ಗೌರಿಬಿದನೂರು: ಕಳೆದ ಚುನಾವಣೆಯ ಸಂಧರ್ಭದಲ್ಲಿ ಕ್ಷೇತ್ರದ ಮತದಾರರಿಗೆ ನೀಡಿದ ಆಶ್ವಾಸನೆಯಂತೆ ಅಭಿವೃದ್ಧಿಯ ಕೆಲಸಗಳನ್ನು ಮಾಡುತ್ತಿದ್ದೇನೆ ಎಂದು ಶಾಸಕ ಕೆಎಚ್.ಪುಟ್ಟಸ್ವಾಮಿಗೌಡರು ತಿಳಿಸಿದರು.
ಅವರು ತಾಲ್ಲೂಕಿನ ಗಂಗಸAದ್ರ ಗ್ರಾಮದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ಸುಮಾರು ಇಪ್ಪತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರೆವೇರಿಸಿ ಮಾತನಾಡುತ್ತಿದ್ದರು.
ಇಂದು ಕೇತ್ರದಲ್ಲಿ ವಿವಿಧ ಯೋಜನೆಗಳಡಿಯಲ್ಲಿ ಸುಮಾರು ಮೂರು ಕೋಟೆ ಎಪ್ಪತ್ತು ಲಕ್ಷ ರೂಪಾಯಿಗಳ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗುತ್ತಿದೆ.ಸಿಸಿ.ರಸ್ತೆ,ಚರಂಡಿ ಅಭಿವೃದ್ಧಿ, ಶಾಲಾ ಕಟ್ಟಡಗಳ ನಿರ್ಮಾಣ, ಅಂಗನವಾಡಿ ಕಟ್ಟಡ,ಚೆಕ್ ಡ್ಯಾಮ್ ಮುಂತಾದ ಕಾಮಗಾರಿಗಳು ಇದರಲ್ಲಿ ಒಳಗೊಂಡಿದೆ ಎಂದ ಅವರು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಗುತ್ತಿಗೆದಾರರು ನಿಗಧಿತ ಅವದಿಯಲ್ಲಿ ಉತ್ತಮ ಗುಣಮಟ್ಟದಲ್ಲಿ ಕಾಮಗಾರಿ ಯನ್ನು ಪೂರ್ಣಗೊಳಿಸಬೇಕೆಂದು ಸೂಚಿಸಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ವೆಂಕಟೇಶ್ ಮುಖಂಡರಾದ ಸದಾಶಿವಪ್ಪ, ಲಕ್ಷ್ಮೀನಾರಾಯಣ ಪಟೇಲ್, ನರಸಿಂಹರೆಡ್ಡಿ, ಸಿದ್ದಪ್ಪ, ಶ್ರೀನಿವಾಸ್, ಜಿ.ಸಿ.ಅಶೋಕ್, ರಂಗಣ್ಣ, ರಾಮಚಂದ್ರಪ್ಪ, ನಾಗೇಶ್, ನಾಗಭೂಷಣ್ ರೆಡ್ಡಿ, ಜಬಿ,ಹನುಮಂತರಾಯಪ್ಪ,ಮೂರ್ತಿ,ನವೀನ್,ರಾಜಣ್ಣ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.