಿಲ್ ಜಿಲ್ಲಾಧ್ಯಕ್ಷ ಭಾನುಪ್ರಕಾಶ್, ಅರಸನಕುಂಟೆ ಗುರುಪ್ರಸಾದ್, ನಗರಸಭೆ ಸದಸ್ಯ ಅಂಜನಮೂರ್ತಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೂದಿಹಾಳ್ ಕಿಟ್ಟಿ, ಗ್ರಾಮಪಂಚಾಯಿತಿ ಸದಸ್ಯ ಸಂದೀಪ್, ಯುವ ಮುಖಂಡ ಲಕ್ಷ್ಮೀನಾರಾಯಣ್, ಮಧು, ಪವನ್ ಹೊಸಪಾಳ್ಯ,ಮಂಡಿಗೆರೆ ವಾಸು ಸೇರಿದಂತೆ ಅನೇಕರು ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿದ್ದರು.
ಈ ಸುದ್ದಿಯನ್ನೂ ಓದಿ | Cultural Competition: ಡಿ.28ಕ್ಕೆ ಪಿಯು ಕಾಲೇಜುಗಳ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