Saturday, 4th January 2025

Viral Video: ಮಗುವಿನ ಬೌನ್ಸಿ ಚಯರ್ ಅಡಿಯಲ್ಲಿ ಅಡಗಿ ಕುಳಿತಿತ್ತು ವಿಷಕಾರಿ ‘ಟೈಗರ್ ಸ್ನೇಕ್’ – ಶಾಕಿಂಗ್ ವಿಡಿಯೋ ನೋಡಿ

ಆಸ್ಟ್ರೇಲಿಯಾದಲ್ಲಿ (Australia) ಕಂಡುಬರುವ ಮಾರಣಾಂತಿಕ ವಿಷಕಾರಿ ಹಾವೆಂದೇ ಗುರುತಿಸಲಾಗುವ ಟೈಗರ್ ಸ್ನೇಕ್ (Tiger Snake) ಒಂದು ಮೆಲ್ಬೊರ್ನ್ ನ (Melbourne) ಮನೆಯೊಂದಕ್ಕೆ ಕ್ರಿಸ್ಮಸ್ (Christmas) ಅತಿಥಿಯಾಗಿ ನುಗ್ಗಿ ಮನೆಮಂದಿಯನ್ನು ಶಾಕ್‌ಗೊಳಗಾಗಿಸಿದೆ. ಬಳಿಕ ಸ್ನೇಕ್ ಕ್ಯಾಚರ್ (Snake Catcher) ಬಂದು ಈ ಹಾವನ್ನು ಸುರಕ್ಷಿತವಾಗಿ ಹಿಡಿದು ಸಾಗಿಸಿದ್ದಾರೆ. ಈ ವಿಷಕಾರಿ ಹಾವು ಮನೆಯೊಳಗಡೆ ಮಗುವಿನ ಚಯರ್ ಅಡಿಯಲ್ಲಿ ನೆಲದಲ್ಲಿ ಮುದುಡಿ ಕುಳಿತಿರುವ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ (Viral Video) ಆಗುತ್ತಿದೆ.

ಮಗುವಿನ ಬೌನ್ಸಿ ಚಯರ್ ಅಡಿಯಲ್ಲಿ ಅಡಗಿ ಕುಳಿತಿದ್ದ ಈ ಹಾವನ್ನು ಮನೆಯವರು ಅಕಸ್ಮಿಕವಾಗಿ ಗಮನಿಸಿದ್ದಾರೆ. ಕೂಡಲೇ ಅವರು ಆ ಭಾಗದ ಸ್ನೇಕ್ ಕ್ಯಾಚರ್ ಮಾರ್ಕ್ ಪೆಲ್ಲಿಗೆ ಮಾಹಿತಿ ನೀಡಿದಾಗ, ಕೇವಲ 15 ನಿಮಿಷದಲ್ಲಿ ಸ್ಥಳಕ್ಕಾಗಮಿಸಿದ ಸ್ನೇಕ್ ಹಂಟರ್ ಎಂದೇ ಕರೆಯಿಸಿಕೊಳ‍್ಳುವ ಮಾರ್ಕ್, ಈ ಹಾವನ್ನು ಸುರಕ್ಷಿತವಾಗಿ ಹಿಡಿದು ಅಲ್ಲಿಂದ ಸಾಗಿಸಿದ್ದಾರೆ.

‘ಇದು ಕ್ರಿಸ್ಮಸ್ ರಾತ್ರಿಯಾಗಿದೆ, ಮತ್ತು ಈ ಮನೆಯಲ್ಲಿ ಎಲ್ಲರೂ ಸುಮ್ಮನಿದ್ದಾರೆ – ಈ ಟೈಗರ್ ಸ್ನೇಕ್ ಒಂದನ್ನು ಹೊರತುಪಡಿಸಿ, ಇದು ಮಗುವಿನ ಬೌನ್ಸರ್ ಚಯರ್ ಅಡಿಯಲ್ಲಿ ಕುಳಿತಿದೆ’ ಎಂದು ಸ್ನೇಕ್ ಹಂಟರ್ ಪೆಲ್ಲಿ ತನ್ನ ವಿಡಿಯೋದಲ್ಲಿ ವಿವರಣೆ ನೀಡಿದ್ದಾರೆ. ಪೆಲ್ಲಿ ಅವರು ಬಹಳ ಎಚ್ಚರಿಕೆಯಿಂದ, ಆ ಮನೆಯವರಿಗಾಗಲೀ ಅಥವಾ ಆ ಹಾವಿಗಾಗಲೀ ಯಾವುದೇ ತೊಂದರೆಯಾಗದ ರೀತಿಯಲ್ಲಿ ಅದನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ.

