Thursday, 31st October 2024

ಕಾಂಗ್ರೆಸ್, ಬಿಜೆಪಿ-ಪಕ್ಷೇತರ ಅಭ್ಯರ್ಥಿಗಳ ನೇರ ಹಣಾಹಣಿ

ವಿಶೇಷ ವರದಿ: ಮುರಾರಿ ಭಜಂತ್ರಿ, ಕುಕನೂರು

ತಾಲೂಕಿನ 15 ಗ್ರಾ.ಪಂ. ಚುನಾವಣೆ ಭರ್ಜರಿ ಪ್ರಚಾರದಲ್ಲಿ ಅಭ್ಯರ್ಥಿಗಳು

ಗ್ರಾಮ ಪಂಚಾಯಿತಿ ಚುನಾವಣೆಗೆ ಮೊದಲ ಹಂತದ ಚುನಾವಣೆಯಲ್ಲಿ ತಾಲೂಕಿನ 15 ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳ ತ್ರಿಕೋಣ ಸ್ಪರ್ಧೆ ಬಲು ಜೋರಾಗಿದೆ.

ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆಯ ನಾಮಪತ್ರ ಹಿಂದೆ ಪಡೆಯುವ ಅಂತಿಮ ದಿನಾಂಕ 14ರಂದು ಮುಗಿದಿದ್ದು, ಕುಕನೂರು ತಾಲೂಕಿನ 240ಸದಸ್ಯರ ಸಂಖ್ಯೆಯಲ್ಲಿ 17 ಸದಸ್ಯರು ಅವಿರೋ ಧವಾಗಿ ಆಯ್ಕೆಯಾಗಿದ್ದಾರೆ.

ಇನ್ನುಳಿದ ತಾಲೂಕಿನ ಗ್ರಾ.ಪಂ. 223 ಸ್ಥಾನಗಳಿಗೆ ಚುನಾವಣೆ 22ರಂದು ನಡೆಯಲಿದೆ. ತಾಲೂಕಿನ ಕುದರಿಮೋತಿ 49, ಹಿರೇ ಬಿಡ್ನಾಳ 33, ಮಂಗಳೂರು 77, ಬಳಗೇರಿ 38, ಶಿರೂರು 40, ಬೆಣಕಲ್ಲ್ 24, ಭಾನಾಪುರ 28, ತಳಕಲ್ 50, ಇಟಗಿ 37, ಬನ್ನಿಕೊಪ್ಪ
33, ಮಂಡಲಗೇರಿ 37, ಯರೇಹಂಚಿ ನಾಳ 20, ರಾಜೂರ 40, ನೇಲಜೇರಿ 26, ಮಸಬಹಂಚಿ ನಾಳ 24, ಒಟ್ಟು 15 ಗ್ರಾ.ಪಂ.556 ಅಭ್ಯರ್ಥಿಗಳು ಅಖಾಡದಲ್ಲಿ ಉಳಿದು ತಮ್ಮ ತಮ್ಮ ವಾರ್ಡ್‌ಗಳಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.

ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್-ಬಿಜೆಪಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಗ್ರಾ. ಪಂಚಾಯತಿ ಕಣದಲ್ಲಿ
ಉಳಿದಿರುವ ಬಿಜೆಪಿ ಹಾಗೂ ಕಾಂಗ್ರೆಸ್‌ನ ಅಭ್ಯರ್ಥಿಗಳು ತಮ್ಮ ಗ್ರಾಮದ ಮುಖಂಡರ ಸಾಥ್ ನೊಂದಿಗೆ ಪ್ರಚಾರಕ್ಕೆ ಇಳಿದಿದ್ದಾರೆ.
ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರ ಪ್ರತಿಷ್ಠೆ ಕಣವಾದ ಗ್ರಾ.ಪಂ ಚುನಾವಣೆ ಈಗಾಗಲೇ ಬಿಜೆಪಿಯು ಕುಕನೂರು ತಾಲೂಕು ಪಂಚಾಯಿತಿ ಹಾಗೂ ಪ.ಪಂ ಅಧಿಕಾರವನ್ನು ತನ್ನ ಮಡಿಲಿಗೆ ಹಾಕಿಕೊಂಡು ಕ್ಷೇತ್ರ ಶಾಸಕ ಹಾಲಪ್ಪ ಆಚಾರ್ ಹುಮ್ಮಸ್ಸು
ಜಾಸ್ತಿಯಾಗಿದೆ.

ಮಾಜಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯ ರೆಡ್ಡಿಯವರು ಈ ಸಾರಿ ಹೆಚ್ಚಿನ ಸಂಖ್ಯೆಯಲ್ಲಿ ತಾಲೂ ಕಿನ ಗ್ರಾ.ಪಂ. ಕಾಂಗ್ರೆಸ್
ಅಭ್ಯರ್ಥಿಗಳು ಗೆಲ್ಲಿಸುವ ಪ್ರಯತ್ನದಲ್ಲಿದ್ದಾರೆ. ಹಣ ಮತ್ತು ಹೆಂಡಕ್ಕೆ ನಿಮ್ಮ ಮತ ಮಾರಿಕೊಳ್ಳದಿರಿ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಜಾಗೃತಿ, ತಾಲೂಕಿನ ಗ್ರಾಮ ಪಂಚಾಯತ್ ಚುನಾವಣೆ ಭರಾಟೆ ಜೋರಾಗಿದ್ದು ಫೇಸ್‌ಬುಕ್ ಮತ್ತು ವಾಟ್ಸಪ್ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಗ್ರಾಮದ ಅಭಿವೃದ್ಧಿಗೆ ಸಮರ್ಥ ಸದಸ್ಯರನ್ನು ಆರಿಸಿ ತರಲು ಹಾಗೂ ಅಭ್ಯರ್ಥಿಗಳು ಹಣ ಹಾಗೂ ಹೆಂಡ ಆಮಿಷಗಳಿಗೆ ಮತದಾರರು ಬಲಿಯಾಗದಿರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಜಾಗೃತಿ ನಡೆಯುತ್ತಿದೆ.