Sunday, 29th December 2024

Kalaburagi News: ‘ನಮ್ಮ ಅತ್ತೆ ಬೇಗ ಸಾಯಬೇಕು’ ಎಂದು ನೋಟಿನ ಮೇಲೆ ಬರೆದು ದೇವಿ ಹುಂಡಿಗೆ ಹಾಕಿದ ಸೊಸೆ!

Kalaburagi News

ಕಲಬುರಗಿ: ಅತ್ತೆ-ಸೊಸೆ ಒಂದೇ ಮನೆಯಲ್ಲಿ ವಾಸವಾಗಿದ್ದರೆ ಜಗಳವಾಡದೇ ಇರುವುದು ಅಪರೂಪ ಎನ್ನಬಹುದು. ಕೆಲವೊಮ್ಮೆ ಈ ಜಗಳ ತಾರಕ್ಕೇರುವುದನ್ನೂ ಕಾಣಬಹುದು. ಹೀಗಿರುವುವಾಗ ಇಲ್ಲೊಬ್ಬ ಸೊಸೆ, ತನ್ನ ಅತ್ತೆ ಯಾವ ರೀತಿ ಕಿರುಕುಳ ಕೊಡುತ್ತಿದ್ದರೋ ಗೊತ್ತಿಲ್ಲ. ಆದರೆ, ಅವರು ಬೇಗ ಸಾಯಬೇಕು ಎಂದು ದೇವಿಗೆ ಹರಕೆ ಹೊತ್ತಿರುವುದು ಜಿಲ್ಲೆಯಲ್ಲಿ (Kalaburagi News) ನಡೆದಿದೆ.

ಹೌದು, “ನಮ್ಮ ಅತ್ತೆ ಬೇಗ ಸಾಯಬೇಕು ತಾಯಿ…” ಎಂದು 20 ರೂ. ಮುಖಬೆಲೆಯ ನೋಟ್ ಮೇಲೆ ಬರೆದು ಜಿಲ್ಲೆಯ ಅಫಜಲಪುರ ತಾಲೂಕಿನ ಘತ್ತರಗಿ ಗ್ರಾಮದ ಭಾಗ್ಯವಂತಿ ದೇವಿಯ ಹುಂಡಿಯಲ್ಲಿ ಹಾಕಿರುವುದು ಕಂಡುಬಂದಿದೆ. ಹುಂಡಿ ಎಣಿಕೆ ವೇಳೆ ಈ ವಿಚಿತ್ರ ಹರಕೆಯ ನೋಟ್​ ಪತ್ತೆಯಾಗಿದ್ದು, ಸದ್ಯ ಇದರ ಫೋಟೊ ಎಲ್ಲೆಡೆ ವೈರಲ್‌ ಆಗುತ್ತಿದೆ. ಅತ್ತೆ ಸಾಯಲೆಂದು ಸೊಸೆ ಈ ರೀತಿ ಬರೆದು ಹಾಕಿದ್ದಾಳೆ ಎನ್ನಲಾಗಿದೆ.

ಭಾಗ್ಯವಂತಿ ದೇವಿ ದೇಗುಲದಲ್ಲಿ ವರ್ಷಕ್ಕೊಮ್ಮೆ ಹುಂಡಿ ಎಣಿಕೆ ಮಾಡಲಾಗುತ್ತದೆ. ಅದೇ ಇತ್ತೀಚೆಗೆ ಹುಂಡಿ ಎಣಿಕೆ ನಡೆಸಿದಾಗ 60 ಲಕ್ಷ ನಗದು, ಒಂದು ಕೆ.ಜಿ. ಬೆಳ್ಳಿ, 200 ಗ್ರಾಂ ಚಿನ್ನಾಭರಣ ಹುಂಡಿಯಲ್ಲಿ ಸಂಗ್ರಹವಾಗಿದೆ. ಆ ಹಣದ ನಡುವೆ ಸೊಸೆಯೊಬ್ಬರು ಹಾಕಿದ್ದ 20 ರೂ. ಹರಕೆಯ ನೋಟು ಕೂಡ ಇದೆ.

