Tuesday, 7th January 2025

Road Accident: ದೇವರ ದರ್ಶನಕ್ಕೆ ಹೊರಟವರ ಕಾರು ಕೆರೆಗೆ ಪಲ್ಟಿ, ಇಬ್ಬರು ಸಾವು

chamarajanagara news

ಕೊಳ್ಳೇಗಾಲ: ಮಲೆ ಮಹದೇಶ್ವರ ದೇವಸ್ಥಾನಕ್ಕೆ (Male Mahdeswara Temple) ಹೊರಟಿದ್ದ ಮೂವರು ತೆರಳುತ್ತಿದ್ದ ಕಾರು ಕೆರೆಗೆ ಪಲ್ಟಿಯಾದ ಪರಿಣಾಮ (Road Accident) ಇಬ್ಬರು ಸಾವಿಗೀಡಾಗಿದ್ದಾರೆ. ಒಬ್ಬನನ್ನು ರಕ್ಷಿಸಲಾಗಿದೆ. ದುರ್ಘಟನೆಗೆ ಚಾಲಕನ ಅತಿವೇಗ ಮತ್ತು ಅಜಾಗರೂಕತೆ ಕಾರಣ (chamarajanagara news) ಎನ್ನಲಾಗಿದೆ.

ಘಟನೆ ಕೊಳ್ಳೇಗಾಲದ ಬಳಿಯ ಕುಂತೂರು ಕ್ರಾಸ್‌ನಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಮೃತರನ್ನು ಡಿಜಿಎಫ್ ಕಂಪನಿಯ ಊರ್ಜಿತ್ (25), ಟೆಕೋಟಾಸ್ಕ್‌ ಕಂಪನಿಯ ನೌಕರರಾದ ಶುಭ (21) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಇವರಿಬ್ಬರ ಗೆಳೆಯ, ಮೈಸೂರಿನ ವಿದ್ಯಾರಣ್ಯಪುರಂ ನಿವಾಸಿ, ಲಯನ್ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವ ಪುನೀತ್ (21). ಪೊಲೀಸರು, ಸ್ಥಳೀಯರು, ಅಗ್ನಿಶಾಮಕ ಠಾಣೆ ಮತ್ತು ಆ್ಯಂಬುಲೆನ್ಸ್ ಸಿಬ್ಬಂದಿ ಕಾರ್ಯಾಚರಣೆಯಿಂದ ಈತ ಬದುಕುಳಿದಿದ್ದಾನೆ.

ಮೂವರೂ ಬುಧವಾರ ರಾತ್ರಿ 12 ಗಂಟೆ ಸುಮಾರಿಗೆ ಮಲೆ ಮಹದೇಶ್ವರನ ಬೆಟ್ಟಕ್ಕೆ ತೆರಳಲು ಕ್ಯಾಬ್ ಒಂದನ್ನು ಬಾಡಿಗೆಗೆ ಪಡೆದು ತೆರಳಿದ್ದರು. 2.15 ಗಂಟೆ ಸುಮಾರಿಗೆ ಊರ್ಜಿತ್‌ ಚಲಾಯಿಸುತ್ತಿದ್ದ ಕಾರು ಅತಿವೇಗ ಮತ್ತು ಅಜಾಗರೂಕತೆಯಿಂದಾಗಿ ನಿಯಂತ್ರಣ ಕಳೆದುಕೊಂಡು ಕುಂತೂರು ಕ್ರಾಸ್‌ನ ಕೆರೆಗೆ ಮಗುಚಿಕೊಂಡಿದೆ. ಪರಿಣಾಮ ಇಬ್ಬರು ಸ್ಥಳದಲ್ಲಿ ಸಾವಿಗೀಡಾಗಿದ್ದಾರೆ.

ಕಾರಿನ ಗ್ಲಾಸ್ ಒಡೆದು ಮುಳುಗುತ್ತಿದ್ದ ಕಾರಿನ ಮೇಲೆ ನಿಂತು ಪುನೀತ್ ರಕ್ಷಣೆಗಾಗಿ ಕೂಗಿಕೊಂಡಿದ್ದಾನೆ. ಈ ವೇಳೆ ಮಾರ್ಗದಲ್ಲಿ ತೆರಳುತ್ತಿದ್ದ ಆ್ಯಂಬುಲೆನ್ಸ್‌ ಸಿಬ್ಬಂದಿ ವಾಹನ ನಿಲ್ಲಿಸಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಪುನೀತನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪುನೀತ್ ಹೇಳಿಕೆ ಹಿನ್ನೆಲೆಯಲ್ಲಿ ಮಾಂಬಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Murder Case: ಮದ್ಯಸೇವನೆಗೆ ಹಣ ನೀಡದ ವ್ಯಕ್ತಿಗೆ ಬಿಯರ್ ಬಾಟಲ್‌ನಿಂದ ಚುಚ್ಚಿ ಹತ್ಯೆ