Tuesday, 7th January 2025

BBK 11: ಫೈನಲ್ ಸ್ಪರ್ಧಿಗಳು ಯಾರೆಂದು ರಜತ್ ಬಳಿ ಗುಟ್ಟಾಗಿ ಹೇಳಿದ ಪತ್ನಿ ಅಕ್ಷಿತಾ

Akshitha and Rajath

ಬಿಗ್ ಬಾಸ್ ಕನ್ನಡ ಸಿಸನ್ 11 (Bigg Boss Kannada 11) ಇನ್ನು ಕೆಲವೇ ವಾರಗಳಲ್ಲಿ ಪೂರ್ಣಗೊಳ್ಳಲಿದೆ. ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಜೋರಾಗಿದೆ. ಸುಮಾರು 95 ದಿನಗಳ ಕಾಲ ಕುಟುಂಬವನ್ನು ಬಿಟ್ಟು ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಕುಟುಂಬದವರನ್ನು ಭೇಟಿ ಮಾಡುವ ಅವಕಾಶ ಒದಗಿಸಲಾಗಿತ್ತು. ಈ ವಾರ ಫ್ಯಾಮಿಲಿ ವೀಕ್ ಆಗಿತ್ತು. ಸ್ಪರ್ಧಿಗಳ ಅಮ್ಮಂದಿರು, ಅಪ್ಪಂದಿರು ಮಡದಿ, ಮಕ್ಕಳು ಬಿಗ್ ಬಾಸ್​ಗೆ ಬಂದು ಹೋದರು.

ಬಿಗ್ ಬಾಸ್ ಮನೆಯಲ್ಲಿರುವ 9 ಸ್ಪರ್ಧಿಗಳ ಕುಟುಂಬದವರು ಆಗಮಿಸಿದರು. ಅದರಲ್ಲಿ ಮುಖ್ಯವಾಗಿ ರಜತ್ ಕಿಶನ್ ಅವರ ಮಡದಿ ಮತ್ತು ಮಕ್ಕಳು ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟರು. ಸದಾ ಒಂದಲ್ಲ ಒಂದು ತರಲೆ ಮಾಡೋ ಪತಿ ರಜತ್‌ಗೆ ಪತ್ನಿ ಸಖತ್‌ ಆಗಿ ಕ್ಲಾಸ್‌ ಕೂಡ ತೆಗೆದುಕೊಂಡರು. ರಜತ್ ಹೆಂಡತಿಗೆ ನನ್ನ ಮಗಳು ಎಲ್ಲಿ ಅಂತ ಕೇಳಿದರು. ಆಗ ಅಕ್ಷಿತಾ ಬಂದಿಲ್ಲ ಅಂತ ಸುಳ್ಳು ಹೇಳಿದ್ದರು. ಇದಕ್ಕೆ ರಜತ್ ಬಿಗ್ ಬಾಸ್ ಇವರನ್ನು ಆಚೆ ಕಳುಹಿಸಿ ಡೋರ್ ಓಪನ್ ಮಾಡಿ ಅಂತ ಹೇಳಿದ್ದಾರೆ.

ಬಳಿಕ ಮನೆ ಮಂದಿಯ ಎದುರು ಏನು ಎಲ್ಲರ ತೊಡೆ ಮೇಲೆ ಹೋಗಿ ಕುಳಿತುಕೊಳ್ಳುತ್ತೀದ್ದೀರಾ? ಏನ್ ಕಥೆ ಎಂದು ರಜತ್ ಪತ್ನಿ ಪ್ರಶ್ನೆ ಮಾಡಿದ್ದಾರೆ. ಅದಷ್ಟೇ ಅಲ್ಲ, ಐಶ್ವರ್ಯಾ ನೋಡಿ ಏನ್ ಅಂದ್ರಿ ಅವತ್ತು ಎಂದು ಕೇಳಿದ್ದಾರೆ. ಅದಕ್ಕೆ ರಜತ್, ಐಶ್ವರ್ಯಾ ಸಖತ್ ಆಗಿದ್ದಾಳೆ, ಅದಕ್ಕೆ ಹಾಗೆ ಅಂದೆ ಅದರಲ್ಲಿ ಏನಿದೆ ಎಂದು ಪ್ರತಿಯುತ್ತರ ನೀಡಿದ್ದಾರೆ. ಅದಕ್ಕೆ ಪತ್ನಿ ನಗುತ್ತಲೇ ರಜತ್‌ಗೆ ಮೆತ್ತಗೆ ಹೊಡೆದಿದ್ದಾರೆ.

ಇನ್ನು ಪತಿ ರಜತ್ ಜೊತೆ ರಾತ್ರಿ ವೇಳೆ ಮಾತನಾಡುತ್ತಿದ್ದ ಅಕ್ಷಿತಾ, ಸಾಕಷ್ಟು ವಿಚಾರಗಳನ್ನು ಚರ್ಚೆ ಮಾಡಿದರು. ಮುಖ್ಯವಾಗಿ ಇಬ್ಬರು ಜೊತೆಯಾಗಿ ಮಲಗಿದ್ದಾಗ ಯಾರು ಉತ್ತಮವಾಗಿ ಆಟ ಆಡುತ್ತಿದ್ದಾರೆ? ಯಾರು ಫಿನಾಲೆಗೆ ಬರುತ್ತಾರೆ ಎಂದೆಲ್ಲಾ ಡಿಸ್ಕಷನ್ ಮಾಡಿದರು. ನಗೆ ಏನ್ ಅನ್ನಿಸ್ತು ಗೊತ್ತಾ, ಟಾಪ್ 3ರಲ್ಲಿ ನೀನು, ಮಂಜಣ್ಣ, ತ್ರಿವಿಕ್ರಮ್ ಇರ್ತಿರಾ ಅಂತ ಅನ್ನಿಸ್ತಾ ಇದೆ ಎಂದು ಅಕ್ಷಿತಾ ಹೇಳಿದ್ದಾರೆ. ಆಗ  ರಜತ್ ಹನುಮಂತು ಟಫ್ ಇದ್ದಾನೆ ಎಂದಿದ್ದಾರೆ. ಟಫ್ ಇದ್ದಾರೆ. ಬಟ್ ಅವರು ಈಚೆಗೆ ತುಂಬ ಸೈಲೆಂಟ್ ಆಗಿಬಿಟ್ಟಿದ್ದಾರೆ. ನಿಮಗೆ ಹಾಗೇ ಅನ್ನಿಸ್ತಾ ಇಲ್ವಾ? ಹಾಡು ಹಾಡ್ತಿಲ್ಲ. ಅವರು ಸೈಲೆಂಟ್ ಆಗಿದ್ದಾರೆ ಎಂದಿದ್ದಾರೆ ಅಕ್ಷಿತಾ.

BBK 11: ಬಿಗ್ ಬಾಸ್ ಮನೆಯೊಳಗೆ ಬಂದು ಧನರಾಜ್​ಗೆ ಭರ್ಜರಿ ಕ್ಲಾಸ್ ತೆಗೆದುಕೊಂಡ ಪತ್ನಿ