ಜೆರುಸೆಲಂ: ಇಸ್ರೇಲ್(Israel) ಪ್ರಜೆಗಳ ಮೇಲೆ ಹಮಾಸ್(Hamas) ನಡೆಸಿದ ಭೀಕರ ದಾಳಿಯ ನಂತರ, ಲಕ್ಷಾಂತರ ಪ್ಯಾಲೆಸ್ತೀನ್ ಕಟ್ಟಡ ನಿರ್ಮಾಣ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಅವರಿಗೆ ಇಸ್ರೇಲ್ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ. ಅವರ ಬದಲಿಗೆ ಇದೀಗ ಭಾರತದ 16,000ಕ್ಕೂ ಹೆಚ್ಚು ಕಾರ್ಮಿಕರು ಇಸ್ರೇಲ್ ಪ್ರವೇಶಿಸಿದ್ದಾರೆ ಎಂದು ತಿಳಿದು ಬಂದಿದೆ. (Israel Construction Work)
Indian workers replace barred #Palestinians in #Israel’s construction sites.
— NDTV Profit (@NDTVProfitIndia) December 30, 2024
Read more: https://t.co/JmIBKUsCnK pic.twitter.com/WmdDfMXAFz
ಇತ್ತೀಚೆಗೆ ಭಾರತದ ರಾಜು ನಿಶಾದ್ ಎಂಬ ಕಟ್ಟಡ ಕಾರ್ಮಿಕ ಸುರಕ್ಷತಾ ಪಟ್ಟಿ, ಶಿರಸ್ತ್ರಾಣ ಮತ್ತು ಕೆಲಸದ ಬೂಟುಗಳನ್ನು ತೊಟ್ಟು ಕೇಂದ್ರ ಇಸ್ರೇಲ್ ಪಟ್ಟಣವಾದ ಬೀರ್ ಯಾಕೋವ್ ನೆರೆಯಲ್ಲಿನ ನೂತನ ಕಟ್ಟಡವೊಂದರಲ್ಲಿ ಸಾರುವೆ ಕಟ್ಟುವ, ಇಟ್ಟಿಗೆಗಳನ್ನು ಒಡೆಯುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಎಂಬ ಮಾಹಿತಿಯಿದೆ. ಈ ವಿಸ್ತಾರ ನಿರ್ಮಾಣ ಜಾಗದಲ್ಲಿ ಆತ ಹಾಗೂ ಆತನೊಂದಿಗಿನ ಇನ್ನಿತರ ಭಾರತೀಯ ಕಾರ್ಮಿಕರು ಆ ಸ್ಥಳಕ್ಕೆ ಅಪರಿಚಿತರಂತೆ ಕಂಡು ಬಾರದಿದ್ದರೂ, ಅವರೆಲ್ಲ ಇಸ್ರೇಲ್ ನಿರ್ಮಾಣ ಕೆಲಸಕ್ಕೆ ಬಹುತೇಕ ಹೊಸಬರಾಗಿದ್ದಾರೆ ಎನ್ನಲಾಗಿದೆ. ಹಮಾಸ್ ದಾಳಿಯ ನಂತರ ಇಸ್ರೇಲ್ ಪ್ರವೇಶದಿಂದ ನಿಷೇಧಕ್ಕೊಳಗಾಗಿರುವ ಲಕ್ಷಾಂತರ ಪ್ಯಾಲೆಸ್ತೀಯನ್ನರ ಜಾಗವನ್ನು ತುಂಬುವ ಇಸ್ರೇಲ್ ಸರಕಾರದ ಪ್ರಯತ್ನದ ಭಾಗವಾಗಿ 16,000 ಕಾರ್ಮಿಕರು ಅಲ್ಲಿದ್ದಾರೆ ಎಂದು ಹೇಳಲಾಗಿದೆ.
