Saturday, 4th January 2025

Bhagya Lakshmi Serial: ಅಡುಗೆ ಮನೆ-ಬಚ್ಚಲು ಮನೆ ಎಲ್ಲ ನಿಂದೆ: ಶ್ರೇಷ್ಠಾಳ ಬೆಂಡೆತ್ತಿದ ಭಾಗ್ಯಾ

Bhagyalakshmi serial (5)

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ (Bhagya Lakshmi Serial) ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ಸದ್ಯ ಹೊಸ ವಿಚಾರ ಎನಂದ್ರೆ, ಶ್ರೇಷ್ಠಾಳನ್ನು ತಾಂಡವ್ ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ. ಇದರಲ್ಲಿ ಟ್ವಿಸ್ಟ್ ಏನಂದ್ರೆ ಸ್ವತಃ ಭಾಗ್ಯಾ ಹಾಗೂ ತಾಂಡವ್ ಅಮ್ಮ ಶ್ರೇಷ್ಠಾಳನ್ನು ಆರತಿ ಎತ್ತಿ ಮನೆಯೊಳಗೆ ಸ್ವೀಕರಿಸಿದ್ದಾರೆ. ಇದು ಧಾರಾವಾಹಿಯ ಮಹಾತಿರುವು ಎನ್ನಲಾಗುತ್ತಿದೆ.

ಶ್ರೇಷ್ಠಾ ಬ್ಲಾಕ್‌ಮೇಲ್‌ಗೆ ಹೆದರಿದ ತಾಂಡವ್‌ ಆಕೆಯನ್ನು ಮನೆಗೆ ಕರೆದುಕೊಂದು ಬಂದಿದ್ದಾನೆ. ಸಸ್ಪೆಂಡ್ ಆಗಿದ್ದ ತನ್ವಿಯನ್ನು ಪುನಃ ಕಾಲೇಜಿಗೆ ಸೇರಿಸುವ ಬಗ್ಗೆ ಪ್ರಿನ್ಸಿಪಾಲ್ ಜೊತೆ ಮಾತನಾಡುತ್ತಿರುವಾಗ ತಾಂಡವ್​ಗೆ ಶ್ರೇಷ್ಠಾ ಶಾಕಿಂಗ್ ಮೆಸೇಜ್ ಕಳುಹಿಸಿದ್ದಳು. ‘‘ಇದು ನಿನ್ಗೆ ನನ್ ಕಡೆಯಿಂದ ಬರೋ ಕೊನೇ ಮೆಸೇಜ್. ಇವತ್ತು ನಾನು ನಿನ್ ಹೆಸರು ಬರೆದಿಟ್ಟು ಸೂಸೈಡ್ ಮಾಡಿಕೊಳ್ತಾ ಇದ್ದೇನೆ’’ ಎಂದು ಶ್ರೇಷ್ಠಾ ಮೆಸೇಜ್ ಬರುತ್ತದೆ. ಇದರಿಂದ ಗಾಬರಿಗೊಂಡ ತಾಂಡವ್ ಪ್ರಿನ್ಸಿಪಾಲ್ ಚೇಂಬರ್​ನಿಂದ ಶ್ರೇಷ್ಠಾ ಕಳುಹಿಸಿದ ಲೊಕೇಷನ್ ಕಡೆಗೆ ಹೋಗಿದ್ದ.

ನನಗೆ ನ್ಯಾಯ ದೊರೆಯುವವರೆಗೂ ನಾನು ಇಲ್ಲಿಂದ ಬರುವುದಿಲ್ಲ, ಇಲ್ಲವೆಂದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತಾಂಡವ್​ಗೆ ಶ್ರೇಷ್ಠಾ ಹೆದರಿಸುತ್ತಾಳೆ. ಈ ಡ್ರಾಮಾ ಮುಗಿದರೆ ಸಾಕು ಎಂದುಕೊಂಡ ತಾಂಡವ್‌, ಸರಿ ನಿನ್ನನ್ನು ಮನೆಗೆ ಕರೆದುಕೊಂಡು ಹೋಗುವೆ ಎನ್ನುತ್ತಾನೆ. ನೀನು ನಿನ್ನ ಹೆಂಡತಿಗೆ ಹೆದರಿ ನನ್ನನ್ನು ದೂರ ಮಾಡುತ್ತಿದ್ದೀಯ ಎಂದು ಶ್ರೇಷ್ಠಾ ಕೇಳುತ್ತಾಳೆ. ಅದು ನನ್ನ ಮನೆ, ನಾನು ಯಾರಿಗೂ ಹೆದರುವುದಿಲ್ಲ, ನಿನ್ನನ್ನು ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ತಾಂಡವ್‌ ಶ್ರೇಷ್ಠಾಳನ್ನು ಮನೆಗೆ ಕರೆತರುತ್ತಾನೆ.

