Wednesday, 8th January 2025

Viral Video: ಮೊದಲ ಬಾರಿಗೆ ಪಿಜ್ಜಾ-ಬರ್ಗರ್‌ ಸವಿದ 90ರ ಅಜ್ಜಿ! ಕ್ಯೂಟ್ ರಿಯಾಕ್ಷನ್ ವಿಡಿಯೊ ಫುಲ್ ವೈರಲ್

Viral Video

ನವ ದೆಹಲಿ: ಮನೆಯಲ್ಲಿರುವ ಹಿರಿಯರು, ಅಜ್ಜ ಅಜ್ಜಿಯರು  ಇಂದಿಗೂ ಮನೆಯಲ್ಲಿ ತಯಾರಿಸಿದ ಆರೋಗ್ಯಕರ  ಆಹಾರ ಸವಿಯಲು ಇಷ್ಟ ಪಡುತ್ತಾರೆ. ಆದರೆ ಈಗ ಫಾಸ್ಟ್ ಪುಡ್ ಜಮಾನಾ! ಆದಾಗಿಯೂ ಅದೆಷ್ಟೋ ಹಿರಿಜೀವಗಳು ಇದರ ರುಚಿ ಹೇಗಿದೆ ಎಂದೂ ನೋಡದವರಿದ್ದಾರೆ. ಹಾಗೆ ಇಲ್ಲೊಬ್ಬ  ವಯಸ್ಸಾದ 90ರ ಮಹಿಳೆಯೊಬ್ಬರು ಮೊದಲ ಬಾರಿಗೆ ಪಿಜ್ಜಾ ಸವಿದು ಕ್ಯೂಟ್ ರಿಯಾಕ್ಷನ್ ನೀಡಿದ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ(Viral Video)

ಈ ವೈರಲ್ ವೀಡಿಯೊದಲ್ಲಿ, 90 ವರ್ಷದ ಅಜ್ಜಿಯೊಬ್ಬರು ತಮ್ಮ ಹುಟ್ಟುಹಬ್ಬದ ಆಚರಣೆಯಲ್ಲಿ ಮೊದಲ ಬಾರಿಗೆ ಪಿಜ್ಜಾವನ್ನು ತಿನ್ನಲು  ಪ್ರಯತ್ನಿಸಿದ್ದಾರೆ. ಈ  ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ  ಒಂಬತ್ತು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು ಅಜ್ಜಿಯ ಈ ಕ್ಯೂಟ್ ರಿಯಾಕ್ಷನ್‌ಗೆ ವೀಕ್ಷಕರು ಉತ್ತಮ ಪ್ರತಿಕ್ರಿಯೆ ‌ನೀಡಿದ್ದಾರೆ. ಮೊದಲ ಬಾರಿಗೆ ಪಿಜ್ಜಾ ತಿನ್ನಲು ಪ್ರಯತ್ನಿಸುವ ಅಜ್ಜಿಯ ರಿಯಾಕ್ಷನ್‌ ಅನ್ನು ಈ ವಿಡಿಯೊದಲ್ಲಿ ಕಾಣಬಹುದು. ಇತ್ತೀಚೆಗೆ ತಮ್ಮ 90 ವರ್ಷದ ಅಜ್ಜಿಯ ಹುಟ್ಟುಹಬ್ಬವನ್ನು ಮೊಮ್ಮಕ್ಕಳು ಆಚರಿಸಿದ್ದು ಅಜ್ಜಿಗೆ ‌ ಬರ್ಗರ್, ಪಿಜ್ಜಾ, ಪಾಸ್ತಾ , ಮೊಮೊಸ್, ಕೇಕ್ ಮತ್ತು ಡೊರಾಕೇಕ್‌ಗಳಂತಹ ಫಾಸ್ಟ್ ಫುಡ್‌ಗಳನ್ನು ನೀಡಿ ಅವುಗಳ ರುಚಿ ನೋಡಿ‌  ವಿಮರ್ಶೆಯನ್ನು ಹಂಚಿ ಕೊಳ್ಳಲು ಹೇಳುತ್ತಾರೆ.

ಆರಂಭದಲ್ಲಿ ಅವರು ಬರ್ಗರ್ ರುಚಿ ನೋಡುತ್ತಾರೆ. 90 ರ ವಯಸ್ಸಿನಲ್ಲಿ‌ ಮೊದಲ ಬಾರಿಗೆ  ಬರ್ಗರ್  ರುಚಿ ನೋಡಿದ  ಅಜ್ಜಿ ಅದನ್ನು ಇಷ್ಟಪಟ್ಟಿದ್ದಾಳೆ ಎನ್ನುವ ರಿಯಾಕ್ಷನ್ ಕೊಟ್ಟಿದ್ದಾರೆ. ಮೊದಲ ಬಾರಿಗೆ  ಬರ್ಗರ್  ರುಚಿ ನೋಡಿದ ನಂತರ‌ “ಅಚಾ ಅಚಾ ಲಗಾ (ನಾನು ಅದನ್ನು ಇಷ್ಟಪಟ್ಟೆ) ಎನ್ನುತ್ತಾರೆ. ಬರ್ಗರ್ ಮತ್ತು ಪಿಜ್ಜಾ ಎರಡಕ್ಕೂ ಅಜ್ಜಿಯ ರಿಯಾಕ್ಷನ್ ಸೂಪರ್ ಎನ್ನುವ ಥಂಬ್ಸ್ ಅಪ್ ಸಿಕ್ಕಿದೆ. 90ರ ಅಜ್ಜಿ  ವಿಭಿನ್ನವಾದ ಫಾಸ್ಟ್ ಫುಡ್ ಐಟಂಗಳನ್ನು ತಿನ್ನಲು ಪ್ರಯತ್ನಿಸುತ್ತಿರುವ ಈ ವಿಡಿಯೊ ಯೂಟ್ಯೂಬ್‌ನಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.

ಊರ್ಮಿಳಾ ಲಾವೇಕರ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೊ ಒಂಬತ್ತು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು ವೀಕ್ಷಕರು ಆಜ್ಜಿಗೆ  ಹುಟ್ಟುಹಬ್ಬದ ಶುಭಾಶಯ ಕೋರುವ ಜೊತೆಗೆ ಅಜ್ಜಿ‌ ಮುದ್ದಾಗಿ ಕಾಣುತ್ತಿದ್ದಾರೆ ಎನ್ನುವ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಅಜ್ಜಿ ಪಿಜ್ಜಾ ಇಷ್ಟ ಪಟ್ಟಿದ್ದಾರೆ ಎಂದು  ಪ್ರತಿಕ್ರಿಯೆ ನೀಡಿದ್ದಾರೆ‌.

ಈ ಸುದ್ದಿಯನ್ನೂ ಓದಿ: Neet Teacher: ಥೂ… ಕರ್ಮ… ಕೋಚಿಂಗ್‌ ಕ್ಲಾಸ್‌ ಆವರಣದಲ್ಲಿ ಬಯಾಲಜಿ ಶಿಕ್ಷಕನ ಸರಸ ಸಲ್ಲಾಪ;‌ ಪೆನ್‌ಡ್ರೈವ್ ವಿಡಿಯೊ ಫುಲ್‌ ವೈರಲ್!