ಒಂದು ವೇಳೆ ಹಮಾಸ್ ದಾಳಿಯೇನಾದರೂ ನಡೆದಿರದಿದ್ದರೆ, ನಿಧಾನವಾಗಿ ಮೇಲೇಳುತ್ತಿರುವ ಅತೀ ಎತ್ತರದ ಕಟ್ಟಡಗಳು, ಮನೆಗಳು, ರಸ್ತೆಗಳು ಹಾಗೂ ಪಾದಚಾರಿ ರಸ್ತೆಗಳ ಈ ಜಾಗದಲ್ಲಿ ಬಹುತೇಕ ಹಿಂದಿಯಲ್ಲದ ಅರೇಬಿಕ್, ಹೀಬೊ ಹಾಗೂ ಮ್ಯಾಂಡರಿನ್ ಭಾಷೆಯನ್ನೂ ಮಾತನಾಡುವ ಕಾರ್ಮಿಕರು ಇರುತ್ತಿದ್ದರು. ಹಮಾಸ್ ದಾಳಿಯಿಂದಾಗಿ ಗಾಝಾ ಪಟ್ಟಿಯಲ್ಲಿ ಇಂದಿಗೂ ಹಮಾಸ್ ಮತ್ತು ಇಸ್ರೇಲ್ ನಡುವಿನ ಭೀಕರ ಯುದ್ಧ ಮುಂದುವರೆದಿದೆ. ನಂತರ ಈ ಯುದ್ಧವು ಲೆಬನಾನ್ ನಲ್ಲಿರುವ ಇರಾನ್ ಬೆಂಬಲಿತ ಹಿಝುಲ್ಲಾ ಗುಂಪು, ಯೆಮೆನ್ ನಲ್ಲಿರುವ ಹುತಿ ಬಂಡುಕೋರರನ್ನೂ ಒಳಗೊಂಡಿದ್ದು, ಇಸ್ಲಾಮಿಕ್ ರಿಪಬ್ಲಿಕ್ ನೊಂದಿಗೆ ನೇರ ಸಂಘರ್ಷಕ್ಕೂ ಕಾರಣವಾಗಿದೆ.
ಕಳೆದ ಕೆಲವು ತಿಂಗಳ ಹಿಂದೆಯಷ್ಟೇ 10 ಸಾವಿರ ಕಟ್ಟಡ ನಿರ್ಮಾಣ ಕಾರ್ಮಿಕರ ಅಗತ್ಯವಿದ್ದು, ನೇಮಕ ಪ್ರಕ್ರಿಯೆ ನಡೆಸಿಕೊಡುವಂತೆ ಭಾರತಕ್ಕೆ ಇಸ್ರೇಲ್ ಮನವಿ ಮಾಡಿತ್ತು. ಅಲ್ಲದೇ, ಮನೆ ಆರೈಕೆಗಾಗಿ 5 ಸಾವಿರ ಸಿಬ್ಬಂದಿ ನೇಮಕ ಮಾಡಿಕೊಡುವಂತೆಯೂ ಕೋರಿತ್ತು. ಇಸ್ರೇಲ್ ಮನವಿಗೆ ಸ್ಪಂದಿಸಿರುವ ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮ (ಎನ್‌ಎಸ್‌ಡಿಸಿ), ಈ ಸಂಬಂಧ ಎಲ್ಲ ರಾಜ್ಯಗಳಿಗೆ ಪತ್ರ ಬರೆದಿತ್ತು. ಕಟ್ಟಡ ನಿರ್ಮಾಣ ಕಾರ್ಮಿಕರ ನೇಮಕ ಪ್ರಕ್ರಿಯೆ ಈ ಬಾರಿ ಮಹಾರಾಷ್ಟ್ರದಲ್ಲಿ ನಡೆದಿತ್ತು. ಮೊದಲ ಸುತ್ತಿನ ನೇಮಕಾತಿ ಪ್ರಕ್ರಿಯೆ ಉತ್ತರ ಪ್ರದೇಶ, ಹರಿಯಾಣ ಮತ್ತು ತೆಲಂಗಾಣದಲ್ಲಿ ನಡೆದಿದ್ದವು. ಆಗ, 10,349 ಕಾರ್ಮಿಕರು ನೇಮಕಗೊಂಡಿದ್ದರು.
ಈ ಸುದ್ದಿಯನ್ನೂ ಓದಿ:Obscene Video: ತರಗತಿಯಲ್ಲೇ ಕುಳಿತು ಅಶ್ಲೀಲ ವಿಡಿಯೊ ವೀಕ್ಷಿಸಿದ ಮಾನಗೆಟ್ಟ ಶಿಕ್ಷಕ; ನೋಡಿ ನಕ್ಕ ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿತ!