Saturday, 28th December 2024

Manmohan Singh Passes Away: ವಿವಿಧ ನಾಯಕರೊಂದಿಗೆ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌; Photo Album ಇಲ್ಲಿದೆ

Manmohan Singh Passes Away

ಹೊಸದಿಲ್ಲಿ: ಮಾಜಿ ಪ್ರಧಾನಿ, ದೇಶದ ಹೊಸ ಆರ್ಥಿಕತೆಯ ಪಿತಾಮಹ ಡಾ. ಮನಮೋಹನ್‌ ಸಿಂಗ್‌ (92) ಇನ್ನಿಲ್ಲ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ದಿಲ್ಲಿ ಏಮ್ಸ್‌ ಆಸ್ಪತ್ರೆಯಲ್ಲಿ ನಿದನ ಹೊಂದಿದರು. ಅವರ ನಿಧನಕ್ಕೆ ದೇಶದ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ. ದೇಶದ ಆರ್ಥಿಕತೆಗೆ ಹೊಸ ಚೈತನ್ಯ ನೀಡಿದ ಅವರು ಕೋಟ್ಯಂತರ ಭಾರತೀಯರನ್ನು ಬಡತನದ ಬೇಗೆಯಿಂದ ರಕ್ಷಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಅವರು ವಿವಿಧ ಗಣ್ಯರೊಂದಿಗಿದ್ದ ಅಪರೂಪದ ಫೋಟೊ ಇಲ್ಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕಳೆದ ಆತ್ಮೀಯ ಕ್ಷಣ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ಸಮಾಲೋಚನೆ.

ಮಾಜಿ ರಾಷ್ಟ್ರಪತಿ ದಿ. ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ ಅವರೊಂದಿಗೆ ವೇದಿಕೆ ಹಂಚಿಕೊಂಡ ಸಿಂಗ್‌.

ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮಾತುಕತೆ.

ಮಾಜಿ ರಾಷ್ಟ್ರಪತಿ ದಿ. ಪ್ರಣವ್‌ ಮುಖರ್ಜಿ ಅವರೊಂದಿಗೆ ಚರ್ಚೆಯಲ್ಲಿ ತೊಡಗಿದ್ದ ವೇಳೆ…

ವಿಶ್ವ ಬ್ಯಾಂಕ್ ಮಾಜಿ ಅಧ್ಯಕ್ಷ ರಾಬರ್ಟ್ ಮೆಕ್ನಮಾರಾ ಅವರನ್ನು ಭೇಟಿಯಾದ ಕ್ಷಣ.

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರೊಂದಿಗೆ ಫೋಟೊಕ್ಕೆ ಪೋಸು ನೀಡಿದ್ದ ಸಿಂಗ್‌.

ಈ ಸುದ್ದಿಯನ್ನೂ ಓದಿ: Manmohan Singh: ಶುಕ್ರವಾರ ರಾಜ್ಯಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ; 7 ದಿನಗಳ ಶೋಕಾಚರಣೆ