Saturday, 11th January 2025

Pomegranate: ದಾಳಿಂಬೆಯಲ್ಲಿ ಲಾಭ ಪಡೆಯಲು ವಿಜ್ಞಾನಿಗಳ ಸಲಹೆ ಪಡೆಯಿರಿ: ಕುಲಪತಿ ಡಾ.ವಿಷ್ಣುವರ್ಧನ್ ಸಲಹೆ

ಚಿಕ್ಕಬಳ್ಳಾಪುರ : ದಾಳಿಂಬೆ ಮೊದಲಾದ ತೋಟಗಾರಿಕೆ ಬೆಳೆಗಳಲ್ಲಿ ಸುಸ್ಥಿರ ಬೆಳೆ ನಿರ್ವಹಣೆ ಸಾಧಿಸಲು ವಿಜ್ಞಾನಿ ಗಳ ಸಲಹೆ ಅಗತ್ಯವಿದೆ.ರೈತರ ಜ್ಞಾನದೊಟ್ಟಿಗೆ ವಿಜ್ಞಾನಿಗಳ ಸಲಹೆ ಮಾರ್ಗದರ್ಶನ ಪಡೆದರೆ ದಾಳಿಂಬೆ ಲಾಭದಾಯಕ ಕೃಷಿಯಾಗಲಿದೆ ಎಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ್ ಸಲಹೆ ನೀಡಿದರು.

ನಗರದ ಹರ್ಷೋದಯ ಕನ್ವೆಂಷನಲ್ ಹಾಲ್‌ನಲ್ಲಿ ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಕೇಂದ್ರ ಸೊಲ್ಲಾಪುರ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ, ಇಫ್ಕೋ ಮತ್ತು ಕಾಫ್‌ಬರ್ ಅಗ್ರಿ ಸೈನ್ಸ್ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ದಾಳಿಂಬೆ ಬೆಳೆಗಾರರ ರಾಜ್ಯ ಮಟ್ಟದ ತಾಂತ್ರಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ವೈಜ್ಞಾನಿವಾಗಿ ಕೃಷಿಯನ್ನು ಮಾಡುವುದು ಎಂದಿಗಿಂತಲೂ ಇಂದು ಅಗತ್ಯವಿದೆ.ವಿಜ್ಞಾನಿಗಳೇ ಮುಖತಃ ತೋಟ ಗಳಿಗೆ ಬಂದು ಸಲಹೆ ಸೂಚನೆ ನೀಡಲು ಕಷ್ಟಸಾಧ್ಯವಾಗಿರುವ ಕಾರಣ ಮುಂದಿನ ದಿನಗಳಲ್ಲಿ ಡಿಜಿಟಲ್ ಸಿಸ್ಟಮ್ ಮೂಲಕ ರೈತರು ಇದ್ದಲ್ಲಿಯೇ ನಮ್ಮ ವಿಶ್ವವಿದ್ಯಾಯಲದ ವಿಜ್ಞಾನಿಗಳ ನೆರವನ್ನು ರೈತರಿಗೆ ನೀಡಲು ಯೋಜನೆ ಸಿದ್ದವಿದೆ.ದಾಳಿಂಬೆ ಹೆಚ್ಚಿನ ಲಾಭ ನೀಡುವ ಬೆಳೆಯೂ ಹೌದು, ಅಪಾರ ನಷ್ಟವನ್ನುಂಟು ಮಾಡುವ ಬೆಳೆಯೂ ಹೌದು.ಸಾವಯವ ಪದ್ದತಿಗಳ ಮೂಲಕ ಉತ್ಪಾಧನಾ ವೆಚ್ಚವನ್ನು ತಗ್ಗಿಸಿ,ಹೆಚ್ಚು ಲಾಭತರುವ ಮಾರ್ಗಗಳ ಶೋಧನೆಯತ್ತ ರೈತರು ಮುಂದಾಗಬೇಕಿದೆ.ಈ ನಿಟ್ಟಿನಲ್ಲಿ ಇಂತಹ ತಾಂತ್ರಿಕ ಸಭೆಗಳು ಇನ್ನೂ ಹೆಚ್ಚೆಚ್ಚು ನಡೆಯಬೇಕಿದೆ ಎಂದರು.

