Saturday, 4th January 2025

BBK 11: ಮಂಜು-ಭವ್ಯಾ ಮಧ್ಯೆ ಹೊತ್ತಿಕೊಂಡ ದುರಹಂಕಾರದ ಬೆಂಕಿ

Bhavya Gowda and Manju

ಹದಿನಾಲ್ಕನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಸದ್ಯ ಒಂಬತ್ತು ಮಂದಿ ಇದ್ದಾರಷ್ಟೆ. ಫಿನಾಲೆಗೆ ಕೆಲವೇ ವಾರಗಳು ಬಾಕಿ ಉಳಿದಿದ್ದು, ಟಾಸ್ಕ್​ಗಳ ಕಾವು ಮತ್ತಷ್ಟು ಹೆಚ್ಚುತ್ತಿದೆ. ಇಷ್ಟು ದಿನ ಕಾಪಾಡಿಕೊಂಡ ಬಂದಿದ್ದ ಬಾಂಡಿಂಗ್ ಒಂದೊಂದೆ ಒಡೆಯಲಾರಂಬಿಸಿದ್ದು, ವೈಯಕ್ತಿಕ ಆಟಕ್ಕೆ ಒತ್ತು ನೀಡುತ್ತಿದ್ದಾರೆ. ಇದರ ಮೊದಲ ಬಾಗವಾಗಿ ಇಂದು ಉಗ್ರಂ ಮಂಜು ಹಾಗೂ ಭವ್ಯಾ ಗೌಡ ನಡುವೆ ಜಟಾಪಟಿ ನಡೆದಿದೆ.

ವಾರದ ಮೊದಲ ದಿನವೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಹೊಸ ಟಾಸ್ಕ್‌ ಕೊಟ್ಟಿದ್ದಾರೆ. ನಕಾರಾತ್ಮಕ ಗುಣಗಳು ಒಂದು ರೀತಿಯ ರೋಗವೇ ಸರಿ. ಅದಕ್ಕಾಗಿ ಇಂತಹ ರೋಗಗಳನ್ನು ನಿವಾರಣೆ ಮಾಡಲು ಕಷಾಯ ಕುಡಿಸಬೇಕು ಎಂದು ಹೇಳಿದ್ದಾರೆ. ಈ ವೇಳೆ ಭವ್ಯಾ ಹಾಗೂ ಮಂಜು ನಡುವೆ ಸಖತ್‌ ವಾರ್‌ ಕೂಡ ಆಗಿದೆ.

ಮೊದಲಿಗೆ ಈ ಟಾಸ್ಕ್​ನಲ್ಲಿ ರಜತ್‌ ಅವರು ಕುತಂತ್ರಿ ಬುದ್ದಿಯ ರೋಗ ಚೈತ್ರಾ ಅವರು ಎಂದು ಅವರಿಗೆ ಕಷಾಯ ಕುಡಿಸಿದ್ದಾರೆ. ದುರಹಂಕಾರ ನಿರ್ವಹಣೆಯ ಕಷಾಯವನ್ನು ಮಂಜು ಅವರಿಗೆ ಭವ್ಯ ಅವರು ಕುಡಿಸಿದ್ದಾರೆ. ನಾನು ಅಂತ ತುಂಬಾ ನಿಮಗೆ ದುರಹಂಕಾರ ಇದೆ. ಅಲ್ಲದೇ ನಾನು ಇಷ್ಟು ಚಿಕ್ಕೋಳು ಆದ್ರು ಎಲ್ಲರ ಸರಿ ಸಮಾನವಾಗಿ ನಿಂತಿದ್ದೀನಿ ಅಂತ ಮಂಜುಗೆ ಟಾಂಗ್​ ಕೊಟ್ಟಿದ್ದಾರೆ. ಆಗ ಮಂಜು ನಾನು ಇರೋದೇ ಹಿಂಗೆ ನೀನು ನನಗೆ ಹೇಳೋದು ಬೇಡ, ನಿನಗೆ ಇದೆ ದುರಹಂಕಾರ ಎಂದು ಹೇಳಿದ್ದಾರೆ. ದುರಹಂಕಾರ ಒಪ್ಪಿಕೊಳ್ಳದ ಮಂಜು ಭವ್ಯಾ ಗೌಡ ಮೇಲೆ ಕೆಂಡ ಕಾರಿದ್ದಾರೆ.

