Saturday, 4th January 2025

Science Mela: ನಳಂದ ಶಾಲೆಯಲ್ಲಿ ವಿಜ್ಞಾನ ಮೇಳ ಗಮನ ಸೆಳೆದ ವಿದ್ಯಾರ್ಥಿಗಳು: ವಿಜ್ಞಾನ ಮೇಳದಲ್ಲಿ ಗಮನ ಸೆಳೆದ ಇಶಾ ಟೆಂಪಲ್, ರಾಮಲಲ್ಲ

ಚಿಂತಾಮಣಿ: ನಗರದ ಸೊಣ್ಣಶೆಟ್ಟಿಹಳ್ಳಿ ಬಡಾವಣೆಯಲ್ಲಿರುವ ನಳಂದ ಶಾಲೆಯಲ್ಲಿ ಮಕ್ಕಳ ವಿಜ್ಞಾನ ಮೇಳ ವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಯಲ್ಲಿ ಏರ್ಪಡಿಸಿದ್ದ ವಿಜ್ಞಾನ ಮೇಳದಲ್ಲಿ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಿಂದ ತಾವೇ ಸಿದ್ಧಗೊಳಿಸಿ ತಂದ ವಿಜ್ಞಾನದ ಮಾದರಿಗಳು ಎಲ್ಲರ ಗಮನ ಸೆಳೆದವು.

ಪರಿಸರ ಸಂರಕ್ಷಣೆ,ಅಲ್ಲದೇ ಮಾನವನ ಇಂದಿನ ದೈನಂದಿನ ಚಟುವಟಿಕೆಗಳಿಂದ ಪರಿಸರದ ಮೇಲಾಗುತ್ತಿರುವ ದುಷ್ಟರಿಣಾಮಗಳ ಬಗ್ಗೆ ಅರೋಗ್ಯದ ಬಗ್ಗೆ ರಾಮಮಂದಿರ, ಈಶಾ ಟೆಂಪಲ್ ಸೇರಿದಂತೆ ವಿವಿಧ ಮಾದರಿಗಳನ್ನು ಮಕ್ಕಳು ಮಾಡಿಕೊಂಡು ಬರುವ ಮೂಲಕ ವಿಜ್ಞಾನ ಪ್ರದರ್ಶನ ವೀಕ್ಷಣೆಗೆ ಬಂದವರಿಗೆ ವಿವರಿಸಿದರು.

ಅಯೋಧ್ಯ ರಾಮಮಂದಿರ ಸೇರಿದಂತೆ ನಾಡು ನುಡಿಯ ವಿವಿಧ ಕಲಾಕೃತಿಗಳು,ಹೀಗೆ ವಿಭಿನ್ನ ಬಗೆಯ ಕಲಾ ಅದ್ಭುತಗಳು ನೋಡುಗರ ಕಣ್ಮನ ಸೆಳೆಯುತ್ತಿದ್ದವು ಪ್ರತಿಯೊಂದು ಕಲಾ ಕೃತಿಯ ಬಗ್ಗೆ ವಿದ್ಯಾರ್ಥಿಗಳ ವಿವರಣೆ ವಿಶಿಷ್ಟವಾಗಿತ್ತು.

ಅದೇ ರೀತಿ ಸೂರ್ಯ ಗ್ರಹಣ,ಚಂದ್ರ ಗ್ರಹಣ ಸೇರಿದಂತೆ ಪ್ರಕತಿಯ ನೈಜ ವಿಸ್ಮಯಗಳು, ಗ್ರಹಗಳ ಪರಿಚಯ, ಜಲಚಕ್ರ, ಜೀವಚಕ್ರ, ಪರಮಾಣು ರಚನೆ ಮಾದರಿಗಳು ನೀರಿನಲ್ಲಿ ಇರುವ ಕಲ್ಮಶಗಳು ಬಗ್ಗೆ ಮೈಕ್ರೋಸ್ಕೋಪ್ ಮೂಲಕ ಪೋಷಕರಿಗೆ ವಿದ್ಯಾರ್ಥಿಗಳಿಗೆ ತೋರಿಸಿಕೊಡುತ್ತಿದ್ದು ವಿಶೇಷ.

ಈಶಾ ಫೌಂಡೇಶನ್ ಚಿತ್ರವನ್ನು ಬಿಡಿಸಿ ಸುತ್ತಲೂ ದೀಪಗಳನ್ನು ಅಲಂಕರಿಸಿರುವುದು,ಮಕರ ಸಂಕ್ರಾAತಿ ಹಬ್ಬದ ಅಲಂಕಾರ, ಭಯಾನಕ ಮನೆ ಮತ್ತಿತರರು ಪ್ರದರ್ಶನಗಳು ಪೋಷಕರು ಸೇರಿದಂತೆ ಪ್ರದರ್ಶನ ವೀಕ್ಷಿಸಲು ಬಂದ ಸಾರ್ವಜನಿಕರು ಮತ್ತು ಇತರೆ ಶಾಲಾ ವಿದ್ಯಾರ್ಥಿಗಳ ಗಮನಸೆಳೆಯುವಲ್ಲಿ ಯಶಸ್ವಿಯಾದರು.

ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಗೋಪಾಲಕೃಷ್ಣ ರವರು ಮಾತನಾಡಿ ನಮ್ಮ ಶಾಲೆಯಲ್ಲಿ ಪ್ರಾಥಮಿಕ, ಮಾಧ್ಯಮಿಕ ಮುತ್ತು ಫ್ರೌಢಶಾಲೆಯ ವಿದ್ಯಾರ್ಥಿಗಳ ಮೂಲಕ ವಿಜ್ಞಾನ ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಪ್ರಮಖವಾಗಿ ಚಿಕ್ಕಬಳ್ಳಾಪುರ ಈಶಾ ಪೌಂಡೇಶನ್ ಅದರ ನವೀನ ರೀತಿಯಲ್ಲಿ ಪ್ರತಿಕೃತಿ ಮಾಡಿರುವುದು ಮತ್ತು ಅಯೋಧ್ಯ ಶ್ರೀರಾಮನ ಪ್ರತಿಕೃತಿ ದರ್ಶನ,ನರಕ ಮತ್ತು ಸ್ವರ್ಗದ ಬಗ್ಗೆ ಪ್ರದರ್ಶನ ಎಲ್ಲರ ಮನಸೆಳೆಯಿತು ಎಂದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಡಿ.ಎನ್.ನಾಗರತ್ನ,ಶಾಲೆಯ ಅಡಳಿತ ಮಂಡಳಿಯ ಕಾರ್ಯದರ್ಶಿ ಪ್ರಕಾಶ್, ಖಜಾಂಚಿ ವಿಜಿಯಕುಮಾರ್, ಶಿಕ್ಷಕರಾದ ಚೌಡರೆಡ್ಡಿ, ನಾರಾಯಸ್ವಾಮಿ, ಸುಲ್ತಾನ್, ಶಿಕ್ಷಕಿಯರಾದ ರೇಣುಕಾ, ಅನಿತಾ, ವನಿತಾ, ಮಮತಾ, ಜ್ಯೋತಿ, ಕಮಲಮ್ಮ,ರೋಹಿಣಿ,ರಾಜೇಶ್ವರಿ,ರೂಪಾ ಮತ್ತಿತರ ಶಿಕ್ಷಕರು ಸಿಬ್ಬಂದಿ ಪೋಷಕರು ಭಾಗವಹಿಸಿದ್ದರು.