ರಾಜ್ಯದಲ್ಲಿAದು ದಾಳಿಂಬೆ ಬೆಳೆ ಹೇರಳವಾಗಿ ಉತ್ಪಾಧನೆ ಮಾಡುತ್ತಿದ್ದರೂ ಸದ್ಯ ದಾಳಿಂಬೆ ಹಣ್ಣಿನ ರಫ್ತಿನ ಪ್ರಮಾಣ ಶೇ ೨.೫ ಪರ್ಸೆಂಟ್ ಮಾತ್ರ ಇದೆ.ರೈತರಲ್ಲಿ ಗುಣಮಟ್ಟದ ಹಣ್ಣು ಬೆಳೆಯಲು ಸಾಕಷ್ಟು ಅವಕಾಶವಿದೆ.ರಫ್ತು ಮಾಡಲಿಕ್ಕೂ ಅವಕಾಶಗಳು ಹೆಚ್ಚಿವೆ.ಪರಿಸ್ಥಿತಿ ಹೀಗಿದ್ದರೂ ರಫ್ತು ಕಡಿಮೆಯಾಗಲು ಕಾರಣ ಏನು ಎಂಬ ಬಗ್ಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿಯೇ ಇಂತಹ ಕಾರ್ಯಾಗಾರ ನಡೆಸಲಾಗುತ್ತಿದೆ.ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ವಿಶ್ವವಿದ್ಯಾಲಯ ಹೇಗೆ ನೆರವು ನೀಡಬೇಕು ಎಂಬ ಬಗ್ಗೆಯೂ ಇಂತಹ ಸಮ್ಮೇಳನಗಳು ಸಹಾಯಕವಾಗಲಿವೆ ಎಂದರು.

ಕೊಟ್ಟಿಗೆ ಗೊಬ್ಬರ ಬಳಕೆಯಿಂದ ವಿಮುಖವಾಗಿರುವ ಕೃಷಿ ಸಮುದಾಯ ಸಾಧ್ಯವಾದಷ್ಟು ಕೂಡ ಸಾವಯವ ಕೃಷಿಯತ್ತ ಮುಖಮಾಡುವುದು ಅಗತ್ಯವಿದೆ.ದಾಳಿಂಬೆ ಸೇರಿದಂತೆ ತೋಟಗಾರಿಕೆ ಬೆಳೆಗಳಲ್ಲಿ ಅತಿಯಾದ ರಸಾಯನಿಕಗಳ ಬಳಕೆ ಹೆಚ್ಚಾದ ಪರಿಣಾಮ ಭೂಮಿ ಬಂಜೆಯಾಗುತ್ತಿದೆ.ಇತ್ತ ರೈತ ಸಂಕುಲ ಗಮನ ಹರಿಸಬೇಕಿದೆ ಎಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ್ ಆತಂಕ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ದಾಳಿಂಬೆ ಬೆಳೆ ಲಾಭದಾಯಕ ಕೃಷಿಯೆಂಬ ಭ್ರಮೆ ಸಮಾಜದಲ್ಲಿದೆ. ಆದರೆ ಈ ನಂಬಿಕೆ ತಪ್ಪು. ಏಕೆಂದರೆ ದಾಳಿಂಬೆ ಐಸಿಯೂನಲ್ಲಿರುವ ಮಗುವಿನಂತೆ ಸೂಕ್ಷö್ಮ ಬೆಳೆಯಾಗಿದೆ.ಹೇಗೆ ವೈದ್ಯರು ಮಗುವನ್ನು ಸದಾಕಾಲ ಗಮನಿಸಿ ಅದಕ್ಕೆ ತಕ್ಕ ಚಿಕಿತ್ಸೆ ನೀಡುತ್ತಾರೋ ಹಾಗೆ ದಾಳಿಂಬೆ ಬೆಳೆಯಲ್ಲಿ ತೊಡಗಿಸಿಕೊಳ್ಳುವ ರೈತರು ತಮ್ಮ ಸಮಯ ಮತ್ತು ಗಮನವನ್ನು ಸಂಪೂರ್ಣವಾಗಿ ಬೆಳೆಯತ್ತ ಕೊಡಲಿಲ್ಲ ಎಂದರೆ ಲಾಭತರುವ ಬೆಳೆ ನಷ್ಟವನ್ನೇ ಬಳುವಳಿಯಾಗಿ ನೀಡಲಿದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ದಾಳಿಂಬೆ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದರೂ ಮಾರುಕಟ್ಟೆಯಿದ್ದರೂ, ರಫ್ತಿಗೆ ವಿಫುಲ ಅವಕಾಶಗಳಿದ್ದರೂ ಕೂಡ ಸದ್ಯ ಶೇ.2.5ರಷ್ಟು ಮಾತ್ರ ರಫ್ತಾಗುತ್ತಿದೆ. ಇದಕ್ಕೆ ಕಾರಣಗಳೇನೇ ಇದ್ದರೂ ಉತ್ಪಾಧನಾ ವೆಚ್ಚ ಕಡಿಮೆ ಮಾಡಿ ವೈಜ್ಞಾನಿಕವಾಗಿ ಉತ್ತಮ ಗುಣಮಟ್ಟದ ಹಣ್ಣು ಬೆಳೆಯುವಂತಾದಾಗ ಮಾತ್ರ ದಾಳಿಂಬೆ ಲಾಭದಾಯಕ ಕೃಷಿ ಎನಿಸಿಕೊಳ್ಳಲಿದೆ. ಇದಕ್ಕೆ ಬೇಕಾದ ಎಲ್ಲಾ ನೆರವನ್ನು ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಕೇಂದ್ರ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ನೀಡಲು ಬದ್ಧವಿದೆ ಎಂದು ಹೇಳಿದರು.