‘ಮಗುವಿನ ತಾಯಿ ಹಾಗೂ ತಂದೆ ಆ ದಿನ ತಡರಾತ್ರಿ ಈ ಟೈಗರ್ ಸ್ನೇಕ್ ಅವರ ಮನೆಯ ಲಾಂಜ್ ಮೂಲಕ ಹರಿದಾಡುತ್ತಾ ಅಲ್ಲೇ ಇದ್ದ ಮಗುವಿನ ಬೌನ್ಸರ್ ಚಯರ್ ಅಡಿಭಾಗದಲ್ಲಿ ಹೋಗಿ ಅಡಗಿ ಕುಳಿತಿರುವುದನ್ನು ನೊಡಿದರು. ಮೊದಲಿಗೆ ಅವರಿಗೆ ತಮ್ಮ ಕಣ್ಣುಗಳನ್ನೇ ನಂಬಲಾಗಲಿಲ್ಲ. ಬಳಿಕ ಇನ್ನೊಮ್ಮೆ ಸರಿಯಾಗಿ ಪರಿಶೀಲಿಸಿದಾಗ ಅವರಿಗೆ ತಮ್ಮ ಮನೆಗೆ ಟೈಗರ್ ಸ್ನೇಕ್ ಬಂದಿರುವುದು ಖಚಿತಪಟ್ಟಿದೆ’ ಎಂದು ಸ್ನೇಕ್ ಹಂಟರ್ ಪೆಲ್ಲಿ ವಿವರಿಸಿದ್ದಾರೆ.

ಬಳಿಕ ಈ ಹಾವನ್ನು ಸುರಕ್ಷಿತವಾಗಿ ಹಿಡಿದು ಅದರ ಪ್ರಾಕೃತಿಕ ವಾಸಸ್ಥಾನದಲ್ಲಿ ಬಿಡಲಾಯ್ತು. ಹಾವಿಗೆ ಯಾವುದೇ ರಿತಿಯಲ್ಲಿ ಗಾಯಗಳಾಗಿರಲಿಲ್ಲ ಎಂದು ತಿಳಿದುಬಂದಿದೆ.. ಇಂತಹ ಸಂದರ್ಭದಲ್ಲಿ ಹಾವಿಗಾಗಲೀ ಅಥವಾ ಮನೆಯವರಿಗಾಗಲೀ ಯಾವುದೇ ರಿತಿಯಲ್ಲಿ ಹಾನಿಯಾಗದಂತೆ ಹಾವುಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಅವುಗಳನ್ನು ಬಿಡುವಲ್ಲಿ ನುರಿತ ಸ್ನೇಕ್ ಕ್ಯಾಚರ್ ಗಳ ಅಗತ್ಯತೆ ಈ ಸಂದರ್ಭದಲ್ಲಿ ತುಂಬಾ ಉಪಯುಕ್ತವಾಗಿರುತ್ತದೆ.

ಈ ಸುದ್ದಿಯನ್ನೂ ಓದಿ: Viral Video: ನಿದ್ದೆಗೆ ಜಾರಿದ ಕ್ಯಾಬ್ ಡ್ರೈವರ್‌-ಕೀ ಪಡೆದು ತಾನೇ ಡ್ರೈವ್ ಮಾಡಿದ ರೋಡೀಸ್‌ ಶೋ ಸ್ಪರ್ಧಿ

ಹಾವುಗಳ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಳ್ಳುವುದು ಮತ್ತು ಮನೆಯೊಳಗೆ ಅಥವಾ ಜನವಸತಿಯ ಕಟ್ಟಡದೊಳಗೆ ನುಗ್ಗುವ ಪ್ರಕರಣಗಳು ಹೊಸದೇನಲ್ಲ. ಅದರಲ್ಲೂ ನಮ್ಮ ದೇಶದಲ್ಲಿ ಇಂತಹ ಘಟನೆಗಳು ಸರ್ವೇಸಾಮಾನ್ಯವಾಗಿ ವರದಿಯಾಗುತ್ತಲೇ ಇರುತ್ತದೆ. ಮುಂಬಯಿಯ ಕೋರ್ಟ್ ರೂಂನಲ್ಲಿ ಎರಡು ಅಡಿ ಉದ್ದದ ಹಾವೊಂದು ಕೋರ್ಟ್ ಕೋಣೆಯ ಕೇಸ್ ಫೈಲ್ ಗಳೊಳಗೆ ನುಸುಳಿಕೊಂಡಿತ್ತು. ಇಲ್ಲಿನ ಮುಲುಂಡ್ ಮ್ಯಜಿಸ್ಟ್ರೇಟ್ ಕೋರ್ಟ್ ನಲ್ಲಿರುವ ರೂಂ.ನಂಬರ್ 27ರಲ್ಲಿ ಈ ಘಟನೆ ನಡೆದಿದ್ದು ಇದರಿಂದ ಕೆಲ ಕಾಲ ಕೋರ್ಟ್ ಕಲಾಪಗಳು ಸ್ಥಗಿತಗೊಳ್ಳುವಂತಾಗಿತ್ತು. ಬಳಿಕ ಸ್ನೇಕ್ ಕ್ಯಾಚರ್ ಗಳನ್ನು ಕರೆಸಲಾಯಿತು. ಅವರು ಫೈಲ್ ಗಳೆಡೆಯಲ್ಲೆಲ್ಲಾ ಜಾಲಾಡಿದರೂ, ಆ ಹಾವು ಅದಾಗಲೇ ಅಲ್ಲೆಲ್ಲೋ ಸಂದುಗೊಂದಿಗಳಲ್ಲಿ ನುಸುಳಿ ಪರಾರಿಯಾಗಿತ್ತು.