Wednesday, 1st January 2025

Ambedkar Statue: ಅಂಬೇಡ್ಕರ್ ವಿಗ್ರಹಕ್ಕೆ ಅಪಮಾನ ಸರ್ಕಾರಿ ಶಾಲೆ ಮುಂದೆ ಪ್ರತಿಭಟನೆ

ಅಂಬೇಡ್ಕರ್ ವಿಗ್ರಹಕ್ಕೆ ಕಟ್ಟಿರುವ ಕೊಳಕು ಬಟ್ಟೆಯನ್ನು ತೆರವು ಗೊಳಿಸಲು ಅಗ್ರಹ

ಚಿಂತಾಮಣಿ: ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಪದಾಧಿಕಾರಿಗಳು ಶನಿವಾರ ನಗರದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗ ಭಾರಿ ಪ್ರತಿಭಟನೆ ನಡೆಸಿದರು.

ಚಿಂತಾಮಣಿ ನಗರದ ಅಂಬೇಡ್ಕರ್ ಭವನ ಸಮೀಪವಿರುವ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಅಭಿವೃದ್ಧಿ ಪಡಿಸಲು ಲಿಯೋ ಕ್ಲಬ್ ಆಫ್ ಮಾರ್ಗ ದತ್ತು ಪಡೆದು ಅಭಿವೃದ್ಧಿಪಡಿಸಿ ಶಾಲೆಯ ಆವರಣದಲ್ಲಿ ಅಂಬೇಡ್ಕರ್ ವಿಗ್ರಹ ಪ್ರತಿಷ್ಠಾಪಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.

ಆದರೆ ಶಿಕ್ಷಣ ಇಲಾಖೆ ಅನುಮತಿ ನೀಡದೇ ಇರುವ ಕಾರಣಕ್ಕೆ ರಾತೋರಾತ್ರಿ ಆನೇಕಲ್ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಯುವಕರ ಸಂಘದ ಕೆಲ ಪದಾಧಿಕಾರಿಗಳು ಅಂಬೇಡ್ಕರ್ ವಿಗ್ರಹವನ್ನು ಇಟ್ಟು ಹೋಗಿದರು. ನಂತರ ತಾಲ್ಲೂಕು ಆಡಳಿತ ಪೊಲೀಸ್ ಇಲಾಖೆ,ಶಿಕ್ಷಣ ಇಲಾಖೆ,ಅಂಬೇಡ್ಕರ್ ವಿಗ್ರಹಕ್ಕೆ ಪೆಂಡಲ್ ಸುತ್ತಿ ಮುಚ್ಚಿದರು.

ಇದಕ್ಕೆ ಆಕ್ರೋಶಗೊಂಡ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಶಿಕ್ಷಣ ಇಲಾಖೆ, ತಾಲ್ಲೂಕ್ ಆಡಳಿತ, ಪೊಲೀಸ್ ಇಲಾಖೆ ಅಂಬೇಡ್ಕರ್ ವಿಗ್ರಹಕ್ಕೆ ಕೊಳಕು ಬಟ್ಟೆ ಸುಟ್ಟಿದ್ದಾರೆ ಎಂದು ಹಲವು ಪ್ರತಿಭಟನೆಗಳನ್ನು ನಡೆಸಿ ಕಳೆದ ಆರು ದಿನಗಳಿಂದ ತಾಲೂಕು ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.

ಶನಿವಾರ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಪದಾಧಿಕಾರಿಗಳು ಅಂಬೇಡ್ಕರ್ ವಿಗ್ರಹ ಇಟ್ಟಿರುವ ಶಾಲೆಯ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿ ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆಗೆ ಛೀಮಾರಿ ಹಾಕುತ್ತಾ ಧಿಕ್ಕಾರಗಳನ್ನು ಕೂಗಿದರು.

ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ರಾಜ್ಯಾಧ್ಯಕ್ಷರಾದ ಡಾಕ್ಟರ್ ಕೋದಂಡರಾಮ ರವರು ಮಾತನಾಡಿ, ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ಅಂಬೇಡ್ಕರ್ ರವರ ವಿಗ್ರಹಕ್ಕೆ ಕೊಳಕು ಬಟ್ಟೆ ಸುಟ್ಟಿ ಅವಮಾನ ಮಾಡಿದೆ ಈ ಕೂಡಲೇ ವಿಗ್ರಹದ ಸುತ್ತಲೂ ಸುತ್ತಿರುವ ಕೊಳಕು ಬಟ್ಟೆಯನ್ನು ತೆರವುಗೊಳಿಸಿ ಅಂಬೇಡ್ಕರ್ ರವರ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಗೌರವಿಸಲು ಅವಕಾಶ ಕಲ್ಪಿಸಿ ಕೊಡದೆ ಇದ್ದ ಸಂದರ್ಭದಲ್ಲಿ ಅಧಿಕಾರಿಗಳ ಹಾಗೂ ಇಲ್ಲಿನ ಜನಪ್ರತಿನಿಧಿಗಳ ವಿರುದ್ಧ ರಾಜ್ಯಮಟ್ಟದಲ್ಲಿ ಉಗ್ರ ಹೋರಾಟಗಳನ್ನು ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇನ್ನು ಪ್ರತಿಭಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಉಪ ವಿಭಾಗಾಧಿಕಾರಿ ಅಶ್ವಿನ್ ತಾಲೂಕು ದಂಡಾಧಿಕಾರಿಗಳಾದ ಸುದರ್ಶನ್ ಯಾದವ್ ಬಂದು ಪ್ರತಿಭಟನಾಕಾರರನ್ನು ಮಾತನಾಡಿ ಅಂಬೇಡ್ಕರ್ ವಿಗ್ರಹಕ್ಕೆ ಸುಟ್ಟಿರುವ ಬಟ್ಟೆಯನ್ನು ಕೂಡಲೇ ತೆರವುಗೊಳಿಸುತ್ತೇವೆ.ಹಾಗೂ ಶುದ್ಧ ಬಟ್ಟೆಯನ್ನು ಕಟ್ಟುತ್ತೇವೆ.ಈ ವಿಚಾರ ಸರ್ಕಾರದ ಮಟ್ಟದಲ್ಲಿದ್ದು ಮೇಲಾಧಿಕಾರಿಗಳಿಂದ ಆದೇಶ ಬರುವವರೆಗೂ ಅಂಬೇಡ್ಕರ್ ವಿಗ್ರಹ ಇಟ್ಟಿರುವ ನಿಷೇಧಿತ ಸ್ಥಳಕ್ಕೆ ಹೋಗಲು ಯಾರಿಗೂ ಅವಕಾಶ ಕಲ್ಪಿಸಿ ಕೊಡಲು ಆಗುವುದಿಲ್ಲ ಎಂದು ವಿವರಿಸಿದರು.

ಪ್ರತಿಭಟನೆಯಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ರಾಜ್ಯ ಅಧ್ಯಕ್ಷರಾದ ಡಾ.ಕೋದಂಡರಾಮ್, ರಾಜ್ಯ ಕಾರ್ಯದರ್ಶಿ ರಾಜೇಂದ್ರ ಬಾಬು. ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷ ಶ್ರೀಕಂಠ
ಚಿಂತಾಮಣಿ ತಾಲೂಕು ಅಧ್ಯಕ್ಷರ ಶ್ರೀನಿವಾಸ್,ಖಜಾಂಚಿ ಗೋವಿಂದ,ನಾಗೇಶ್,ವಾಸ್ದೇವ್,ಚಲಪತಿ,ಬಾಗೇಪಲ್ಲಿ ನಾಗೇಶ್ ಸೇರಿದಂತ ಮತ್ತಿತರರು ಇದ್ದರು.