Tuesday, 7th January 2025

Human Barbie: ಯಂಗ್‍ ಆಗಿ ಕಾಣಲು 47 ವರ್ಷದ ಈ ಹ್ಯೂಮನ್ ಬಾರ್ಬಿ ಮಾಡಿದ್ದೇನು ಗೊತ್ತೆ?

Human Barbie

ಸದಾ ಯೌವನ ಹೊಂದಿರಬೇಕು ಎನ್ನುವ ಆಸೆ ಎಲ್ಲರಿಗೂ ಇರುವುದು ಸಾಮಾನ್ಯ. ಇಂತಹ  ಗೀಳನ್ನು ಹೊಂದಿರುವ ‘ಹ್ಯೂಮನ್ ಬಾರ್ಬಿ’ (Human Barbie) ಎಂದೇ ಕರೆಸಿಕೊಳ್ಳುವ 47 ವರ್ಷದ ಮಾರ್ಸೆಲಾ ಇಗ್ಲೇಷಿಯಸ್ (Marcela Iglesias) ತನ್ನ ವೃದ್ಧಾಪ್ಯವನ್ನು ದೂರವಾಗಿಸಲು 23 ವರ್ಷದ ಮಗನಿಂದ ರಕ್ತ ವರ್ಗಾವಣೆಯನ್ನು ಪಡೆಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಮಾರ್ಸೆಲಾ ಇಗ್ಲೇಷಿಯಸ್ ಇದುವರೆಗೆ ಸೌಂದರ್ಯವರ್ಧಕ ಚಿಕಿತ್ಸೆಗಾಗಿ 80,000 ಪೌಂಡ್ (85,21,200 ರೂ.) ಖರ್ಚು ಮಾಡಿದ್ದಾರೆ. ಆದರೆ 2025ರಲ್ಲಿ ಅವರು ವಿಭಿನ್ನವಾದದ್ದನ್ನು ಪ್ರಯತ್ನಿಸಲು ನಿರ್ಧರಿಸಿದ್ದಾರೆ. ಅದಕ್ಕಾಗಿ ತಮ್ಮ ವಯಸ್ಸಾಗುವಿಕೆಯನ್ನು ತಡೆಯುವ ಪ್ರಯತ್ನದಲ್ಲಿ ಅವರು ತಮ್ಮ ಮಗ ರೊಡ್ರಿಗೋ ಅವರಿಂದ ರಕ್ತವನ್ನು  ಪಡೆಯಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಯುವ ದಾನಿಯ ರಕ್ತವು ಜೀವಕೋಶಗಳನ್ನು ಪುನರುಜ್ಜೀವನಗೊಳಿಸುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಲಾಸ್ ಏಂಜಲೀಸ್‍ನಲ್ಲಿ ವಾಸಿಸುವ ಮಾರ್ಸೆಲಾ ಈ ಕುರಿತು ಹೇಳಿದಾಗ ಮಗ ರೊಡ್ರಿಗೋ ಕೂಡ ಇದಕ್ಕೆ ಒಪ್ಪಿದ್ದಾನಂತೆ. “ರಕ್ತ ವರ್ಗಾವಣೆಯು ಜೀವಕೋಶಗಳನ್ನು ಪುನರುಜ್ಜೀವನಗೊಳಿಸುವ ಆಧುನಿಕ ವಿಧಾನವಾಗಿದೆ. ಆದರೆ ವಿಶೇಷವಾಗಿ ದಾನಿ ನಿಮ್ಮ ಸ್ವಂತ ಮಗುವಾಗಿದ್ದಾಗ ಮಾತ್ರ ಇದು ಸಾಧ್ಯ. ನಾನು ಸ್ಟೆಮ್ ಸೆಲ್ ಥೆರಪಿಗೆ ಒಳಗಾದಾಗಿನಿಂದ, ದೇಹದ ಒಳಗಿನಿಂದ ಕಾಯಿಲರ ಗುಣಪಡಿಸುವ ಮಾರ್ಗಗಳನ್ನು ಅನ್ವೇಷಿಸುತ್ತಿದ್ದೇನೆ” ಎಂದು ಮಾರ್ಸೆಲಾ ತಿಳಿಸಿದ್ದಾರೆ.

