Tuesday, 7th January 2025

Bengaluru News: ಜಾನಪದ ಕಲೆ ನಮ್ಮ ಜೀವನಕ್ಕೆ ಅವಶ್ಯವಷ್ಟೇ ಅಲ್ಲ, ಅನಿವಾರ್ಯವೂ ಕೂಡ: ಡಾ.ಬಾನಂದೂರು ಕೆಂಪಯ್ಯ

ಬೆಂಗಳೂರು: ಜಾನಪದ ಕಲೆಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ನಾಡಿಮಿಡಿತವಾಗಿವೆ. ಇವುಗಳನ್ನು ಉಳಿಸಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಅಂತಾರಾಷ್ಟ್ರೀಯ ಮಟ್ಟದ ಜಾನಪದ ಗಾಯಕರು ಹಾಗೂ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷರು, ಆಕಾಶವಾಣಿ ಮತ್ತು ದೂರದರ್ಶನ ನಿರ್ದೇಶಕ ಡಾ. ಬಾನಂದೂರು ಕೆಂಪಯ್ಯ ಹೇಳಿದರು.

ಶ್ರೀ ಮಲೆ ಮಹದೇಶ್ವರ ಸ್ವಾಮಿ ಜಾನಪದ, ಸಾಂಸ್ಕೃತಿಕ ಕಲಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ನಗರ ಜಿಲ್ಲೆ ಸಹಯೋಗದಲ್ಲಿ (Bengaluru News) ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿರುವ ಕಲಾ ಗ್ರಾಮ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ದಿನ ದಿನಮಾನಗಳಲ್ಲಿ ಯುವ ಪೀಳಿಗೆಯೂ ಕಲೆಗಳನ್ನು ಉಳಿಸಲು ಮುಂದಾಗಬೇಕು. ಇವುಗಳ ಮಹತ್ವವನ್ನು ತಿಳಿದುಕೊಳ್ಳಬೇಕು. ಜಾನಪದ ಕಲೆ ನಮ್ಮ ಜೀವನಕ್ಕೆ ಅವಶ್ಯವಷ್ಟೇ ಅಲ್ಲ ಅನಿವಾರ್ಯವೂ ಕೂಡ ಆಗಿದೆ. ಇದನ್ನು ಎಲ್ಲರೂ ಅರಿಯಬೇಕು. ಆದ್ದರಿಂದ ಎಲ್ಲರೂ ಜಾನಪದ ಕಲೆ, ಸಂಸ್ಕೃತಿಯನ್ನು ಬೆಳೆಸಬೇಕು ಎಂದರು.

ನಿವೃತ್ತ ಡಿ.ಸಿ.ಪಿ ಎಸ್. ಸಿದ್ದರಾಜು ಮಾತನಾಡಿ, ಜನರ ಬಾಯಿಂದ ಬಾಯಿಗೆ, ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಕಲೆಯಾಗಿರುವ ಜಾನಪದವು ಬೇರು ಇದ್ದಂತೆ ಅದು ಸದಾ ಚಿಗುರುತ್ತಲೇ ಇರುತ್ತದೆ. ಜಾನಪದ ಆಶಯದಂತೆ ಬದುಕಿದರೆ ಬಾಳು ಬಂಗಾರವಾಗುತ್ತದೆ. ಜಾನಪದ ಕಲೆಗಳು ನಮಗೆ ಶಕ್ತಿಯಾಗಬೇಕು. ಈ ಉದ್ದೇಶದಂತೆ ಯುವಕರು ಎಚ್ಚೆತ್ತುಕೊಳ್ಳಬೇಕು. ಜಾನಪದ ಕಲೆಗಳ ಬೆಳವಣಿಗೆ ಬೇಕಿರುವ ಚಟುವಟಿಕೆಗಳನ್ನು ಮೈಗೂಡಿಸಿಕೊಂಡು ನಾಡಿನ ಸಮಸ್ತ ಜನರು ಇದನ್ನು ಪಸರಿಸಬೇಕು ಎಂದರು.

