Monday, 13th January 2025

Mahakumbh: ಮಹಾಕುಂಭ ಮೇಳಕ್ಕೆ ಪ್ರಯಾಗ್‌ರಾಜ್‌ ಸಜ್ಜು; 40 ಕೋಟಿಗೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ

ಲಖನೌ: ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾಗುವ ಕ್ಷೇತ್ರ ಪ್ರಯಾಗ್ ರಾಜ್(Prayagraj) ಮಹಾ ಕುಂಭಮೇಳಕ್ಕೆ(Mahakumbh) ಸಜ್ಜುಗೊಂಡಿದೆ. ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳವು ಜನವರಿ 13ರಂದು ಪ್ರಾರಂಭವಾಗಿ ಫೆಬ್ರವರಿ 26ರಂದು ಪ್ರಯಾಗರಾಜ್‌ನಲ್ಲಿ ಮುಕ್ತಾಯಗೊಳ್ಳಲಿದೆ.

ಬಹು ನಿರೀಕ್ಷಿತ ಮಹಾಕುಂಭ ಮೇಳ ಸಮೀಪಿಸುತ್ತಿದ್ದಂತೆ ಪ್ರಯಾಗರಾಜ್‌ನ ಆಧ್ಯಾತ್ಮಿಕ ವ್ಯಕ್ತಿಗಳು ಉತ್ಸುಕರಾಗಿದ್ದಾರೆ. ಈ ಬಾರಿ 40 ಕೋಟಿಗೂ ಹೆಚ್ಚು ಭಕ್ತರು ಆಗಮಿಸುವ ಸಾಧ್ಯತೆಯಿದೆ. ಹಣೆಗೆ ಬೂದಿ ಮತ್ತು ಕುಂಕುಮ ಧರಿಸಿದ ಮಹಾನಿರ್ವಾಣಿ ಅಖಾರದ ಸಾಧು ಸಂತರು
ಮಹಾಕುಂಭ ಮೇಳಕ್ಕೆ ಈಗಾಗಲೇ ಆಗಮಿಸಿದ್ದು, ಡಮರು ಬಾರಿಸುತ್ತಾ ಮಹಾದೇವನ ನಾಮವನ್ನು ಜಪಿಸುತ್ತಿದ್ದಾರೆ. ಕೆಲವು ಸಾಧುಗಳು ಕುದುರೆ ಸವಾರಿ ಮಾಡುತ್ತಿರುವುದು ಕಂಡುಬಂದಿದೆ.

ಕುಂಭಮೇಳ ಕೇವಲ ಧಾರ್ಮಿಕ ನಂಬಿಕೆಯಿಂದಾಗಿ ಮಾತ್ರವಲ್ಲ ಸಾಮಾಜಿಕ, ಆರ್ಥಿಕ, ಆಧ್ಯಾತ್ಮಿಕ, ಪರಂಪರಾತ್ಮಕ, ಐತಿಹಾಸಿಕ ಮಹತ್ವವನ್ನು ಸಾರುವ ವಿಶ್ವದ ಅತಿದೊಡ್ಡ ಸಮ್ಮೇಳನವಾಗಿದೆ. ಅದರಲ್ಲೂ ಈ ಬಾರಿ 144ನೇ ವರ್ಷದ ಮಹಾ ಪೂರ್ಣ ಕುಂಭಮೇಳಕ್ಕೆ ಪ್ರಯಾಗ್ ರಾಜ್ ಸಾಕ್ಷಿಯಾಗಲಿದೆ.