ಈ ಸುದ್ದಿಯನ್ನೂ ಓದಿ | Viral Video: ಹುಲಿಯನ್ನು ಆನೆ ಮೇಲೆ ಕಟ್ಟಿ ಸವಾರಿ ಮಾಡಿದ ದುರುಳರು- ಹಳೆಯ ವಿಡಿಯೊ ಮತ್ತೆ ವೈರಲ್‌

ಪೊಲೀಸರಿಂದ ಶೂಟೌಟ್, ಅಂತಾರಾಜ್ಯ ದರೋಡೆಕೋರನ ಕಾಲಿಗೆ ಗುಂಡು ಹಾರಿಸಿ ಬಂಧನ

police firing dharwad

ಧಾರವಾಡ: ಮನೆಗೆ ನುಗ್ಗಿ ವೃದ್ಧ ದಂಪತಿಯನ್ನು ಥಳಿಸಿ ದರೋಡೆ (Robbery Case) ಮಾಡಿದ್ದ ಆಂಧ್ರಪ್ರದೇಶ ಮೂಲದ ಕುಖ್ಯಾತ ದರೋಡೆಕೋರನ ಕಾಲಿಗೆ ಗುಂಡು ಹಾರಿಸಿ (Police Firing) ಧಾರವಾಡದ (Dharwad news) ಪೊಲೀಸರು ಬಂಧಿಸಿದ್ದಾರೆ.

ಧಾರವಾಡ ನವಲೂರ ಬಳಿಯ ಮನೆಯೊಂದರಲ್ಲಿ ದಂಪತಿಗಳನ್ನು ಕಟ್ಟಿ ಹಾಕಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನ ಮೇಲೆ ಪೊಲೀಸರು ಎರಡು ಸುತ್ತು ಗುಂಡು ಹಾರಿಸಿ ಬಂಧಿಸಿದ್ದಾರೆ. ಈ ಘಟನೆ ಹುಬ್ಬಳ್ಳಿ ಧಾರವಾಡ ಮಧ್ಯೆ ಇರುವ ರಾಯಾಪುರದ ಬಳಿ ನಡೆದಿದೆ.

ಆಂಧ್ರಪ್ರದೇಶ ಮೂಲದ ಕುಖ್ಯಾತ ದರೋಡೆಕೋರ ವೆಂಕಟೇಶ್ವರ ಎಂಬಾತನ ಮೇಲೆ ಪಿಎಸ್ಐ ಪ್ರಮೋದ್ ಗುಂಡು ಹಾರಿಸಿದ್ದಾರೆ. ಇದಕ್ಕೂ ಮೊದಲು ಪಿಎಸ್ಐ ಹಾಗೂ ಪೊಲೀಸ್ ಮೇಲೆ ವೆಂಕಟೇಶ್ವರ ಹಲ್ಲೆ ಯತ್ನ ನಡೆಸಿದ್ದ. 5 ರಾಜ್ಯಗಳಿಗೆ ಬೇಕಾಗಿದ್ದ ನಟೋರಿಯಸ್ ದರೋಡೆಕೋರನ ಮೇಲೆ 80ಕ್ಕೂ ಹೆಚ್ಚು ಕಳ್ಳತನ, ದರೋಡೆ ಪ್ರಕರಣ
ದಾಖಲಾಗಿತ್ತು.

ಆಂಧ್ರಪ್ರದೇಶದ ಕರ್ನೋದನವನಾದ ಪಾಲಾ ವೆಂಕಟೇಶ್ ಕಳೆದ 6 ತಿಂಗಳ ಹಿಂದೆ ನವಲೂರು ಹೊರವಲಯದಲ್ಲಿ ದರೋಡೆ ಮಾಡಿದ್ದ. 5 ರಾಜ್ಯಗಳ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಪಾಲಾ ವೆಂಕಟೇಶ್, ಹುಬ್ಬಳ್ಳಿ ಧಾರವಾಡ ಪೋಲಿಸರಿಗೆ ಸಿಕ್ಕು ಬಿದ್ದಿದ್ದ. ಆತನನ್ನು ದರೋಡೆ ನಡೆದ ಸ್ಥಳಕ್ಕೆ ಕರೆತರುವ ವೇಳೆ ಪಾಲಾ ವೆಂಕಟೇಶ್, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಪಾಲಾ ವೆಂಕಟೇಶ್ ಮೇಲೆ ಗುಂಡು ಹಾರಿಸಿದ್ದಾರೆ. ಪೊಲೀಸರು ಹಾರಿಸಿದ ಗುಂಡು, ಪಾಲಾನ ಎರಡು ಕಾಲಿಗೆ ಹೊಕ್ಕಿವೆ. ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ಚಿಕೆತ್ಸೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಭೇಟಿ ನೀಡಿ ಮಾಹಿತಿ ಪಡೆದು ಆರೋಗ್ಯ ವಿಚಾರಿಸಿದರು.‌

ಇದನ್ನು ಓದಿ: Police Firing: ವ್ಯಕ್ತಿಯನ್ನು ಬೆತ್ತಲಾಗಿಸಿ ಬೀದಿಯಲ್ಲಿ ಓಡಿಸಿದ ರೌಡಿ ಕಾಲಿಗೆ ಗುಂಡು