ಮಂಜು-ತ್ರಿವಿಕ್ರಮ್ ಗಲಾಟೆ:

ಮನೆಮಂದಿಗೆ ಒಂದು ಲೆಟರ್ ಬಂದಿದ್ದು ಇದರಲ್ಲಿ ದಿನಸಿ ಸಾಮಾಗ್ರಿಗಳನ್ನು ಗಳಿಸಿ ಕೊಡುವ ಸಾಮರ್ಥ್ಯ ಇರುವ 6 ಸದಸ್ಯರು ಯಾರು ಎಂದು ಘೋಷಿಸಬೇಕೆಂದು ತಿಳಿಸಲಾಗಿದೆ. ಈ ವೇಳೆ ಎಲ್ಲ ಸ್ಪರ್ಧಿಗಳು ನಾನು.. ನಾನು ಎನ್ನುವಂತೆ ಕೈ ಮೇಲೆ ಎತ್ತಿದ್ದರು. ಈ ವೇಳೆ ಮಂಜು ಯಾವುದೇ ಟಾಸ್ಕ್​ ಕೊಟ್ಟರೂ ನಾವು ಆಡಲು ಸಿದ್ಧರಾಗಿದ್ದೇವೆ ಎಂದಿದ್ದಾರೆ. ಈ ಸಂದರ್ಭ ತ್ರಿವಿಕ್ರಮ್ ಮತ್ತು ಮಂಜು ನಡುವೆ ಮಾತಿನ ಚಕಮಕಿ ನಡೆದಿದೆ.

ಯಾವುದೇ ಟಾಸ್ಕ್ ನೀಡಿದರೂ ನಾನು ಆಡುವುದಕ್ಕೆ ಸಿದ್ಧನಾಗಿದ್ದೇನೆ ಎಂದು ಮಂಜು ಹೇಳಿದ್ದಾರೆ. ಆಗ ಚೈತ್ರಾ ಕುಂದಾಪುರ ನಾನು ಆಡಬೇಕು ಎಂದಿದ್ದಾರೆ. ಆಗ ಮಂಜು ಅವರು ಚೈತ್ರಾ ಅವರು ಟಾಸ್ಕ್‌ಗಳನ್ನು ಆಡೋದಕ್ಕೆ ಆಗೋದಿಲ್ಲ. ಧನು, ನಿಂಗ್ ಆಡೋಕೆ ಆಗಿಲ್ಲ ಅಂದ್ರೆ ಹಿಂದೆ ಹೋಗು ಎಂದು ಹೇಳಿದ್ದಾರೆ. ಇದು ಕೆಲವರಿಗೆ ಕೋಪ ತರಿಸಿದೆ. ಗರಂ ಆದ ತ್ರಿವಿಕ್ರಮ್ ನಿನ್ನ ಪ್ರಾಬ್ಲಂ ಏನಣ್ಣ ಎಂದು ಪ್ರಶ್ನಿಸಿದ್ದಾರೆ. ನಾನು ಆಡಬೇಕು, ನಾನು ಆಡ್ತಿನಿ ಎಂದು ಮಂಜು ಹೇಳಿದರೆ, ದಿನಸಿಗಳು ನಿಮ್ ಕಡೆಯಿಂದ ಡ್ಯಾಮೇಜ್ ಆಯ್ತು ಅಂದ್ರೆ ಏನ್‌ ಮಾಡೋಣ ಎಂದೆಲ್ಲಾ ಮಂಜುಗೆ ತ್ರಿವಿಕ್ರಮ್‌ ಪ್ರಶ್ನೆ ಮಾಡಿದ್ದಾರೆ.

BBK 11: ದಿನಸಿ ಕಳೆದುಕೊಳ್ಳುವ ಭಯ: ಉಗ್ರಂ ಮಂಜು-ತ್ರಿವಿಕ್ರಮ್ ನಡುವೆ ಮಾತಿನ ಚಕಮಕಿ