Saturday, 4th January 2025

Kareena Kapoor: ಸ್ವಿಟ್ಜರ್ಲೆಂಡ್‌ನಲ್ಲಿ ಫ್ಯಾಮಿಲಿ ಜೊತೆ ಮಸ್ತ್ ವೆಕೇಷನ್​; ಫೊಟೋ ಹಂಚಿಕೊಂಡ ಕರೀನಾ

ನವ ದೆಹಲಿ: ಕರೀನಾ ಕಪೂರ್ (Kareena Kapoor) ಪತಿ ಸೈಫ್ ಅಲಿ ಖಾನ್(Saif Ali Khan)  ಕ್ರಿಸ್ ಮಸ್ ರಜೆಯನ್ನು ಎಂಜಾಯ್ ಮಾಡಲು ತನ್ನಿಬ್ಬರು ಮಕ್ಕಳಾದ ತೈಮೂರ್ ಅಲಿ ಖಾನ್, ಜೆಹ್ ಅಲಿ ಖಾನ್ ಜೊತೆ ಸ್ವಿಸ್ ಆಲ್ಪ್ಸ್ ಗೆ ಟೂರ್‌ ಮಾಡಿದ್ದಾರೆ. ಕರೀನಾ  ತನ್ನ ಮಕ್ಕಳಾದ  ತೈಮೂರ್ ಅಲಿ ಖಾನ್ ಮತ್ತು ಜೆಹ್ ಅಲಿ ಖಾನ್  ಜಾಕೆಟ್ ಧರಿಸಿ‌ ಸ್ಮಾರ್ಟ್ ಆಗಿ ಕಾಣಿಸಿಕೊಂಡಿದ್ದು ಸಖತ್ ಎಂಜಾಯ್ ಮಾಡಿರುವ ಫೋಟೋ ವನ್ನು ನಟಿ ಕರೀನಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕರೀನಾ ಮಕ್ಕಳ ಈ  ಫೋಟೋ ಕಂಡು ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

ಫೋಟೋ  ಹಂಚಿಕೊಂಡ ಕರೀನಾ

ತನ್ನ  ಮಕ್ಕಳ  ಫೋಟೋವನ್ನು  ನಟಿ  ಶೇರ್ ಮಾಡಿಕೊಂಡಿದ್ದಾರೆ. ಮಗ  ತೈಮೂರ್‌ನ ಎರಡು ಪೋಟೋ ಹಂಚಿಕೊಂಡಿದ್ದು ಮಗ  ಸ್ಕೈಯಿಂಗ್ ಡ್ರೆಸ್  ಧರಿಸಿ‌ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾನೆ. ಕೆಂಪು ಜಾಕೆಟ್‌ನೊಂದಿಗೆ ಬನಿಯಾನ್ ಪ್ಯಾಂಟ್ ಧರಿಸಿ ಕ್ಯೂಟ್ ರಿಯಾಕ್ಷನ್ ಕೊಟ್ಟಿದ್ದಾನೆ. ಈ ಫೋಟೋ ಹಂಚಿಕೊಂಡಿರುವ  ಕರೀನಾ “ಮೇರಾ ಬೇಟಾ ಎಂದು ಶೀರ್ಷಿಕೆ ನೀಡಿದ್ದಾರೆ.

ಇನ್ನೊಂದು ಚಿತ್ರದಲ್ಲಿ, ತೈಮೂರ್  ಸ್ಕೈಯಿಂಗ್ ಮಾಡುವ ಚಿತ್ರದ ಜೊತೆಗೆ ತನ್ನ ಕಿರಿಯ ಮಗ  ಹಿಮದ ಮೇಲೆ ಎಂಜಾಯ್ ಮಾಡುವ  ಫೋಟೋ ಹಂಚಿ‌ ಕೊಂಡಿದ್ದು ಕರೀನಾ ಅಭಿಮಾನಿಗಳು ವ್ಹಾವ್! ಕ್ಯೂಟ್ ಇತ್ಯಾದಿ  ರಿಯಾಕ್ಷನ್ ನೀಡಿದ್ದಾರೆ. ಒಟ್ಟಿನಲ್ಲಿ ಸ್ವಿಟ್ಜರ್ಲೆಂಡ್ ನಲ್ಲಿ ಫ್ಯಾಮಿಲಿ ಜೊತೆ ಮಸ್ತ್ ಆಗಿ ನಟಿ ಕರೀನಾ ವೆಕೇಷನ್​ ಎಂಜಾಯ್ ಮಾಡಿದ್ದಾರೆ.

ಇತ್ತೀಚೆಗೆ ಅಷ್ಟೇ ನಟಿ  ಮಾಲ್ಡೀವ್ ಟ್ರಿಪ್ ಹೋಗಿರುವ  ಫೋಟೋ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು. ಮಕ್ಕಳಾದ ಬಳಿಕ ನಟಿ  ಕರೀನಾ ಕಪೂರ್ ಫ್ಯಾಮಿಲಿ ಲೈಫ್ ನಲ್ಲಿ  ಬ್ಯುಸಿ ಇದ್ರು, ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದಿದ್ರೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ.

ನಟಿ ‌ಕರೀನಾ ಹಲವು ವರ್ಷಗಳ ನಟನೆ ಮೂಲಕ ಅಭಿಮಾನಿಗಳ ಹೃದಯ ಗೆದ್ದವರು.  ಇಂದಿಗೂ ಅಭಿಮಾನಿಗಳಲ್ಲಿ ಕರೀನಾ ಕ್ರೇಜ್  ಹೆಚ್ಚಿದ್ದು ಅವರ ಮುಂದಿನ ಸಿನಿಮಾಕ್ಕೆ ‌ಮೋಸ್ಟ್ ವೈಟಿಂಗ್ ನಲ್ಲಿ ಇದ್ದಾರೆ. ಕ್ಕಪೂರ್ ಕೊನೆಯದಾಗಿ ರೋಹಿತ್ ಶೆಟ್ಟಿ ನಿರ್ದೇಶನದ ಸಿಂಗಮ್ ಎಗೇನ್‌ನಲ್ಲಿ ಕಾಣಿಸಿಕೊಂಡಿದ್ದು ಇವರ ಪಾತ್ರಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ ನೀಡಿದ್ದರು.ಈ  ಆಕ್ಷನ್ ಎಂಟರ್‌ಟೈನರ್‌ ಚಿತ್ರದಲ್ಲಿ  ಅಜಯ್ ದೇವಗನ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಅಕ್ಷಯ್ ಕುಮಾರ್, ಅರ್ಜುನ್ ಕಪೂರ್, ಟೈಗರ್ ಶ್ರಾಫ್ ಮತ್ತು ಜಾಕಿ ಶ್ರಾಫ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಈ ಸುದ್ದಿಯನ್ನೂ ಓದಿ:Share Cinema Teaser: ಕನ್ನಡತಿ ಖ್ಯಾತಿ ಕಿರಣ್‌ ರಾಜ್‌ ನಟನೆಯ ʼಶೇರ್‌ʼ ಸಿನಿಮಾದ ಟೀಸರ್‌ ರಿಲೀಸ್‌