Saturday, 4th January 2025

BBK 11: ದಿನಸಿ ಕಳೆದುಕೊಳ್ಳುವ ಭಯ: ಉಗ್ರಂ ಮಂಜು-ತ್ರಿವಿಕ್ರಮ್ ನಡುವೆ ಮಾತಿನ ಚಕಮಕಿ

Manju and Trivikram (1)

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಹದಿನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಕಳೆದ ವಾರ ಐಶ್ವರ್ಯಾ ಸಿಂಧೋಗಿ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಸದ್ಯ ದೊಡ್ಮನೆಯಲ್ಲಿ ಒಂಬತ್ತು ಮಂದಿ ಇದ್ದಾರಷ್ಟೆ. ಹೀಗಾಗಿ ಈ ವಾರ ಇನ್ನಷ್ಟು ರೋಚಕತೆ ಸೃಷ್ಟಿಸಿದ್ದು, ಉಳಿದುಕೊಳ್ಳಲು ಸ್ಪರ್ಧಿಗಳು ಶ್ರಮಪಡಬೇಕಿದೆ. ಈ ವಾರದ ಟಾಸ್ಕ್​ಗಳು ಕೂಡ ಹೇಗಿರಬಹುದು ಎಂಬುದು ನೋಡಬೇಕಿದೆ. ಇದಕ್ಕೂ ಮುನ್ನ ಮನೆ ಮಂದಿಗೆ ದಿನಸಿ ಪಡೆದುಕೊಳ್ಳಲು ಟಾಸ್ಕ್ ಒಂದನ್ನು ನೀಡಲಾಗಿದೆ.

ಮನೆಮಂದಿಗೆ ಒಂದು ಲೆಟರ್ ಬಂದಿದ್ದು ಇದರಲ್ಲಿ ದಿನಸಿ ಸಾಮಾಗ್ರಿಗಳನ್ನು ಗಳಿಸಿ ಕೊಡುವ ಸಾಮರ್ಥ್ಯ ಇರುವ 6 ಸದಸ್ಯರು ಯಾರು ಎಂದು ಘೋಷಿಸಬೇಕೆಂದು ತಿಳಿಸಲಾಗಿದೆ. ಈ ವೇಳೆ ಎಲ್ಲ ಸ್ಪರ್ಧಿಗಳು ನಾನು.. ನಾನು ಎನ್ನುವಂತೆ ಕೈ ಮೇಲೆ ಎತ್ತಿದ್ದರು. ಈ ವೇಳೆ ಮಂಜು ಯಾವುದೇ ಟಾಸ್ಕ್​ ಕೊಟ್ಟರೂ ನಾವು ಆಡಲು ಸಿದ್ಧರಾಗಿದ್ದೇವೆ ಎಂದಿದ್ದಾರೆ. ಈ ಸಂದರ್ಭ ತ್ರಿವಿಕ್ರಮ್ ಮತ್ತು ಮಂಜು ನಡುವೆ ಮಾತಿನ ಚಕಮಕಿ ನಡೆದಿದೆ.

ಯಾವುದೇ ಟಾಸ್ಕ್ ನೀಡಿದರೂ ನಾನು ಆಡುವುದಕ್ಕೆ ಸಿದ್ಧನಾಗಿದ್ದೇನೆ ಎಂದು ಮಂಜು ಹೇಳಿದ್ದಾರೆ. ಆಗ ಚೈತ್ರಾ ಕುಂದಾಪುರ ನಾನು ಆಡಬೇಕು ಎಂದಿದ್ದಾರೆ. ಆಗ ಮಂಜು ಅವರು ಚೈತ್ರಾ ಅವರು ಟಾಸ್ಕ್‌ಗಳನ್ನು ಆಡೋದಕ್ಕೆ ಆಗೋದಿಲ್ಲ. ಧನು, ನಿಂಗ್ ಆಡೋಕೆ ಆಗಿಲ್ಲ ಅಂದ್ರೆ ಹಿಂದೆ ಹೋಗು ಎಂದು ಹೇಳಿದ್ದಾರೆ. ಇದು ಕೆಲವರಿಗೆ ಕೋಪ ತರಿಸಿದೆ.

ಗರಂ ಆದ ತ್ರಿವಿಕ್ರಮ್ ನಿನ್ನ ಪ್ರಾಬ್ಲಂ ಏನಣ್ಣ ಎಂದು ಪ್ರಶ್ನಿಸಿದ್ದಾರೆ. ನಾನು ಆಡಬೇಕು, ನಾನು ಆಡ್ತಿನಿ ಎಂದು ಮಂಜು ಹೇಳಿದರೆ, ದಿನಸಿಗಳು ನಿಮ್ ಕಡೆಯಿಂದ ಡ್ಯಾಮೇಜ್ ಆಯ್ತು ಅಂದ್ರೆ ಏನ್‌ ಮಾಡೋಣ ಎಂದೆಲ್ಲಾ ಮಂಜುಗೆ ತ್ರಿವಿಕ್ರಮ್‌ ಪ್ರಶ್ನೆ ಮಾಡಿದ್ದಾರೆ. ಇನ್ನು ಇಂದು ಕೊಟ್ಟಿರುವ ಟಾಸ್ಕ್​ನಲ್ಲಿ ಮಂಜು ಹಾಗೂ ಚೈತ್ರಾ ಇಬ್ಬರೂ ಫೇಲ್ ಆದಂತೆ ಕಾಣುತ್ತಿದೆ. ಏಕೆಂದರೆ ಬಾಲ್​ಗಳನ್ನು ಟೇಬಲ್​ ಮೇಲೆ ಸರಿಯಾದ ಕ್ರಮದಲ್ಲಿ ಬಾಯಿಯ ಮೂಲಕವೇ ಮುಂದಕ್ಕೆ ಸಾಗಿಸಬೇಕು. ಆದರೆ ಈ ಗೇಮ್​ನಲ್ಲಿ ಮಂಜು, ಚೈತ್ರಾ ಎಡವಿದಂತೆ ಕಾಣುತ್ತಿದೆ.

BBK 11: ಮುಗಿಯದ ಕಿತ್ತಾಟ: ರಜತ್​ಗೆ ಮತ್ತೊಮ್ಮೆ ಮಾತಿನ ಚಾಟಿ ಬೀಸಿದ ಚೈತ್ರಾ ಕುಂದಾಪುರ