Tuesday, 7th January 2025

Viral Video: ಒಡಿಶಾದ ಕಟಕ್ ರೈಲ್ವೆ ನಿಲ್ದಾಣ ನೋಡಿ ಫಿದಾ ಆದ ನಾರ್ವೇಜಿಯನ್ ಮಾಜಿ ರಾಜತಾಂತ್ರಿಕ ಉದ್ಘರಿಸಿದ್ದು ಹೀಗೆ…

Viral Video

ಭುವನೇಶ್ವರ: ಭಾರತೀಯ ರೈಲ್ವೆ ತನ್ನ ಸೇವೆಗಳಿಗಾಗಿ ಆಗಾಗ್ಗೆ ಟೀಕೆಗಳನ್ನು ಎದುರಿಸುತ್ತಿದೆ. ವೆಬ್‌ಸೈಟ್‌ಗಳಲ್ಲಿನ ದೋಷ ಅಥವಾ ರೈಲು ಬೋಗಿಗಳಲ್ಲಿ ನೈರ್ಮಲ್ಯದ ಕೊರತೆಯೇ ಇದಕ್ಕೆ ಕಾರಣ. ಆದರೆ  ಇತ್ತೀಚಿನ ಪೋಸ್ಟ್‌ವೊಂದರಲ್ಲಿ, ಮಾಜಿ ನಾರ್ವೇಜಿಯನ್ ರಾಜತಾಂತ್ರಿಕ ಎರಿಕ್ ಸೋಲ್ಹೈಮ್ ಭಾರತದ ರೈಲ್ವೆ ನಿಲ್ದಾಣಗಳಲ್ಲಿ ಒಂದನ್ನು ಹೊಗಳಿದ್ದಾರೆ. ಒಡಿಶಾದ ಕಟಕ್ ರೈಲ್ವೆ ನಿಲ್ದಾಣದ ದೃಶ್ಯಗಳು ಅದರ ಉತ್ತಮವಾದ ಮೂಲಸೌಕರ್ಯಕ್ಕಾಗಿ ಎಕ್ಸ್‌ನಲ್ಲಿ ವೈರಲ್ (Viral Video) ಆಗಿದೆ. ಆ ದೃಶ್ಯ ನೋಡಿ ಎರಿಕ್ ಪ್ರತಿಕ್ರಿಯಿಸಿದ್ದು, ಭಾರತೀಯ ರೈಲ್ವೆಯ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. “ಭಾರತೀಯ ರೈಲು ದಿನದಿಂದ ದಿನಕ್ಕೆ ಸುಧಾರಿಸುತ್ತಿದೆ!” ಎಂದು ಬರೆದಿದ್ದಾರೆ.

ಎರಿಕ್ ಅವರ ಪೋಸ್ಟ್ ಒಡಿಶಾದ ಭವ್ಯವಾದ ರೈಲ್ವೆ ನಿಲ್ದಾಣವನ್ನು ಪರಿಚಯಿಸಿದೆ.  ಅದು ತುಂಬಾ ಅತ್ಯಾಧುನಿಕವಾಗಿ ಕಾಣುತ್ತಿದೆ. ಅವರು ಅದನ್ನು ವಿಮಾನ ನಿಲ್ದಾಣಕ್ಕೆ ಹೋಲಿಸಿದ್ದಾರೆ. ಈ ದೃಶ್ಯಗಳು ಸ್ವಚ್ಛವಾದ ನೆಲ ಮತ್ತು ಸುಗಮ ನ್ಯಾವಿಗೇಷನ್ ವಿವರಗಳೊಂದಿಗೆ ವಿಶಾಲವಾದ ಸ್ಥಳಗಳನ್ನು ಒಳಗೊಂಡಿದ್ದವು. ನ್ಯಾವಿಗೇಷನ್ ಸೈನ್ ಬೋರ್ಡ್‍ಗಳು ಮತ್ತು ಪ್ರಕಾಶಮಾನವಾದ ಬೆಳಕು ಆರಂಭದಲ್ಲಿ ನಿರ್ಮಾಣವನ್ನು ಉತ್ತಮವಾಗಿ ನಿರ್ಮಿಸಲಾದ ವಿಮಾನ ನಿಲ್ದಾಣ ಸೌಲಭ್ಯವೆಂದು ಭಾವಿಸುವಂತೆ ಮಾಡಿದೆ. ನಂತರ ಅದು ರೈಲ್ವೆ ನಿಲ್ದಾಣ ಎಂದು ತಿಳಿಯುತ್ತದೆ. “ಇದು ವಿಮಾನ ನಿಲ್ದಾಣವಲ್ಲ; ಇದು ಕಟಕ್, ಒಡಿಶಾದಲ್ಲಿ ತೆರೆಯಲಾದ ರೈಲ್ವೆ ನಿಲ್ದಾಣ” ಎಂದು ಅಲ್ಲಿನ ಒಳಾಂಗಣಗಳಿಂದ ಆಕರ್ಷಿತರಾದ ನಂತರ ಅವರು ಈ ರೀತಿ ಬರೆದಿದ್ದಾರೆ.

ನೆಟ್ಟಿಗರು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ ಮತ್ತು ಎರಿಕ್ ಅವರ ಮಾತುಗಳು ಪ್ರೋತ್ಸಾಹದಾಯಕ ಎಂದು ಕರೆದಿದ್ದಾರೆ. ಸರ್ವೇಶ್ ಯಾದವ್ ಎಂಬ ಎಕ್ಸ್ ಬಳಕೆದಾರರು, “ಭಾರತದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ವಿದೇಶಿಯರು ಗುರುತಿಸುವುದನ್ನು ನೋಡುವುದು ಪ್ರೋತ್ಸಾಹದಾಯಕವಾಗಿದೆ. ಇದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಜಾಗತಿಕ ನಾಯಕನಾಗುವತ್ತ ಕೆಲಸ ಮಾಡಲು ರಾಷ್ಟ್ರವನ್ನು ಪ್ರೇರೇಪಿಸುತ್ತದೆ ” ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ:ಮೊಸಳೆ ಬಾಯಿಗೆ ಸಿಲುಕಿದ ಸಿಂಹ; ಕೊನೆಗೆ ಆಗಿದ್ದೇನು?

ಇನ್ನೊಬ್ಬ ನೆಟ್ಟಿಗ, “ಇಂಡಿಯಾ ಪ್ರತಿವರ್ಷ ಸುಧಾರಿಸುತ್ತಿದೆ ಮತ್ತು ನೀವು ನಮ್ಮ ತವರು ನಗರ ಕಟಕ್‍ನ ಹೊಸ ರೈಲ್ವೆ ಮೂಲಸೌಕರ್ಯವನ್ನು ಹಂಚಿಕೊಂಡಿರುವುದನ್ನು ನೋಡಿ ಸಂತೋಷವಾಗಿದೆ” ಎಂದು ಉತ್ತರಿಸಿದ್ದಾರೆ.