ರಾಜ್ಯ ಇಫ್ಕೋ ಸಂಸ್ಥೆಯ ರಾಜ್ಯ ಮಾರುಕಟ್ಟೆ ವ್ಯವಸ್ಥಾಪಕ ಡಾ.ಸಿ.ನಾರಾಯಣಸ್ವಾಮಿ ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ದಾಳಿಂಬೆ ಬೆಳೆಯುವ ಪ್ರದೇಶ ಕರ್ನಾಟಕದಲ್ಲಿ ವ್ಯಾಪಕವಾಗಿ ಹೆಚ್ಚಾಗುತ್ತಿದೆ. ಆದರೆ ರೈತರಿಗೆ ಹೆಚ್ಚಿನ ಉತ್ಪಾದನೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಹಾಗೂ ದಾಳಿಂಬೆ ಬೆಳೆಯುವ ಪ್ರದೇಶಗಳ ಸಮೀಕ್ಷೆಗಳ ಪ್ರಕಾರ ಶೇ ೨೦ ರಿಂದ ೮೦ ರಷ್ಟು ಉತ್ಪಾದನೆಯು ದುಂಡಾಣು ಅಂಗಮಾರಿ ರೋಗ, ಸೊರಗು ರೋಗ ಮತ್ತು ಹಣ್ಣು ಕೊಳೆ ರೋಗಗಳು ಮತ್ತು ಕೀಟಗಳ ಬಾದೆ ತ್ರಿಪ್ಸ್. ನುಸಿ ಮತ್ತು ಹಣ್ಣಿನ ರಸಹೀರುವ ಪತಂಗ ಸಮಸ್ಯೆಗಳಿಂದ ಕುಂಟಿತವಾಗುತ್ತಿದೆ.

