Saturday, 4th January 2025

Viral News: ಎಲೆಕ್ಟ್ರಿಕ್ ವೈರ್‌ ಹಾದು ಹೋಗುವ ಕಂಬವನ್ನೇರಿ ಕುಳಿತ ಭೂಪಾ! ಕೆಳಗಿಳಿಸೋಕೆ ಪಟ್ಟ ಪಾಡು ಯಾರಿಗೂ ಬೇಡ

ಮುಂಬೈ: ಸಾರ್ವಜನಿಕ ಸ್ಥಳಗಳಲ್ಲಿ ಕೆಲವು ವ್ಯಕ್ತಿಗಳು ಮಾಡುವ ಅವಾಂತರಗಳು ಕೆಲವೊಮ್ಮೆ ಗಂಡಾಂತರಕ್ಕೂ ಕಾರಣವಾಗುತ್ತದೆ. ಇನ್ನು ಕೆಲವೊಮ್ಮೆ ಇಂತಹ ವ್ಯಕ್ತಿಗಳ ಬೇಜವಾಬ್ದಾರಿತನದ ಕೃತ್ಯಗಳು ಸಾರ್ವಜನಿಕರಿಗೆ ಕಿರಿಕಿರಿ ಮತ್ತು ತೊಂದರೆಯನ್ನೂ ಉಂಟುಮಾಡುತ್ತಿರುತ್ತದೆ. ಅಂತಹ ಒಂದು ಘಟನೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ಎಲೆ‍ಕ್ಟ್ರಿಕ್ ವೈರ್ (OHE) ಹಾದುಹೋಗುವ ಕಂಬದ ಮೇಲೇರಿ ಕುಳಿತು ಅವಾಂತರ ಸೃಷ್ಟಿಸಿದ ಘಟನೆಯ ಸುದ್ದಿಯೊಂದು ಇದೀಗ ಸಿಕ್ಕಾಪಟ್ಟೆ ವೈರಲ್ (Viral News) ಆಗುತ್ತಿದೆ.

ಮುಂಬೈ (Mumbai) ಮಹಾನಗರದ ಬಾಂದ್ರಾ ರೈಲು ನಿಲ್ದಾಣದಲ್ಲಿ (Bandra Station) ಈ ಘಟನೆ ಡಿ.29ರ ರವಿವಾರ ಸಾಯಂಕಾಲದಂದು ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಆದಿತ್ಯವಾರ ಸಾಯಂಕಾಲ 5.11ರ ಸುಮಾರಿಗೆ ನಡೆದ ಈ ಘಟನೆಯನ್ನು ಪಶ್ಚಿಮ ರೈಲ್ವೇ ಅಧಿಕಾರಿಗಳು (Western Railway) ಶೀಘ್ರವಾಗಿ ನಿಭಾಯಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.

‘ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ಬಾಂದ್ರಾ ಲೋಕಲ್ ಸ್ಟೇಷನ್ ಸಮೀಪದ ಒ.ಹೆಚ್.ಇ. (OHE) ಕೇಬಲನ್ನು ಹತ್ತಿದ್ದಾನೆ. ಮತ್ತು ರಕ್ಷಣಾ ಕಾರ್ಯಾಚರಣೆ ಸಂದರ್ಭದಲ್ಲಿ ಅವನು ಕೆಳಗೆ ಬಿದ್ದರೂ ಆಸ್ಪತ್ರೆಗೆ ದಾಖಲುಗೊಳ್ಳಲು ನಿರಾಕರಿಸಿದ್ದಾನೆ. ಹಾಗಾಗಿ ಆ ವ್ಯಕ್ತಿಯನ್ನು ರೈಲ್ವೇ ರಕ್ಷಣಾ ದಳದ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ ಮತ್ತು ಈ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಸುರಕ್ಷಿತವಾಗಿ ಕಂಬಂದಿದ ಕೆಳಗಿಳಿಸಿದ ಬಳಿಕ, ಸಾಯಂಕಾಲ 5.31ರ ಸುಮಾರಿಗೆ ಈ ಲೈನ್ ಅನ್ನು ಕ್ಲಿಯರ್ ಗೊಳಿಸಲಾಗಿದೆ’ ಎಂದು ರೈಲ್ವೇ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಆನ್‌ಲೈನ್ ಸ್ಕ್ಯಾಮರ್‌ಗೆ ಚಳ್ಳೆ ಹಣ್ಣು! ಯುವಕ ರಾಕ್ಸ್… ನಕಲಿ ಪೊಲೀಸ್‌ ಶಾಕ್‌- ತುಂಬಾ ಮಜವಾಗಿದೆ ಈ ವಿಡಿಯೊ

ಈ ಘಟನೆಯ ಕಾರಣದಿಂದ ಜಿ.ಎಸ್.ಎಂ.ಟಿ.-ಗೋರೆಗಾಂವ್ ರೈಲು ಸಂಚಾರದಲ್ಲಿ ಮಾತ್ರ ವ್ಯತ್ಯಯವಾಗಿದೆ ಹಾಗೂ ಉಳಿದ ರೈಲುಗಳ ಓಡಾಟ ನಿಗದಿಯಂತೆ ನಡೆದಿದೆ ಎಂದು ಅಧಿಕಾರಿಗಳು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಈ ಮಾನಸಿಕ ಅಸ್ವಸ್ಥ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಅಪಾಯಕಾರಿ ರೀತಿಯಲ್ಲಿ ವರ್ತಿಸಿರುವ ಈ ಪ್ರಕರಣ ಕೊನೆಗೂ ಯಾವುದೇ ಅನಾಹುತಕ್ಕೆ ದಾರಿ ಮಾಡಿಕೊಡದೇ ಸುಖಾಂತ್ಯಗೊಂಡಿದೆ.