Saturday, 4th January 2025

Mukhyamantri Chandru: ಮಂಡಿ ಹರಿಯಣ್ಣನ ಪರಂಪರೆ ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ ವಾಗಿದೆ : ಮುಖ್ಯಮಂತ್ರಿ ಚಂದ್ರು ಅಭಿಮತ

ಗೌರಿಬಿದನೂರು : ಮಂಡಿ  ಹರಿಯಣ್ಣನಂತಹ ಪರೋಪಕಾರಿಯ ಪರಂಪರೆಯನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ, ಅವರು ಅಂದು ಅವರು ಸ್ಥಾಪನೆ ಮಾಡಿದ ಸಂಘ, ಮುಂದುವರೆಯಬೇಕಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.

ನಗರದ ಸಮತಾ ಶಾಲೆಯಲ್ಲಿ  ಹಿಂದೂ ಸಾದರ ಕ್ಷೇಮಭಿವೃದ್ಧಿ ಸಂಘದಿAದ ಭಾನುವಾರ ಏರ್ಪಡಿಸಿದ್ದ ಸಾದರ ಹಬ್ಬವನ್ನು ಮತ್ತು ಮಂಡಿ ಹರಿಯಣ್ಣ ಜನ್ಮದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾದರ ಜನಾಂಗಕ್ಕೆ ತನ್ನದೇ ಆದ ಇತಿಹಾಸ ಭವ್ಯ ಪರಂಪರೆಯಿದೆ. ಯುವ ಜನಾಂಗ ಹಿರಿಯರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಸಾಗುವ ಮೂಲಕ ಹರಿಯಣ್ಣನಂತ ಮಹಾನುಭಾವರು ಹಾಕಿಕೊಟ್ಟಿರುವ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕಿದೆ ಎಂದರು.

ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಮಾತನಾಡಿ, ಸಾದರ  ಸಮಾಜ ಸುಸಂಸ್ಕೃತ ಸಮಾಜವಾಗಿದ್ದು, ಅದರದೇ ಆದ ವಿಶಿಷ್ಟತೆ ಹೊಂದಿದೆ. ೧೨೦ ವರ್ಷಗಳ ಹಿಂದೆಯೇ ಮಂಡಿ ಹರಿಯಣ್ಣ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿದ್ದರು ಎನ್ನುವುದೇ ಸಂತೋಷ ತಂದಿದೆ.ಸಾದರ ಸಮುದಾಯ ಮುಂದುವರೆಯಬೇಕು ಎಂದು ಅಂದಿನ ಕಾಲದಲ್ಲೇ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪನೆ ಮಾಡಿದ್ದರು. ಸಮುದಾಯದ ಯುವಕರು ಸಮಾಜದಲ್ಲಿ ಮುಂದೆ ಬರಲು  ತಮ್ಮ ಗಳಿಕೆಯ ಹಣವನ್ನು ಮೀಸಲಿಟ್ಟಿದ್ದರು. ಇಂತಹ ಮಹಾನ್ ವ್ಯಕ್ತಿ ಯ ಹಬ್ಬ ನಡೆಸುತ್ತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.

ನಮ್ಮ ತಾಲ್ಲೂಕಿನಲ್ಲಿ ಸಾದರ ಸಮುದಾಯದ ಅಭಿವೃದ್ಧಿಗೆ ಸರ್ಕಾರದ ವತಿಯಿಂದ ದೊರೆಯುವ ಎಲ್ಲಾ ರೀತಿಯಲ್ಲಿ ಸೌಲಭ್ಯಗಳನ್ನು ಸಕಾಲಕ್ಕೆ ಒದಗಿಸಿಕೊಡಲು ಸಿದ್ದವಾಗಿರುವುದಾಗಿ ಇದೇ ವೇಳೆ ತಿಳಿಸಿದರು.