ಕೆಲವು ರೈತರು, ಈ ಸಮಸ್ಯೆಗಳಿಂದ ತೋಟಗಳನ್ನು ಕಿತ್ತು ಕಂಗಾಲಗಿರುವ ಉದಾರಣೆಗಳು ಉಂಟು. ಇದರ ಜೊತೆಗೆ ವಾತಾವರಣದ ವೈಪರಿತ್ಯ ಮತ್ತು ದಾಳಿಂಬೆ ಹಣ್ಣಿಗೆ ಸರಿಯಾದ ಬೆಲೆಸಿಗದೆ ನಷ್ಟವನ್ನು ಅನುಭವಿಸುತ್ತಿದ್ದಾರೆ. ಈ ಎಲ್ಲ ವಿಷಯಗಳನ್ನು ಗಮನಿಸಿದರೆ ದಾಳಿಂಬೆ ರೈತರಿಗೆ ದಾಳಿಂಬೆ ಬೆಳೆಯನ್ನು ಬೆಳೆಯಲು ಸರಿಯಾದ ತಾಂತ್ರಿಕ ಬೇಸಾಯ ಕ್ರಮಗಳ ಬಗ್ಗೆ ಮಾಹಿತಿಯ ಅವಶ್ಯಕತೆ ಅಗತ್ಯವಿದೆ. ಈ ಎಲ್ಲಾ ಸಮಸ್ಯೆಗಳಿಗೆ ಸರಿಯಾದ ತಾಂತ್ರಿಕ ಮಾಹಿತಿಯನ್ನು ತಿಳಿಸಲು ಇಫ್ಕೋ ಮತ್ತು ಕ್ಯಾಪ್ಟರ್ ಅಗ್ರಿಸೈನ್ಸ್ ಸಂಸ್ಥೆಗಳು, ರಾಷ್ಟ್ರೀಯ ದಾಳಿಂಬೆ ಸಂಶೋಧನ ಕೇಂದ್ರ, ಸೋಲಾಪುರ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಬಾಗಲಕೋಟೆ ಜೊತೆಗೂಡಿ ತಾಂತ್ರಿಕ ಸಭೆ ನಡೆಸಲಾಗುತ್ತಿದ್ದು ರೈತರು ಇದರ ಸದುಪಯೋಗ ಪಡೆಯಬೇಕು ಎಂದರು.

ಭಾರತೀಯ ಸಿಲ್ಕ್ ಮಾರ್ಕ್ ಸಂಸ್ಥೆಯ ಡಾ.ನರೇಶ್ ಮಾತನಾಡಿ ಜಿಲ್ಲೆಯ ರೈತರು ವಿಜ್ಞಾನದ ಜತೆ ಸದಾ ಸಂಪರ್ಕ ಸಾಧಿಸಿ ಆಧುನಿಕವಾಗಿ ಕೃಷಿಯಲ್ಲಿ ತೊಡಗಿರುವುದು ಸಂತೋಷದ ಸಂಗತಿಯಾಗಿದೆ.ಹನಿ ನೀರಾವರಿಯಲ್ಲಿಯೇ ಸ್ವಾವಲಂಭನೆ ಕಂಡಿರುವ ನಮ್ಮ ರೈತರು ಹಿಪ್ಪುನೇರಳೆ, ಬಿಟ್ಟು ದ್ರಾಕ್ಷಿ, ದ್ರಾಕ್ಷಿ ಬಿಟ್ಟು, ಗೋಡಂಬಿ,ಪುಷ್ಪಕೃಷಿ, ದಾಳಿಂಬೆ,ಬೆಳೆಯಲು ಮುಂದಾಗಿರುವ ಹಿಂದೆ ರೋಚಕವಾಗಿ ಪರಿಶೋಧನೆಯಿದೆ. ಇಲ್ಲಿನ ರೈತರು ತುಂಡುಭೂಮಿ ಯಲ್ಲಿಯೂ ಚಿನ್ನ ಬೆಳೆಯುವ ಸಾಹಸಿಗಳಾಗಿದ್ದಾರೆ.ದಾಳಿಂಬೆ ಬೆಳೆಗೆ ಸಸಿಯ ಆಯ್ಕೆಯೇ ಪ್ರಥಮವಾಗಿದ್ದು, ನಂತರ ನಾಟಿ, ಭೂಮಿ, ಗೊಬ್ಬರ ಔಷದೋಪಚಾರ, ಆರೈಕೆ ಮುಖ್ಯವಾಗುತ್ತದೆ ಎಂದರು.