ಇದರ ಮಧ್ಯೆ ಇವರಿಬ್ಬರ ಹೈ-ಡ್ರಾಮವನ್ನು ಫೇಸ್‌ಬುಕ್‌ ಲೈವ್‌ ಗಮನಿಸುವ ಭಾಗ್ಯಾ ನೋಡುತ್ತಾಳೆ. ಹೇಳಿದಂತೆ ಶ್ರೇಷ್ಠಾ ಕೈ ಹಿಡಿದು ತಾಂಡವ್‌ ಮನೆಗೆ ಕರೆತರುತ್ತಾನೆ. ಅವರಿಬ್ಬರನ್ನು ನೋಡಿ ಸುನಂದಾ ಕೋಪಗೊಳ್ಳುತ್ತಾಳೆ. ಇಬ್ಬರೂ ಕೈ ಹಿಡಿದುಕೊಂಡಿರುವುದನ್ನು ನೋಡಿ ಪೂಜಾ ಕೈ ಬಿಡಿಸಲು ಪ್ರಯತ್ನಿಸುತ್ತಾಳೆ. ಆದರೆ ತಾಂಡವ್‌ ಅವಳನ್ನು ತಳ್ಳುತ್ತಾನೆ.

ಆದರೆ, ನಂತರದಲ್ಲಿ ಭಾಗ್ಯ, ಶ್ರೇಷ್ಠಾ-ತಾಂಡವ್ ಮನೆಯೊಳಗೆ ಕಾಲಿಡುವ ಮುನ್ನ ಆರತಿಯೊಂದಿಗೆ ಬರಮಾಡಿಕೊಳ್ಳಲು ಮುಂದಾಗುತ್ತಾಳೆ. ಇದರ ಹಿಂದೆ ತಾಂಡವ್ ಅಮ್ಮ ಹಾಗೂ ಭಾಗ್ಯಾಳ ಮಾಸ್ಟರ್ ಪ್ಲ್ಯಾನ್ ಒಂದಿದೆ. ಶ್ರೇಷ್ಠಾ ನನ್ನ ಮಗನ ಆಯ್ಕೆ, ಅಂದ್ರೆ ಶ್ರೇಷ್ಠಾ ನನ್ನ ಸೊಸೆ ಎಂದು ಹೇಳುತ್ತಾಳೆ. ಯಾರು ಏನು ಅಂದ್ರು ಪರ್ವಾಗಿಲ್ಲ, ನನ್ನ ಮಗ ಕರ್ಕೊಂಡು ಬಂದಿದ್ದಾನೆ ಎಂದ ಮೇಲೆ ಆಕೆ ನನ್ನ ಸೊಸೆ ಎಂದು ತಾಂಡವ್ ಅಮ್ಮ ಶ್ರೇಷ್ಠಾಳನ್ನು ಮನೆಯೊಳಗೆ ಕರೆಸುತ್ತಾಳೆ.

ಮೊದಲ ದಿನ ಸುಮ್ಮನಿದ್ದ ಭಾಗ್ಯ ಹಾಗೂ ತಾಂಡವ್ ಅಮ್ಮ ಮುಂದಿನ ದಿನದಿಂದ ಅಸಲಿ ಆಟ ಶುರುಮಾಡಿಕೊಂಡಿದ್ದಾರೆ. ಬೆಳಗ್ಗೆಯಾದರೂ ಇನ್ನೂ ಏಳದ ಶ್ರೇಷ್ಠಾಳನ್ನು ತಾಂಡವ್ ಅಮ್ಮ ಒಂದು ಬಕೆಟ್​ನಲ್ಲಿ ನೀರು ಅವಳ ಮೇಲೆ ಹಾಕಿ ಎಬ್ಬಿಸುತ್ತಾಳೆ. ಆ ಬಳಿಕ ಮನೆಯಲ್ಲಿ ಆರಾಮಗಿದ್ದ ಶ್ರೇಷ್ಠಾಳನ್ನು ಕಂಡು ಭಾಗ್ಯ ಬಂದು, ನೀನು ಈ ಮನೆಯ ಸೊಸೆ ಅಡುಗೆ ಮನೆಯೂ ನಿಂದೆ, ಬಚ್ಚಲು ಮನೆಯೂ ನಿಂದೆ ಚೆನ್ನಾಗಿ ನಿಭಾಯಿಸು ಎಂದು ಮನೆ ಕೆಲಸವನ್ನು ಕೊಟ್ಟಿದ್ದಾಳೆ. ಸದ್ಯ ಶ್ರೇಷ್ಠಾ ಇದನ್ನೆಲ್ಲ ಸ್ವೀಕರಿಸುತ್ತಾಳಾ ಅಥವಾ ಒಂದೇ ದಿನಕ್ಕೆ ಮನೆಬಿಟ್ಟು ಓಡಿ ಹೋಗುತ್ತಾಳ ಎಂಬುದು ಮುಂದಿನ ಸಂಚಿಕೆಯಲ್ಲಿ ತಿಳಿದುಬರಬೇಕಿದೆ.

BBK 11: ಮುಗಿಯದ ಕಿತ್ತಾಟ: ರಜತ್​ಗೆ ಮತ್ತೊಮ್ಮೆ ಮಾತಿನ ಚಾಟಿ ಬೀಸಿದ ಚೈತ್ರಾ ಕುಂದಾಪುರ