ಮಾಜಿ ಕೃಷಿ ಸಚಿವ ಎನ್.ಎಚ್.ಶಿವಶಂಕರ್ ರೆಡ್ಡಿ ಮಾತನಾಡಿ, ಮಂಡಿ ಹರಿಯಣ್ಣ ನವರು ದೂರ ದೃಷ್ಟಿಯುಳ್ಳ ವ್ಯಕ್ತಿಯಾಗಿದ್ದರು.ಅವರ ದೂರಾಲೋಚನೆಗಳು ಇಂದಿನ ಪೀಳಿಗೆಗೆ ಮಾದರಿಯಾಗಿದೆ. ಅವರ ಉದಾರ ಸ್ವಭಾವ ಸಮಾಜಸೇವಾಗುಣ ಮಾದರ ಸಮುದಾಯಕ್ಕೆ ಮಾದರಿಯಾಗಲಿ ಎಂದು ತಿಳಿಸಿದರು.

ಮಂಡಿ ಹರಿಯಣ್ಣನ ಮೊಮ್ಮಗ ಕ್ಯಾಪ್ಟನ್ ಹರೀಶ್ ಮಾತನಾಡಿ, ಬಲಗೈನಲ್ಲಿ ಕೂಟ ಹಣ ಎಡ ಕೈಗೆ ಗೊತ್ತಾಗದಂತೆ ಸಹಾಯ ಮಾಡಿ, ಎಲೆಮರೆ ಕಾಯಿಯಂತೆ ಜೀವನ ನಡೆಸಿದವರು ತಾತ ಮಂಡಿ ಹರಿಯಣ್ಣ. ಇದೇ ಹಾದಿಯಲ್ಲಿ ಸಾಗುತ್ತಿರುವ ನಾವು ಸಾದರ ಸಮುದಾಯಕ್ಕೆ ವಿದ್ಯಾಭ್ಯಾಸದ ಜೊತೆಗೆ ಕರ ಕುಶಲ ಕೆಲಸದ ತರಬೇತಿ ನೀಡಿ ಅವರು ಜೀವನ ರೂಪಿಸಿಕೊಳ್ಳಲು  ನೆರವಾಗುವ ಯೋಜನೆ ರೂಪಿಸಲಾಗಿದೆ ಎಂದರು.

ಸಮುದಾಯದ ಮುಖಂಡರಾದ, ಸಿ.ಆರ್.ನರಸಿಂಹ ಮೂರ್ತಿ, ಬಿಜೆಪಿ ಯ ರವಿನಾರಾಯಣ ರೆಡ್ಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಾಧಕರಿಗೆ ಎಂ.ಎಸ್ ಮಲ್ಲಯ್ಯ ಮತ್ತು ಹರಿಯಣ್ಣ ಪ್ರಶಸ್ತಿಯನ್ನು ನೀಡಿ ಸನ್ಮಾನಿಸ ಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ನಗರದ ವಾಲ್ಮೀಕಿ ವೃತ್ತದಿಂದ, ಸಮತಾ ಶಾಲೆಯವರೆಗೆ ನೂರಾರು ಮಹಿಳೆಯರು ಪೂರ್ಣ ಕುಂಭ ಕಲಶಗಳನ್ನು ಹೊತ್ತು  ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಕಳೆತಂದರು.

ಇದೇ ಸಂದರ್ಭದಲ್ಲಿ, ಮುಖ್ಯಮಂತ್ರಿ ಚಂದ್ರು, ಕೆ ಎಚ್ ಪುಟ್ಟಸ್ವಾಮಿ ಗೌಡ, ಕೇಶವ ರೆಡ್ಡಿ, ಶಿವ ಶಂಕರ್ ರೆಡ್ಡಿ, ಸಿ ಆರ್ ನರಸಿಂಹ ಮೂರ್ತಿ, ರವಿನಾರಾಯಣ ರೆಡ್ಡಿ, ಕ್ಯಾಪ್ಟನ್ ಹರೀಶ್ , ಗಂಗಲಕ್ಷ್ಮಮ್ಮ, ರವಿಶಂಕರ್, ಕೃಷ್ಣಯ್ಯ, ವೆಂಕಟನಾರಾಯಣಪ್ಪ, ವೇಣುಗೋಪಾಲ್, ಸಂಕೇತ್ ಶ್ರೀರಾಮ್, ನಂಜೇ ಗೌಡ  ಮತ್ತು ಸಮುದಾಯದ ಮುಖಂಡರು ಉಪಸ್ಥಿತರಿದ್ದರು.