Tuesday, 7th January 2025

Abhishek Bachchan: ಡಿವೋರ್ಸ್‌ ವದಂತಿ: ಹೊಸ ವರ್ಷದ ನಂತರ ಮುಂಬೈಗೆ ಮರಳಿದ ಅಭಿಷೇಕ್‌ ಐಶ್ವರ್ಯ ರೈ ದಂಪತಿ

ಮುಂಬೈ: ಹೊಸ ವರ್ಷವನ್ನು ಸಂಭ್ರಮದಿಂದ ಒಟ್ಟಿಗೆ ಆಚರಿಸಿದ ಬಚ್ಚನ್ ಕುಟುಂಬ ಇದೀಗ ಮುಂಬೈಗೆ ಮರಳಿದೆ. ಅಭಿಷೇಕ್ ಬಚ್ಚನ್(Abhishek Bachchan) ಮತ್ತು ಐಶ್ವರ್ಯ ರೈ (Aishwarya Rai) ತಮ್ಮ ಮಗಳು ಆರಾಧ್ಯ ಅವರೊಂದಿಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಫೋಟೊ ಮತ್ತು ವಿಡಿಯೊ ಈಗ ಎಲ್ಲೆಡೆ ವೈರಲ್‌ ಆಗಿದೆ.(Viral News)

ಅಭಿಷೇಕ್‌ ಬಚ್ಚನ್‌ ಮತ್ತು ಐಶ್ವರ್ಯ ರೈ ಸಂಬಂಧದ ಬಗ್ಗೆ ವದಂತಿಗಳಿದ್ದವು. ಇಬ್ಬರೂ ಪರಸ್ಪರ ದೂರ ಉಳಿದಿದ್ದು,ಡಿವೋರ್ಸ್‌ ತೆಗೆದುಕೊಳ್ಳಲ್ಲಿದ್ದಾರೆ ಎಂಬಂಥ ಸುದ್ದಿಗಳು ಹರಿದಾಡಿದ್ದವು. ದಂಪತಿ ಈಗ ಒಟ್ಟಿಗೆ ಕಾಣಿಸಿಕೊಂಡಿದ್ದು ತಮ್ಮ ಕುರಿತ ಎಲ್ಲಾ ವದಂತಿಗಳಿಗೂ ತೆರೆ ಎಳೆದಿದ್ದಾರೆ. ವೈರಲ್ ಆಗಿರುವ ಫೋಟೊ ಮತ್ತು ವಿಡಿಯೊಗಳಲ್ಲಿ, ಅಭಿಷೇಕ್ ವಿಮಾನ ನಿಲ್ದಾಣದಿಂದ ಹೊರಬರುವ ದಾರಿಯನ್ನು ನೋಡುತ್ತಿದ್ದಾರೆ, ಐಶ್ವರ್ಯಾ ಮತ್ತು ಆರಾಧ್ಯ ಅವರ ಹಿಂದೆ ನಡೆಯುತ್ತಿದ್ದಾರೆ. ಅವರು ಕಾರಿನತ್ತ ಸಾಗುತ್ತಿದ್ದಂತೆ, ಅಭಿಷೇಕ್ ಐಶ್ವರ್ಯ ಮತ್ತು ಆರಾಧ್ಯ ಕೂರಲು ಬಾಗಿಲು ತೆರೆಯುತ್ತಾರೆ. ಕಾರಿನೊಳಗೆ ಕುಳಿತ ಐಶ್ವರ್ಯಾ ಫೋಟೊಗ್ರಾಫರ್‌ಗೆ ಶುಭಾಶಯ ಕೋರುತ್ತಾ, “ಹೊಸ ವರ್ಷದ ಶುಭಾಶಯಗಳು, ದೇವರ ಆಶೀರ್ವಾದವಿರಲಿ” ಎಂದು ಹೇಳಿದ್ದಾರೆ.

ಅಭಿಷೇಕ್ ಕಪ್ಪು ಬಣ್ಣದ ಟ್ರ್ಯಾಕ್‌ನೊಂದಿಗೆ ಬೂದು ಬಣ್ಣದ ಹೂಡಿ ಶೂ ಧರಿಸಿದ್ದರೆ, ಐಶ್ವರ್ಯಾ ಸರಳವಾದ ಕಪ್ಪು ಸ್ವೆಟ್‌ಶರ್ಟ್ ಮತ್ತು ಜೆಗ್ಗಿಂಗ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. ಆರಾಧ್ಯ ನೀಲಿ ಸ್ವೆಟ್‌ಶರ್ಟ್‌ ಧರಿಸಿದ್ದರು. ಅಭಿಷೇಕ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ಬಗ್ಗೆ ಸಾಕಷ್ಟು ವದಂತಿಗಳು ಕಳೆದ ಕೆಲವು ದಿನಗಳಿಂದ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿದ್ದವು. ಜುಲೈನಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದಕ್ಕೆ ದಂಪತಿ ಪ್ರತ್ಯೇಕವಾಗಿ ಆಗಮಿಸಿದಾಗ ವದಂತಿಗಳು ಹೆಚ್ಚಾದವು. ಇನ್ನು ಮಗಳು ಆರಾಧ್ಯ ಅವರ ಹುಟ್ಟುಹಬ್ಬಕ್ಕೆ ಅಭಿಷೇಕ್‌ ಬಂದಿರಲಿಲ್ಲ ಎಂಬುದರ ಬಗ್ಗೆಯೂ ಊಹಾಪೋಹಗಳು ಹುಟ್ಟಿಕೊಂಡಿದ್ದವು. ಆದರೆ ಇದೀಗ ದಂಪತಿ ಎಲ್ಲಾ ಗಾಳಿ ಸುದ್ದಿಗಳಿಗೂ ತೆರೆ ಎಳೆದಿದ್ದಾರೆ. ಅಭಿಷೇಕ್‌ ಮತ್ತು ಐಶ್ವರ್ಯ ಒಟ್ಟಿಗೆ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ.

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಏಪ್ರಿಲ್ 2007 ರಲ್ಲಿ ವಿವಾಹವಾದರು. ದಂಪತಿಗೆ ನವೆಂಬರ್ 2011 ರಲ್ಲಿ ತಮ್ಮ ಮಗಳು ಆರಾಧ್ಯ ಬಚ್ಚನ್ ಅವರು ಜನಿಸಿದರು. ಇಲ್ಲಿಯವರೆಗೆ, ದಂಪತಿಗಳು ವಿಚ್ಛೇದನದ ವದಂತಿಗಳ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲ.

ಈ ಸುದ್ದಿಯನ್ನೂ ಓದಿ:Self Harming: ಇನ್‌ಸ್ಟಾಗ್ರಾಮ್ ಲೈವ್‌ನಲ್ಲೇ ಆತ್ಮಹತ್ಯೆಗೆ ಶರಣಾದ ಯುವತಿ; ಫಾಲೊವರ್ಸ್‌ಗಳಲ್ಲಿ ಆತಂಕ!