ಕುಂಭಮೇಳಕ್ಕೆ ವಿಶೇಷ ಭಾರತ್ ಗೌರವ್ ರೈಲು ಕಾರ್ಯಾಚರಣೆ

ಮಹಾಕುಂಭ ಮೇಳಕ್ಕೆ ದೇಶದ ವಿವಿಧ ರಾಜ್ಯಗಳಿಂದ ಜನರಿಗೆ ಪ್ರಯಾಣಿಸಲು ಅನುಕೂಲವಾಗಲಿದೆ ಎಂದು ಕೇಂದ್ರ ಸರ್ಕಾರ ಪ್ರಯಾಗ್​ರಾಜ್​ಗೆ ರೈಲಿನ ವ್ಯವಸ್ಥೆ ಮಾಡಿದೆ. ವಿಶೇಷವೆಂದರೆ ಕೇವಲ ಸಾಮಾನ್ಯ ರೈಲು ಮಾತ್ರವಲ್ಲದೇ ಕೇಂದ್ರ ಸರ್ಕಾರದ ದೋಖೋ ಅಪನಾ ದೇಶದ ಅಭಿಯಾನದ ಅಡಿ ಭಾರತ್ ಗೌರವ್ ರೈಲು ಕೂಡ ಸಂಚಾರ ನಡೆಸಲಿದೆ ಎಂದು ಭಾರತೀಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ 12 ವರ್ಷಕ್ಕೊಮ್ಮೆ ಭಾರತದಲ್ಲಿ ನಡೆಯುವ ಕುಂಭ ಮೇಳವು ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಸಂಗಮದ ಅತಿ ದೊಡ್ಡ ಮೇಳವಾಗಿದೆ. ಈ ಮಹಾ ಕುಂಭಮೇಳ ಜನವರಿ 13ರಿಂದ ಫೆಬ್ರವರಿ 26ರವರೆಗೂ ಅಂದರೆ ಮಹಾ ಶಿವರಾತ್ರಿ ದಿನದವರೆಗೂ ಪ್ರಯಾಗ್​ರಾಜ್​ನಲ್ಲಿ ನಡೆಯಲಿದೆ. ಈ ಬಾರಿಯ ಕುಂಭ ಅತ್ಯಂತ ಮಹತ್ವದ್ದಾಗಿದ್ದು ಬರೋಬ್ಬರಿ 144 ವರ್ಷಗಳ ನಂತರ ಬಂದಿರುವುದರಿಂದ ಇದನ್ನು ಮಹಾ ಪೂರ್ಣ ಕುಂಭ ಮೇಳ ಎಂದೂ ಕರೆಯಲಾಗುತ್ತಿದೆ. ಹೀಗಾಗಿ ಈ ಕಾರ್ಯಕ್ರಮದಲ್ಲಿ ಕೋಟ್ಯಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಈ ಕಾರಣದಿಂದಾಗಿ ದೇಶದ ವಿವಿಧ ರಾಜ್ಯಗಳಿಂದ ಜನರಿಗೆ ಪ್ರಯಾಣಿಸಲು ಅನುಕೂಲವಾಗಲಿದೆ ಎಂದು ಕೇಂದ್ರ ಸರ್ಕಾರ ಪ್ರಯಾಗ್​ರಾಜ್​ಗೆ ರೈಲಿನ ವ್ಯವಸ್ಥೆ ಮಾಡಲಾಗಿದೆ. ವಿಶೇಷವೆಂದರೆ ಕೇವಲ ಸಾಮಾನ್ಯ ರೈಲು ಮಾತ್ರವಲ್ಲದೇ, ಕೇಂದ್ರ ಸರ್ಕಾರದ ದೋಖೋ ಅಪನಾ ದೇಶದ ಅಭಿಯಾನದ ಅಡಿ ಭಾರತ್ ಗೌರವ್ ರೈಲು ಕೂಡ ಸಂಚಾರ ನಡೆಸಲಿದೆ ಎಂದು ಭಾರತೀಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Madras High Court: ಅಣ್ಣಾ ವಿವಿ ಅತ್ಯಾಚಾರ ಪ್ರಕರಣ ರಾಜಕೀಯಗೊಳಿಸಲಾಗುತ್ತಿದೆ: ಮದ್ರಾಸ್ ಹೈಕೋರ್ಟ್