“ಯುವ ದಾನಿಗಳ ಜೀವಕೋಶಗಳಿಂದ ಅನೇಕ ಸಂಭಾವ್ಯ ಪ್ರಯೋಜನಗಳಿವೆ. ವಿಶೇಷವಾಗಿ ದಾನಿ ನನ್ನ ಮಗನಾಗಿದ್ದಾಗ. ಈ ಚಿಕಿತ್ಸೆಯನ್ನು ಮಾಡಲು ನಾನು ಪ್ರಸ್ತುತ ಲಾಸ್ ಏಂಜಲೀಸ್‍ನಲ್ಲಿ ವೈದ್ಯರನ್ನು ಹುಡುಕುತ್ತಿದ್ದೇನೆ. ರೊಡ್ರಿಗೋ ಕಾರ್ಯವಿಧಾನ ಮತ್ತು ಅದರ ಪ್ರಯೋಜನಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿದ್ದಾನೆ. ಅವನು ಸಹಾಯ ಮಾಡಲು ಉತ್ಸುಕನಾಗಿದ್ದಾನೆ.  ತನ್ನ ಅಜ್ಜಿಗೆ ಸಹಾಯ ಮಾಡುವ ಬಗ್ಗೆಯೂ ಆತ ಚಿಂತಿಸುತ್ತಿದ್ದಾನೆ” ಎಂದು ಅವರು ಹೇಳಿದ್ದಾರೆ.

ಹೇಗೆ ಕಾರ್ಯ ನಿರ್ವಹಿಸುತ್ತದೆ?

ರಕ್ತ ವರ್ಗಾವಣೆಯು, ದೇಹದಾದ್ಯಂತ ಆಮ್ಲಜನಕವನ್ನು ಸಾಗಿಸಲು ತಾಜಾ ಕೆಂಪು ರಕ್ತ ಕಣಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಜತೆಗೆ ಪ್ಲಾಸ್ಮಾ ಗುಣಪಡಿಸಲು ಅಗತ್ಯವಾದ ಪ್ರೋಟೀನ್‍ಗಳು ಮತ್ತು ಹೆಪ್ಪುಗಟ್ಟುವ ಅಂಶಗಳನ್ನು ಒದಗಿಸುತ್ತದೆ. “ದೀರ್ಘ ಪ್ರಯಾಣದ ನಂತರ ಪ್ರಯಾಣಿಕರು ಒಂದು ಗುಟುಕು ನೀರನ್ನು ಆನಂದಿಸುವಂತೆಯೇ ದೇಹವು ಈ ಉತ್ತೇಜನವನ್ನು ಸ್ವಾಗತಿಸುತ್ತದೆ ಎಂದು ನನಗೆ ತಿಳಿಸಲಾಗಿದೆ. ಅಂತಿಮವಾಗಿ, ನಾನು ಬಲಶಾಲಿ, ಹೆಚ್ಚು ಸ್ಥಿರ ಮತ್ತು ನನ್ನ ಮೇಲೆ ಉತ್ತಮ ನಿಯಂತ್ರಣವನ್ನು ಅನುಭವಿಸಬೇಕು” ಎಂದು ಈ ಚಿಕಿತ್ಸೆ ಬಗ್ಗೆ ಮಾರ್ಸೆಲಾ ವಿವರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:ನ್ಯೂ ಇಯರ್‌ ಪಾರ್ಟಿ ಮಾಡಿ ಕುಡಿದ ಮತ್ತಿನಲ್ಲಿ ಫುಟ್‌ಪಾತ್‌ ಮೇಲೆ ಬಿದ್ದ ಮಹಿಳೆ ಪೊಲೀಸ್‌ ಅಧಿಕಾರಿಗೆ ಹೀಗಾ ಮಾಡೋದು?!

ಆರೋಗ್ಯ ಸುಧಾರಣೆ

ಈ ಕಾರ್ಯವಿಧಾನವು ಆಂತರಿಕ ಅಂಗಗಳಿಗೆ ಪ್ರಯೋಜನವನ್ನು ನೀಡುತ್ತದೆ. ಜೀವಕೋಶಗಳ ದುರಸ್ತಿಯನ್ನು ಉತ್ತೇಜಿಸುತ್ತದೆ, ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಮೂತ್ರಪಿಂಡ, ಹೃದಯ ಮತ್ತು ಶ್ವಾಸಕೋಶದ ಕಾರ್ಯವನ್ನು ಸುಧಾರಿಸುತ್ತದೆ ಎಂದು ಹೇಳಲಾಗಿದೆ.