ಲಖನೌ: ಹೈ ಟೆನ್ಶನ್ ವೈರ್(high-tension wire) ಬಿದ್ದು ಇಬ್ಬರು ಬಾಲಕಿಯರು ಮತ್ತು ವ್ಯಕ್ತಿಯೊಬ್ಬ ಸಜೀವ ದಹನಗೊಂಡ ದಾರುಣ ಘಟನೆ ಉತ್ತರಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ. ಗೋರಖ್‌ಪುರದ ಸೋನ್‌ಬರ್ಸಾ ಮಾರುಕಟ್ಟೆ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೃತ ದುರ್ದೈವಿಗಳನ್ನು ಶಿವರಾಜ್ ನಿಶಾದ್ (27), ಅವರ ಮಗಳು ಅದಿತಿ (2) ಮತ್ತು ಸೊಸೆ ಅನು (9) ಎಂದು ಗುರುತಿಲಾಗಿದೆ(UP Shocker)
ಶಿವರಾಜ್ ನಿಶಾದ್ ಮತ್ತು ಇಬ್ಬರು ಮಕ್ಕಳು ಮೋಟಾರ್ ಸೈಕಲ್‌ನಲ್ಲಿ ಹೋಗುತ್ತಿದ್ದಾಗ 11,000 ವೋಲ್ಟ್ ವಿದ್ಯುತ್ ತಂತಿ ತುಂಡಾಗಿ ಅವರ ಮೇಲೆ ಬಿದ್ದಿದೆ. ವೈರು ತುಂಡಾಗಿ ಬೀಳುತ್ತಿದ್ದಂತೆ ವಾಹನ ಸಮೇತ ಮೂವರೂ ಹೊತ್ತಿ ಉರಿದಿದ್ದಾರೆ. ಸ್ಥಳೀಯರು ಅವರನ್ನು ರಕ್ಷಿಸಲು ಧಾವಿಸುವಷ್ಟರಲ್ಲಿ ಮೂವರು ಕುಟುಂಬದ ಸದಸ್ಯರು ಸಜೀವ ದಹನವಾಗಿದ್ದರು ಎಂದು ಅವರು ಹೇಳಿದರು.
गोरखपुर एम्स थाना क्षेत्र के विशुनपुर खुर्द टोला धनहा निवासी शिवराज निषाद (24 वर्ष) अपने 9 वर्षीया भतीजी व दो वर्षीया पुत्री को बाइक पर बैठाकर सोनबरसा बाजार से घर जा रहा थे।पुलिया के पास एचटी लाइन का तार टूट गया।बाइक सवार तीनो उसके चपेट में आ गए और जलकर तीनो की मौत हो गई है।
— RAJ PATHAK (JOURNALIST) (@Rajpathak4up) December 29, 2024
1/2 pic.twitter.com/tGgYK1DAZv
ಮೂವರೂ ದಿನಸಿ ಶಾಪಿಂಗ್ ಮುಗಿಸಿ ಸೋನ್‌ಬರ್ಸಾ ಮಾರುಕಟ್ಟೆಯಿಂದ ಮನೆಗೆ ಮರಳುತ್ತಿದ್ದಾಗ ಸರ್ದಾರ್‌ನಗರಕ್ಕೆ ಹೋಗುವ ಕಾಲುವೆ ರಸ್ತೆಯ ಕಡೆಗೆ ತಿರುಗಿದಾಗ ಹೈಟೆನ್ಷನ್ ತಂತಿ ತುಂಡಾಗಿ ಅವರ ಮೇಲೆ ಬಿದ್ದಿದೆ. ವಿದ್ಯುತ್ ಇಲಾಖೆಯ ಮುಖ್ಯ ಇಂಜಿನಿಯರ್ ಅಶುತೋಷ್ ಶ್ರೀವಾಸ್ತವ ಅವರು, ಪ್ರಾಥಮಿಕ ತನಿಖೆಯ ಪ್ರಕಾರ ಕೋತಿಯೊಂದು ತಂತಿಯ ಮೇಲೆ ಜಿಗಿದಿರಬಹುದು, ಇದರಿಂದಾಗಿ ಅದು ತುಂಡಾಗಿ ಬಿದ್ದಿರಬಹುದು ಎಂದು ಹೇಳಿದ್ದಾರೆ. ತಂತಿ ಒಡೆದ ನಂತರ ಲೈನ್ ಏಕೆ ಟ್ರಿಪ್ ಆಗಿಲ್ಲ ಎಂದು ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದರು.
ಪೂರ್ವಾಂಚಲ್ ವಿದ್ಯುತ್ ವಿತ್ರನ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಂಭು ಕುಮಾರ್ ಸಂತ್ರಸ್ತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು. ಅಧೀಕ್ಷಕ ಎಂಜಿನಿಯರ್ ಮತ್ತು ಕಾರ್ಯಪಾಲಕ ಎಂಜಿನಿಯರ್ ಸೇರಿದಂತೆ ಇಬ್ಬರು ಸದಸ್ಯರ ತಂಡವು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ.
ಈ ಸುದ್ದಿಯನ್ನೂ ಓದಿ: Fire Accident: ಭಾರೀ ಅಗ್ನಿ ದುರಂತ; ಮೂವರು ಸಜೀವ ದಹನ