ಅಮರಾವತಿ: ಮಗ ಮಂಗಳಮುಖಿಯನ್ನು ಪ್ರೀತಿಸಿ (Love With Transgender) ಆಕೆಯನ್ನೇ ಮದುವೆಯಾಗಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಅವಮಾನಗೊಂಡ ಪೋಷಕರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶದ ನಂದ್ಯಾಲ್ನಲ್ಲಿ ನಡೆದಿದೆ(Viral News).
ಆಂಧ್ರದ ನಂದ್ಯಾಲದ ಸುಬ್ಬು ರಾಯಡು ಮತ್ತು ಸರಸ್ವತಿ ದಂಪತಿಯ 24 ವರ್ಷದ ಪುತ್ರ ಸುನೀಲ್ ಬಿಟೆಕ್ ಪದವೀಧರನಾಗಿದ್ದು ಮಂಗಳಮುಖಿಯ ಜೊತೆ ಸ್ನೇಹವಿಟ್ಟುಕೊಂಡಿದ್ದ, ಈ ಸ್ನೇಹ ಪ್ರೀತಿಗೆ ತಿರುಗಿ ಮಂಗಳ ಮುಖಿಯನ್ನೇ ಮದುವೆಯಾಗಲು ನಿರ್ಧಾರ ಮಾಡಿದ್ದಾನೆ. ಈ ವಿಚಾರ ತಿಳಿದ ಪೋಷಕರು ಮನನೊಂದು ಕೀಟನಾಶಕ ಸೇವಿಸಿ ಸಾವಿಗೆ ಶರಣಾಗಿದ್ದಾರೆ. 45 ವರ್ಷದ ಸುಬ್ಬು ರಾಯಡು ಮತ್ತು ಇವರ ಪತ್ನಿ 38 ವರ್ಷದ ಸರಸ್ವತಿ ಸಾವನ್ನಪ್ಪಿದವರು.
ಮಗ ಸುನೀಲ್ ಕಳೆದ ಮೂರು ವರ್ಷಗಳಿಂದ ಸ್ಮಿತಾ ಎನ್ನುವ ಮಂಗಳಮುಖಿಯನ್ನು ಪ್ರೀತಿಸುತ್ತಿದ್ದೇನೆ ಆಕೆಯನ್ನೇ ಮದುವೆ ಯಾಗುತ್ತೇನೆ ಎಂದು ಇತ್ತೀಚೆಗೆ ಪೋಷಕರ ಬಳಿ ಹೇಳಿದ್ದಾನೆ. ಮಗನ ಈ ಪ್ರೇಮ ಸಂಬಂಧದ ವಿಚಾರ ತಿಳಿದ ಪೋಷಕರು ಆತನಿಗೆ ಹಲವು ಭಾರಿ ಬುದ್ಧಿ ಮಾತು ಹೇಳಿದ್ದರು. ಅಲ್ಲದೇ ತಮ್ಮಷ್ಟದ ಹುಡುಗಿಯೊಬ್ಬಳನ್ನು ನೋಡಿ ಆಕೆಯೊಂದಿಗೆ ಮದುವೆ ಮಾಡುವುದಕ್ಕೂ ಪೋಷಕರು ನಿರ್ಧರಿಸಿದ್ದರು.
ಮಗ ಪ್ರೀತಿಸುತ್ತಿರುವುದು ಮಂಗಳಮುಖಿ ಎನ್ನವುದನ್ನು ಅರಿತ ಪೋಷಕರು ಸುನೀಲ್ನನ್ನು ಕೌನ್ಸಿಲಿಂಗ್ ಮಾಡಿಸಲು ಸ್ಥಳೀಯ ಪೊಲೀಸ್ ಠಾಣೆಗೆ ಕರೆದು ಕೊಂಡು ಹೋಗಿದ್ದರು.ಇದಾದ ಬಳಿಕವೂ ಸುನೀಲ್ ಮಂಗಳ ಮುಖಿಯಾದ ಸ್ಮಿತಾಳನ್ನೇ ವಿವಾಹವಾಗುವುದಾಗಿ ತಿಳಿಸಿದ್ದಾನೆ.ಮಗನ ಈ ನಿರ್ಧಾರದಿಂದ ಬೇಸೆತ್ತು ಅವಮಾನ ಅನುಭವಿಸಿದ ಪೋಷಕರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಚಾರ ತಿಳಿದ ಬಳಿಕ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಆದರೆ ಚಿಕಿತ್ಸೆ ಫಲಿಸದೆ ಅವರು ಇಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Murder Case: ಕುಡಿದ ಮತ್ತಿನಲ್ಲಿ ತಂದೆಯನ್ನೇ ಕೊಂದು, ಪತ್ನಿ ಜತೆ ಪರಾರಿಯಾದ ಪುತ್ರ!