Monday, 30th December 2024

Zee Kannada: ಝೀ ಕನ್ನಡದಲ್ಲಿ ಹಾಡು, ಗೇಮ್, ಸಿನಿಮಾ; ಇದು ಭರ್ಜರಿ ಮನರಂಜನೆಯ ಮಹಾ ಧಮಾಕ

Zee Kannada

ಬೆಂಗಳೂರು: ಮನರಂಜನೆಗೆ ಮತ್ತೊಂದು ಹೆಸರೇ ಝೀ ಕನ್ನಡ (Zee Kannada) ಚಾನಲ್‌. ಜನಪ್ರಿಯ ಧಾರಾವಾಹಿಗಳಿಂದ ಮಾತ್ರವಲ್ಲದೇ ನಾನ್ ಫಿಕ್ಷನ್ ಶೋಗಳಿಗೆ ಹೊಸತನದ ಮೆರುಗನ್ನು ನೀಡಿ ಎಲ್ಲ ವಯೋಮಿತಿಯ ಪ್ರೇಕ್ಷಕರ ಪ್ರೀತಿಗೆ ಪಾತ್ರವಾಗಿದೆ. ವರ್ಷಾರಂಭಕ್ಕೆ ಮನರಂಜನೆಯ ಮಹಾಪೂರವನ್ನೇ ನಿಮಗಾಗಿ ಹೊತ್ತು ತರುತ್ತಿರುವ ಝೀ ಕನ್ನಡ.

ಸ್ವರ ಸಮರಕ್ಕೆ ಮತ್ತಷ್ಟು ಮೆರುಗು ತರಲು ‘ಸರಿಗಮಪ’ ಅಖಾಡಕ್ಕಿಳಿದ ಐವರು ದಿಗ್ಗಜ ಮೆಂಟರ್‌ಗಳು. 22 ಸ್ಪರ್ಧಿಗಳಲ್ಲಿ ಯಾರು ಯಾವ ಮೆಂಟರ್ ಪಾಲಾಗುತ್ತಾರೆ ಎನ್ನುವುದರ ಕುತೂಹಲ ವೀಕ್ಷಕರಲ್ಲಿ ಮತ್ತಷ್ಟು ಹೆಚ್ಚಾಗಿದೆ. ಇದೆಲ್ಲದಕ್ಕೂ ಉತ್ತರ ಸಿಗಲಿದೆ ಇದೇ ಶನಿವಾರ-ಭಾನುವಾರ ರಾತ್ರಿ 7:30ಕ್ಕೆ ‘ಸರಿಗಮಪ’ – ಮೆಂಟರ್ ಸೆಲೆಕ್ಷನ್ ರೌಂಡ್‌ನಲ್ಲಿ.

ವೀಕೆಂಡ್ ಅಂದಮೇಲೆ ಸಿನಿಮಾ ಘರ್ಜನೆ ಇರಬೇಕು ಅಲ್ವಾ? ಹಾಗಾಗಿಯೇ ಝೀ ಕನ್ನಡ ನಿಮಗಾಗಿ ತರುತ್ತಿದೆ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ‘ಮಾರ್ಟಿನ್’. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸಿರುವ, ಅಂಬಾರಿ ಖ್ಯಾತಿಯ ಎ.ಪಿ. ಅರ್ಜುನ್ ನಿರ್ದೇಶಿಸಿರುವ ಗ್ಲೋಬಲ್ ಟೆಲಿವಿಷನ್ ಪ್ರೀಮಿಯರ್ ‘ಮಾರ್ಟಿನ್’ ಚಿತ್ರವು ಡಿ. 29 ರಂದು ಸಂಜೆ 4 ಗಂಟೆಗೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಕನ್ನಡದ ಬಿಗ್ಗೆಸ್ಟ್ ಎಂಟರ್‌ಟೈನ್‌ಮೆಂಟ್‌ ಶೋಗೆ ಹೊಸತನ ತುಂಬಲು ‘ಝೀ ಎಂಟಟ್ರೈನರ್ಸ್ ಹೊಸವರ್ಷದ ಶುಭಾರಂಭಕ್ಕೆ’ ಬರಲಿದ್ದಾರೆ ರ‍್ಯಾಪರ್ ಚಂದನ್ ಶೆಟ್ಟಿ. ಅಷ್ಟೇ ಅಲ್ಲದೇ ಮೊತ್ತಮೊದಲ ಬಾರಿಗೆ ಕನ್ನಡ ಟೆಲಿವಿಷನ್ ನಲ್ಲಿ ‘ಕಾಟನ್ ಕ್ಯಾಂಡಿ’ ಅನ್ನುವ ಹಾಡನ್ನು ಪ್ರೀಮಿಯರ್ ಮಾಡಲಿದ್ದಾರೆ. ಇದು ಹೊಸ ವರ್ಷದ ಪಾರ್ಟಿ ಆಂಥೆಮ್ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ವೀಕ್ಷಿಸಿ ಝೀಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಝೀ ಎಂಟಟ್ರೈನರ್ಸ್ ಹೊಸವರ್ಷದ ಶುಭಾರಂಭ ಇದೇ ಶನಿ- ಭಾನುವಾರ ರಾತ್ರಿ 9:30ಕ್ಕೆ.

ಈ ಸುದ್ದಿಯನ್ನೂ ಓದಿ: Geetha Shivarajkumar: ನೀಮೋ ಸದಾ ನಮ್ಮೊಳಗಿದ್ದಾನೆ; ಮುದ್ದಿನ ಶ್ವಾನವನ್ನು ನೆನೆದು ಗೀತಾ ಶಿವರಾಜ್‌ಕುಮಾರ್‌ ಭಾವುಕ ಪತ್ರ