ಈ ಸುದ್ದಿಯನ್ನೂ ಓದಿ | ‌RRB Recruitment: ಇನ್ನು 10ನೇ ತರಗತಿ ಪಾಸಾದವರೂ ರೈಲ್ವೇಯ ಈ ಕೆಲಸಗಳಿಗೆ ಅರ್ಜಿ ಸಲ್ಲಿಸಿ; 32,000 ಹುದ್ದೆಗಳು ಓಪನ್

ಪ್ರಸ್ತುತ ಆಧುನಿಕತೆಯ ಭರಾಟೆಯಲ್ಲಿ ಶ್ರೇಷ್ಠವಾದ ಜಾನಪದ ಕಲೆಗಳನ್ನು ಮರೆಯುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ. ಪ್ರಸ್ತುತ ಈಗಲಾದರೂ ಇದನ್ನು ಅರಿತುಕೊಂಡು ಜಾನಪದ ಕಲೆಗಳಿಗೆ ಪ್ರೋತ್ಸಾಹ ನೀಡುವಂತವರಾಗೋಣ. ಮುಖ್ಯವಾಗಿ ಯುವಕರು ಇದನ್ನು ಅರಿತು ವಾಸ್ತವತೆಗೆ ಮುಖಮಾಡಿ ಸಂಸ್ಕೃತಿಯ ಪ್ರತೀಕವಾಗಿರುವ ಜಾನಪದ ಕಲೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಬಳಿಕ ಮಾತನಾಡಿದ ಟ್ರಸ್ಟ್‌ನ ಅಧ್ಯಕ್ಷ ಮಳ್ಳವಳ್ಳಿ ನಾಗೇಂದ್ರ, ನಮ್ಮ ಮಕ್ಕಳಿಗೆ ಜಾನಪದರ ಸಂಸ್ಕೃತಿಯನ್ನು ತಿಳಿ ಹೇಳುವ ಕೆಲಸವಾಗಬೇಕಿದೆ. ಇಂದಿನ ಮಕ್ಕಳಿಗೆ ಕೇವಲ ಗುಣಮಟ್ಟದ ಶಿಕ್ಷ ಣವನ್ನಷ್ಟೆ ಕೊಡಿಸಿದರೆ ಸಾಲದು, ಮಾನವೀಯ ಸಂಬಂಧಗಳು ಅರ್ಥೈಸಿಕೊಡಬೇಕಿದೆ ಎಂದರು.

ಈ ಸುದ್ದಿಯನ್ನೂ ಓದಿ | HSRP Deadline: ವಾಹನ ಮಾಲಿಕರಿಗೆ ರಿಲೀಫ್‌, ಎಚ್‌ಎಸ್‌ಆರ್‌ಪಿ ಅಳವಡಿಕೆ ಡೆಡ್‌ಲೈನ್‌ ವಿಸ್ತರಣೆ

ಕಲಾವಿದರು ನಡೆಸಿಕೊಟ್ಟ ಜಾನಪದ ನೃತ್ಯ, ಭರತನಾಟ್ಯ, ವೀರಗಾಸೆ, ದೇವರ ಕುಣಿತ, ಡೊಳ್ಳು ಕುಣಿತ ಹಾಗೂ ಇನ್ನಿತರ ಕಲಾಪ್ರಕಾರಗಳು ನೋಡುಗರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಪಂಚ ಯೋಜನೆ ಪ್ರಾಧಿಕಾರದ ಅಧ್ಯಕ್ಷ ರಾಂಪುರ ನಾಗೇಶ್, ಕೆಎಸ್‌ಆರ್‌ಟಿಸಿಯ ನಿವೃತ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶಿವಲಿಂಗಯ್ಯ, ಎಂ ನಾಗರಾಜು, ಸಾಗರ್‌ ಕುಮಾರ್‌ ಎಚ್.ಎಸ್ ಹಾಗೂ ಇತರರು ಉಪಸ್ಥಿತರಿದ್ದರು.