Saturday, 4th January 2025

Chikkaballapur Crime: ಅಕ್ರಮವಾಗಿ ಗೋಮಾಂಸ ಸಾಗಣೆ: 4 ಮಂದಿ ಆರೋಪಿಗಳ ಸಹಿತ 3 ಬೊಲೆರೋ ವಾಹನ ಜಪ್ತಿ

ಚಿಕ್ಕಬಳ್ಳಾಪುರ: ಮಂಚೇನಹಳ್ಳಿ ವ್ಯಾಪ್ತಿಯ ಮಿಣಕನಗುರ್ಕಿ ಬಳಿ ಭಾರೀ ಪ್ರಮಾಣದಲ್ಲಿ ಗೋಮಾಂಸವನ್ನು ೩ ಬೊಲೆರೋ ವಾಹನದಲ್ಲಿ ತುಂಬಿಕೊAಡು ಬೆಂಗಳೂರಿಗೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ೪ ಮಂದಿಯನ್ನು  ಭಾನುವಾರ ವಾಹನ ಸಮೇತ ವಶಕ್ಕೆ ಚಿಕ್ಕಬಳ್ಳಾಪುರ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

ಹಿಂದೂಪುರದಿಂದ ಬೆಂಗಳೂರಿನ ಶಿವಾಜಿ ನಗರಕ್ಕೆ ಮಂಚೇನಹಳ್ಳಿ ಮಾರ್ಗವಾಗಿ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಆಸಾಮಿಗಳನ್ನು ಬಂಧಿಸಿ ೧೬ ಲಕ್ಷ ಮೌಲ್ಯದ ೮ ಟನ್ ಗೋ ಮಾಂಸವನ್ನು ವಶಕ್ಕೆ ಪಡೆಯಲಾಗಿದೆ.ಈ ಖದೀಮರು ಮೂಟೆ ಮತ್ತು ಟೊಮೇಟೊ ಡಬ್ಬಗಳನ್ನು ಅಡ್ಡ ಇಟ್ಟು ಮೂರು  ಬೊಲೆರೋ ವಾಹನಗಳಲ್ಲಿ ಮಾಂಸ ಸಾಗಿಸುತ್ತಿದ್ದರು. ಈಬಗ್ಗೆ ಚಿಕ್ಕಬಳ್ಳಾಪುರ  ಪೊಲೀಸರಿಗೆ ಬಂದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪರಿಣಾಮ ಮಿಣಕನಗುರ್ಕಿ ಮಾಂಸ ತುಂಬಿದ್ದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ವೇಳೆ ಬಂಧಿತರಾದ ಆರೋಪಿಗಳನ್ನು ಹಿಂದೂಪುರ ಮೂಲದ ಆರೀಪ್, ಅಸೀಂ ಬಾಪಾ, ಶಿವಾಜಿನಗರ ಮೂಲದ ರನ್ ಮತ್ತು ನೂರುಲಾ ಶರೀಫ್ ಎಂದು ತಿಳಿದು ಬಂದಿದೆ. ಬಂಧಿತರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಕಾರ್ಯಾಚರಣೆಯಲ್ಲಿ, ಸೆನ್  ಡಿವೈಎಸ್ಪಿ ರವಿಕುಮಾರ್, ಸೆನ್ ಇನ್ಸ್ಪೆಕ್ಟರ್ ಸೂರ್ಯಪ್ರಕಾಶ್, ಸೆನ್ ಪಿಎಸ್‌ಐ ಸರಸ್ವತಮ್ಮ,ಸೆನ್ ಸಿಬ್ಬಂದಿಗಳು ಪಾಲ್ಗೊಂಡಿದ್ದರು.