೧೯೮೦ರಲ್ಲಿ ಪ್ರತಿಯೊಂದು ಕೃಷಿಗೂ ಕೊಟ್ಟಿಗೆ ಗೊಬ್ಬರ ಬಳಸುತ್ತಿತ್ತಾ ರೋಗಭೀತಿಯಿಲ್ಲದೆ ಇಳುವರಿ ಕಡಿಮೆ ಯಿದ್ದರೂ ಆರೋಗ್ಯವಾಗಿದ್ದರು.೩೦ವರ್ಷಗಳಲ್ಲಿ ಅತಿಯಾಗಿ ರಸಾಯನಿಕಗಳಾದ ಯೂರಿಯಾ ಡಿಎಪಿ ಬಳಸುತ್ತಿದ್ದೇವೆ.ಯೂರಿಯಾ ಡಿಎಪಿ ಅತಿಯಾದ ಬಳಕೆಯಿಂದ ಭೂಮಿಯಲ್ಲಿನ  ಜೀವಾಣು ಅಂಶಗಳನ್ನು ಕೊಂದಾಕಿದ್ದೇವೆ, ಪ್ರತಿ ವರ್ಷ ಡಿಎಪಿ,೨೮೦ ಲಕ್ಷ ಮೆಟ್ರಿಕ್ ಟನ್ ಯೂರಿಯಾ ೧೨೦ ಲಕ್ಷ ಮೆಟ್ರಿಕ್ ಟನ್ ಡಿಎಪಿ ಭೂಮಿಗೆ ಸುರಿಯುತ್ತಿದ್ದೇವೆ.ಸರಕಾರಗೂ ಕೂಡ ಈ ಗೊಬ್ಬರಗಳೀಗೆ ನೀಡುವ ಸಬ್ಸೀಡಿ ಪ್ರಮಾಣ ಹೆಚ್ಚು ಮಾಡುತ್ತಲೇ ಹೋಗುತ್ತಿದ್ದಾರೆ.ಇದೇ ರೀತಿ ಸಾಗಿದರೆ ಭೂಮಿ ಫಲವತ್ತತೆ ಕಳೆದುಕೊಳ್ಳಲಿದೆ ಎಂದರು.

ಅತಿಯಾದ ರಸಗೊಬ್ಬರ ಬಿಡಿ, ಪರ್ಯಾಯ ಬೆಳೆಗಳು ಮತ್ತು ಗೊಬ್ಬರದತ್ತ ರೈತರು ನೋಡಬೇಕಿದೆ.೫೭ವರ್ಷದಿಂದ ಇಫ್ಕೋ ಸಂಸ್ಥೆಯಿದೆ.ರಸಾಯನಿಕ ಗೊಬ್ಬರ ಕಡಿಮೆ ಮಾಡಲು ನ್ಯಾನೋ ಯೂರಿಯಾ ಡಿಎಪಿ ಕಾಂಪ್ಲೆಕ್ಸ್ ಕೊಡು ತ್ತಿದ್ದೇವೆ. ದಯವಿಟ್ಟು ಬಳಸಿ,ಇದರ ಹಿಂದೆ ಯಾವ ದುರುದ್ದೇಶವೂ ಇಲ್ಲ.ಬದಲಿಗೆ ಸಬ್ಸಿಡಿ ಅವಲಂಬಿತ ೨.೫ಲಕ್ಷ ರೈತರ ಅವಲಂಬನೆ ತಪ್ಪಿಸುವ ಉದ್ದೇಶವಾಗಿದೆ ಎಂದು ಹೇಳಿದರು.

