ನವ ದೆಹಲಿ: ಸಾಕು ನಾಯಿ ಆಥವಾ ಬೆಕ್ಕು ಇನ್ನಿತರ ಪ್ರಾಣಿಗಳನ್ನು ಮುದ್ದಾಡುವುದು ಸಾಮಾನ್ಯ. ಆದರೆ ಇಲ್ಲೊಂದು ವೈರಲ್ ಆಗುತ್ತಿರುವ ವಿಡಿಯೊದಲ್ಲಿ ಮಹಿಳೆಯೊಬ್ಬಳು ನಾಯಿ ಅಥವಾ ಬೆಕ್ಕನ್ನು ಮುದ್ದಿಸುತ್ತಿಲ್ಲ. ಬದಲಾಗಿ ಆಕೆ ತನ್ನ ಮಡಿಲಲ್ಲಿ ಸಿಂಹವನ್ನು ಮಲಗಿಸಿಕೊಂಡು ಮುದ್ದಾಡುತ್ತಿರುವ ವಿಡಿಯೊ ಸದ್ಯ ಟ್ರೆಂಡಿಂಗ್‌ನಲ್ಲಿದ್ದು ನೋಡುಗರ ಎದೆ ಒಮ್ಮೆ ಝಲ್ ಎನಿಸುವಂತಿದೆ (Viral Video).
ಮಹಿಳೆಯು ಸಿಂಹವನ್ನು ಪುಟ್ಟ ಮಗುವಿನಂತೆ ತೊಡೆ ಮೇಲೆ ಮಲಗಿಸಿಕೊಂಡು ಮುತ್ತಿಟ್ಟಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು ಕೆಲವು ಬಳಕೆದಾರರು ಮಹಿಳೆಯ ಧೈರ್ಯವನ್ನು ಮೆಚ್ಚಿದರೆ, ಇನ್ನು ಕೆಲವರು ಇದು ಬಹಳಷ್ಟು ಅಪಾಯ ಎಂದು ಕಾಮೆಂಟ್ ಮಾಡಿದ್ದಾರೆ.
I am amazed that a Lion can be so affectionate like this. Lucky her. pic.twitter.com/tOKTNS7GKn
— Nature is Amazing ☘️ (@AMAZlNGNATURE) December 25, 2024
ವಿಡಿಯೊದಲ್ಲಿ ಏನಿದೆ?
ವಿಡಿಯೊದಲ್ಲಿ ಸಿಂಹ ಮಹಿಳೆಯ ತೊಡೆಯ ಮೇಲೆ ಶಾಂತ ರೀತಿಯಲಿ ಆರಾಮವಾಗಿ ಮಲಗಿದೆ. ಮಲಗಿದ್ದ ಸಿಂಹವನ್ನು ಮಹಿಳೆ ಮುದ್ದಿಸುತ್ತಿದ್ದಾಳೆ. ಸಿಂಹ ಮಹಿಳೆಯೊಂದಿಗೆ ಬಹಳ ಸ್ನೇಹದಿಂದ ಇರುವ ದೃಶ್ಯ ಕಾಣಬಹುದು. ಯಾವುದೇ ಭಯ ಇಲ್ಲದೆ ಈ ಮಹಿಳೆ ಮುತ್ತಿಕ್ಕಿ ಮುದ್ದಾಡುವ ಈ ದೃಶ್ಯ ನೋಡುಗರಿಗೆ ಅಚ್ಚರಿ ಮೂಡಿಸದೇ ಇರದು.
ಈ ಒಂದು ವಿಡಿಯೋ ಸದ್ಯ ಎಕ್ಸ್ ಖಾತೆಯಲ್ಲಿ ಸಂಚಲನ ಸೃಷ್ಟಿ ಮಾಡಿದ್ದು, 10 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಕೆಲವು ನೆಟ್ಟಿಗರು ಈ ವಿಡಿಯೊ ನೋಡಿ ಸಿಂಹ ಮತ್ತು ಮಹಿಳೆಯ ಬಾಂಧವ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ರೆ ಇನ್ನು ಕೆಲವರು ನಿಜಕ್ಕೂ ಇದು ಅಪಾಯಕಾರಿ ಎಂದಿದ್ದಾರೆ. ಇನ್ನೊಬ್ಬರು ಇದು ನೋಡಲು ಸುಂದರವಾಗಿ ಕಾಣಿಸಬಹುದು, ಆದರೆ ಇದು ನಂಬಲಾಗದಷ್ಟು ಅಪಾಯಕಾರಿ ಎಂದಿದ್ದಾರೆ. ಕಾಡು ಪ್ರಾಣಿಗಳನ್ನು ಸಾಕುಪ್ರಾಣಿಗಳಾಗಿ ಇಟ್ಟುಕೊಳ್ಳುವುದು ತಪ್ಪು ಎಂದು ಮತ್ತೊಬ್ಬ ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ಕೆಲವರು ಇಂತಹ ಪ್ರಯತ್ನಗಳು ನಿಜಕ್ಕೂ ಡೇಂಜರ್ ಆಗಿದೆ. ಕಾಡು ಪ್ರಾಣಿಗಳ ವರ್ತನೆ ಯಾವ ರೀತಿ ಇರಲಿದೆ ಎಂದು ಹೇಳುವುದಕ್ಕೆ ಬರುವುದಿಲ್ಲ. ಇಂತಹ ಪ್ರಾಣಿಗಳಿಂದ ಆದಷ್ಟು ದೂರ ಉಳಿಯುವುದು ಒಳಿತು ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನು ಓದಿ:Bigg Boss Kannada 11: ಬಿಗ್‌ಬಾಸ್ ಮನೆಯಿಂದ ದಿಢೀರ್ ಹೊರಬಂದ ಗೋಲ್ಡ್ ಸುರೇಶ್; ತುರ್ತು ನಿರ್ಗಮನಕ್ಕೆ ಕಾರಣವೇನು?