Saturday, 4th January 2025

Viral Video: ರಾಷ್ಟ್ರೀಯ ಶೋಕಾಚರಣೆ ಸಂದರ್ಭದಲ್ಲಿ ಶಿಕ್ಷಕಿಯರ ಡ್ಯಾನ್ಸ್!; ವೈರಲ್ ಆಯ್ತು ಈ ವಿಡಿಯೊ

ಭೋಪಾಲ್‌: ಮಧ್ಯಪ್ರದೇಶದ (Madhya Pradesh) ಧಾರ್ (Dhar) ಜಿಲ್ಲೆಯಲ್ಲಿರುವ ಧರಾವಾರ (Dharavara) ಕಸ್ತೂರ್ಬಾ ಗಾಂಧಿ ಬಾಲಕಿಯರ ಹಾಸ್ಟೆಲ್ ಶಾಲೆಯಲ್ಲಿ (Kasturba Gandhi Girls Hostel School) ರಾಷ್ಟ್ರಿಯ ಶೋಕಾಚರಣೆ (National Mourning) ಸಂದರ್ಭದಲ್ಲಿ ಅಲ್ಲಿನ ಮಕ್ಕಳು, ಶಿಕ್ಷಕಿಯರು ಸೇರಿಕೊಂಡು ಕುಣಿದು ಕುಪ್ಪಳಿಸುತ್ತಿರುವ ಸುದ್ದಿ ಇದೀಗ ವಿವಾದವನ್ನು ಸೃಷ್ಟಿಸಿದೆ. ಘಟನೆಗೆ ಸಂಬಂಧಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ಅವರ ನಿಧನ ಹಿನ್ನಲೆಯಲ್ಲಿ ದೇಶಾದ್ಯಂತ ಸರ್ಕಾರಿ ಶೋಕಾಚರಣೆ ಜಾರಿಯಲ್ಲಿದೆ. ರಾಜ್ಯದಲ್ಲೂ 7 ದಿನಗಳ ಶೋಕಾಚರಣೆಗೆ ಸೂಚನೆ ನೀಡಲಾಗಿದೆ. ಆದರೆ ಇದನ್ನು ಪರಿಗಣಿಸದೆ ಈ ಸರಕಾರಿ ಹಾಸ್ಟೆಲ್‌ನ ವಾರ್ಷಿಕ ಕಾರ್ಯಕ್ರಮವನ್ನು ಆಯೋಜಿಸಿ ವಿವಾದವನ್ನು ಮೈಮೇಲೆ ಎಳೆದುಕೊಳ್ಳಲಾಗಿದೆ.

ಈ ವಿಡಿಯೊದಲ್ಲಿ, ಇಲ್ಲಿನ ಮಹಿಳಾ ಸಿಬ್ಬಂದಿ ವಿದ್ಯಾರ್ಥಿನಿಯರ ಜತೆ ಸಿniಮಾ ಹಾಡಿಗೆ ನೃತ್ಯ ಮಾಡುತ್ತಿರುವ ಕಂಡು ಬಂದಿದೆ. ಈ ವಿಡಿಯೋ ಕ್ಲಿಪ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಕಾಂಗ್ರೆಸ್ ವಕ್ತಾರ ಹಾಗೂ ವಿರೋ‍‍ಧ ಪಕ್ಷಗಳ ಪ್ರತಿನಿಧಿಗಳ ನಾಯಕ ಅಜಯ್  ಡಾ. ಮನೋಹರ್ ಸಿಂಗ್ ಠಾಕೂರ್ ಮಾತನಾಡಿ ಇದನ್ನೊಂದು ‘ನಾಚಿಕೆಗೇಡು’ ಮತ್ತು ಮಾಜಿ ಪ್ರಧಾನಮಂತ್ರಿಗೆ ತೋರಿದ ‘ಅಗೌರವ’ ಎಂದು ಖಂಡಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮೇಲ್ವಿಚಾರಕರು ಮತ್ತು ಶಿಕ್ಷಕಿಯರು ಕುಣಿದು ಕುಪ್ಪಳಿಸಿರುವುದನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ. ಅದರಲ್ಲೂ, ಮಕ್ಕಳ ಕಾರ್ಯಕ್ರಮವನ್ನಾದರೂ ನಾವು ಒಪ್ಪಿಕೊಳ್ಳಬಹುದು. ಆದರೆ ರಾಷ್ಟ್ರೀಯ ಶೋಕಾಚರಣೆ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದದವರು ಕುಣಿದು ಕುಪ್ಪಳಿಸಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಅಭಿಷೇಕ್ ಚೌಧರಿ ಅವರು, ಈ ಘಟನೆಗೆ ಸಂಬಂಧಿಸಿದಂತೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಲಾ ಸಿಬ್ಬಂದಿಗಳಿಗೆ ಶೊಕಾಸ್ ನೋಟಿಸ್‌ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇದೀಗ ಶೋಕಾಸ್ ನೋಟಿಸು ನಿಡಿರುವುದರಿಂದ ಸಂಬಂಧಿ ವ್ಯಕ್ತಿಗಳ ಪ್ರತಿಕ್ರಿಯೆಯನ್ನು ಪಡೆದು ಬಳಿಕ ಸೂಕ್ತ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಶೋಕಾಚರಣೆ ಸಂದರ್ಭದಲ್ಲಿ ಶಿಕ್ಷಕರೇ ಸಂಭ್ರಮದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಇದೀಗ ಎಲ್ಲೆಡೆ ಚರ್ಚೆಯನ್ನು ಹುಟ್ಟು ಹಾಕಿದೆ.

ಇದನ್ನೂ ಓದಿ: Viral Video: ನಿದ್ದೆಗೆ ಜಾರಿದ ಕ್ಯಾಬ್ ಡ್ರೈವರ್‌-ಕೀ ಪಡೆದು ತಾನೇ ಡ್ರೈವ್ ಮಾಡಿದ ರೋಡೀಸ್‌ ಶೋ ಸ್ಪರ್ಧಿ