ಸಂಶೋಧನಾ ನಿರ್ದೇಶಕ ಫಕ್ರುದ್ದೀನ್ ಮಾತನಾಡಿ ಕೋಲಾರ ಚಿಕ್ಕಬಳ್ಳಾಪುರ ಇಲ್ಲಿನ ರೈತರು ಶ್ರಮಜೀವಿಗಳು.ಹನಿ ನೀರಾವರಿಗೆ ಹೆಚ್ಚು ಆದ್ಯತೆ ನೀಡುವ ಗುಣ ಇಲ್ಲಿದೆ.ಬೆಳೆ ಪದ್ದತಿ ಬದಲಾವಣೆ ಇಲ್ಲಿನ ರೈತರಿಗೆ ಗೊತ್ತು.ತಾಂತ್ರಿಕತೆ ಹಿಂದೆ ರೈತರು ಓಡುತ್ತಿದ್ದಾರೆ.ದಾಳಿಂಬೆಯಲ್ಲಿ ಸಸಿ ನಾಟಿ ಹಾಕುವ ಪದ್ದತಿ ಮುಖ್ಯವಾಗಿ ಗಮನಿಸಬೇಕು.ಸಸಿ ನೆಟ್ಟರೆ ಬೆಳೆ ಬರುವುದಿಲ್ಲ.ವಿಜ್ಞಾನಿಗಳ ಸಲಹೆಯಂತೆ ನಡೆಯಿರಿ.ಮಾರುಕಟ್ಟೆ ತಾಂತ್ರಿಕತೆ ಅರಿಯುವುದು ಮುಖ್ಯ.ದಾಳಿಂಬೆ  ಐಸಿಯು ಮಗುವಿದ್ದಂತೆ.ನಮ್ಮ ಸಮಯ ಮತ್ತು ಜ್ಞಾನ ದಾಳಿಂಬೆಗೆ ಮುಖ್ಯ. ಮಾರುಕಟ್ಟೆ ಇಂಟೆಲಿಜೆನ್ಸ್ ಬಗ್ಗೆ ಕಾರ್ಯಗಾರ ಆಗಬೇಕಿದ್ದು ಸರಕಾರ ಇತ್ತ ಗಮನಹರಿಸಬೇಕಿದೆ ಎಂದು ಸಲಹೆ ನೀಡಿದರು.

ಡಾ.ಮಂಜುನಾಥ್ ಜಿ. ಮಾತನಾಡಿ ವೈಜ್ಞಾನಿಕವಾಗಿ  ದಾಳಿಂಬೆ ಬೆಳೆ ಬೆಳೆಯಲು ವಿಶ್ವವಿದ್ಯಾಲಯದ ಸಂಪರ್ಕಕ್ಕೆ ಬನ್ನಿ, ವಿಜ್ಞಾನಿಗಳ ಸಲಹೆ ಪಡೆದು ಲಾಭ ಗಳಿಸಿ ಎಂದರು.

ವೇದಿಕೆಯಲ್ಲಿ ಇಫ್ಕೋ ಸಂಸ್ಥೆಯ ಡಾ.ಸಿ.ನಾರಾಯಣಸ್ವಾಮಿ,ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಡಾ.ಬಿ.ಫಕ್ರುದ್ದೀನ್, ಚಿಂತಾಮಣಿ ಕೃಷಿ ವಿಜ್ಞಾನ ಕೇಂದ್ರದ ಡಾ.ಪಾಪಿರೆಡ್ಡಿ, ತೋಟಗಾರಿಕೆ ಉಪ ನಿರ್ದೇಶಕಿ ಡಾ.ಗಾಯಿತ್ರಿ, ಬೆಂಗಳೂರು ಗ್ರಾಮಾಂತರ ಉಪನಿರ್ದೇಶಕ ಡಾ.ಗುಣವಂತ, ಕರ್ನಾಟಕ ದಾಳಿಂಬೆ ಬೆಳೆಗಾರರ ಸಂಘದ ಅಧ್ಯಕ್ಷ ಜಿ.ಸಿ.ಮುನೇಗೌಡ, ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಕೇಂದ್ರದ ನಿವೃತ್ತ ನಿರ್ದೇಶಕಿ ಡಾ,ಜ್ಯೋತ್ಸಾö್ನ ಶರ್ಮ,ಡಾ.ಮಂಜುನಾಥ್.ಜಿ. ಡಾ.ಮಂಜುನಾಥ್ ಎನ್ ಮತ್ತಿತರರು ಇದ್ದರು.