Monday, 30th December 2024

BBK 11: ಮೋಸದಾಟ ಆಡಿದ ಭವ್ಯಾಗೆ ಕಿಚ್ಚನ ಖಡಕ್ ಕ್ಲಾಸ್

Bhavya and Sudeep

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) 13ನೇ ವಾರದ ಅಂತ್ಯದಲ್ಲಿದೆ. ಇಂದು ಕಿಚ್ಚ ಸುದೀಪ್ ಆಗಮಿಸಲಿದ್ದು, ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ನಡೆಯಲಿದೆ. ಈ ವಾರ ಬಿಗ್ ಬಾಸ್ ಮನೆ ರೆಸಾರ್ಟ್ ಆಗಿ ಪರಿವರ್ತನೆಯಾಗಿತ್ತು. ಮನೆಯ 10 ಸದಸ್ಯರನ್ನು ತಲಾ 5 ಜನರಂತೆ ಎರಡು ಗುಂಪುಗಳಾಗಿ ವಿಂಗಡನೆ ಮಾಡಲಾಗಿತ್ತು. ಇದರಲ್ಲಿ ಭವ್ಯಾ ತಂಡ ಗೆದ್ದು ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹತೆ ಪಡೆದುಕೊಂಡಿತು.

ಆದರೆ, ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಭವ್ಯಾ ಗೌಡ ಮೋಸ ಮಾಡಿರುವಂತೆ ಕಂಡುಬಂದಿದೆ. ಈ ವಿಚಾರವಾಗಿ ಕಿಚ್ಚ ಸುದೀಪ್ ಇಂದು ಭವ್ಯಾಗೆ ಖಡಕ್ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ. ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಆರಂಭದಲ್ಲೇ ಸುದೀಪ್ ಈ ಬಗ್ಗೆ ಸಣ್ಣ ಸುಳಿವು ಕೊಟ್ಟಿದ್ದಾರೆ. ನೀತಿ ನಿಜಾವಾಯ್ತು, ಯಾರಿಗೆ ಬೇಕು ಗೆದ್ದರೆ ಸಾಕು ಅಂತ ಆಡೋರು ಕೆಲವರು ಆದ್ರೆ, ಗೆದ್ದಾಗ ಖುಷಿ ಸಿಗುತ್ತೆ, ಆದರೆ ಕೊನೆಗೆ ಮಾಡಿದ ಕೆಲಸಕ್ಕೆ ಕರ್ಮ ಬಂದು ಹಿಡಿದುಕೊಳ್ಳುತ್ತೆ ಎಂದು ಸುದೀಪ್ ವೇದಿಕೆ ಮೇಲೆ ಹೇಳಿದ್ದಾರೆ.

ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಭವ್ಯಾ ಮೋಸದಾಟ:

ಬಿಗ್ ​ಬಾಸ್​ 5 ಸ್ಪರ್ಧಿಗಳಿಗೆ ಕ್ಯಾಪ್ಟನ್ಸಿ ಟಾಸ್ಕ್​ ಅನ್ನು ಕೊಟ್ಟಿದ್ದರು. ಐದು ಸ್ಪರ್ಧಿಗಳು ಸಾಲಾಗಿ ನಿಂತುಕೊಂಡಿರಬೇಕು. ಆಗ ಬಿಗ್​ ಬಾಸ್​ ಹೇಳುವ ನಂಬರ್​ನಲ್ಲಿರೋ ಚೆಂಡುಗಳನ್ನು ಓಡಿಹೋಗಿ ಹಿಡಿದು ಬಾಸ್ಕೆಟ್​ನಲ್ಲಿ ಹಾಕಬೇಕು. ಅದರಂತೆ ಸ್ಫರ್ಧಿಗಳು ಓಡಿ ಹೋಗಿ ಬಿಗ್​ಬಾಸ್​ ಹೇಳಿದ ನಂಬರ್​ನಲ್ಲಿರೋ ಚೆಂಡುಗಳನ್ನು ತೆಗೆದುಕೊಂಡು ಓಡುತ್ತಾ, ಜಾರಿ ಬಿಳುತ್ತಾ ಬುಟ್ಟಿಗೆ ಹಾಕಿದ್ದಾರೆ. ಆದರೆ ಭವ್ಯಾ ಗೌಡ ಬೇರೆ ನಂಬರ್​ನಿಂದಲೂ ಬಿದ್ದ ಬಾಲ್​ ಅನ್ನು ಎತ್ತಿಕೊಂಡು ಬುಟ್ಟಿಗೆ ಹಾಕಿದ್ದಾರೆ. ಇದನ್ನು ಮೋಕ್ಷಿತಾ ಕೂಡ ಗಮನಿಸಿದ್ದು, ಬೇರೆ ನಂಬರ್​ನಿಂದ ಬಿದ್ದ ಬಾಲ್ ಎತ್ತಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ರಜತ್ ಕೂಡ ಇದನ್ನು ಗಮನಿಸಿದ್ದಾರೆ. ಟಾಸ್ಕ್ ಮುಗಿದ ಬಳಿಕ ಈ ಬಗ್ಗೆ ಚರ್ಚೆ ನಡೆದಿದ್ದು, ಇದನ್ನೂ ಖುದ್ದು ನೋಡಿದ ರಜತ್​ಗೆ ಭವ್ಯಾ ಗೌಡ ಸುಮ್ಮನೆ ಇರು ಅಂತ ಹೇಳಿದ್ರು ಎಂದು ತ್ರಿವಿಕ್ರಮ್ ಅವರೊಂದಿಗೆ ಹೇಳಿದ್ದಾರೆ. ಸದ್ಯ ಬೇರೆ ಗೊಂಚಲಿನಿಂದ ಬಾಲ್ ಬಿದ್ದಿದೆ ಎಂದು ಗೊತ್ತಿದ್ದರು ಭವ್ಯಾ ಗೌಡ ಸತ್ಯ ಹೇಳದೇ ಸುಳ್ಳಿನಿಂದ ಕ್ಯಾಪ್ಟನ್ಸಿ ಪಟ್ಟ ತಮ್ಮದಾಗಿಸಿಕೊಂಡಿದ್ದಾರೆ ಎಂಬ ಆರೋಪ ಇದೆ. ಈ ವಿಚಾರವಾಗಿ ಇಂದು ಕಿಚ್ಚನ ಪಂಜಾಯ್ತಿಯಲ್ಲಿ ಚರ್ಚೆ ಆಗಲಿದೆ.

BBK 11: ಬಿಗ್ ಬಾಸ್ ಮನೆಯಿಂದ ಇಂದೇ ಎಲಿಮಿನೇಟ್ ಆಗ್ತಾರ ಓರ್ವ ಸ್ಪರ್ಧಿ?