ಇಂಫಾಲ್: ಮಣಿಪುರದಲ್ಲಿ ಇತ್ತೀಚೆಗೆ ಭುಗಿಲೆದ್ದ ಜನಾಂಗೀಯ ಹಿಂಸಾಚಾರದ ವೇಳೆ ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು. ಈ ಸಮಯದಲ್ಲಿ ಉಗ್ರಗಾಮಿಗಳು ಎಕ್ಸ್ ಸಂಸ್ಥಾಪಕ ಎಲಾನ್ ಮಸ್ಕ್ (Elon Musk’s) ಅವರ ಸ್ಟಾರ್ಲಿಂಕ್ ಉಪಕರಣಗಳನ್ನು ಬಳಸುತ್ತಿದ್ದವು ಎಂಬ ಸಂಗತಿ ಬಯಲಾಗಿದೆ (Manipur Militants).
Star link devices used to defy internet shutdowns in Manipur? @Starlink pic.twitter.com/ip27jlpywY
— Priyamwada (@PriaINC) January 3, 2025
ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ನೆಟ್ವರ್ಕ್ ಸ್ಥಗಿತಗೊಳಿಸಲಾಗಿತ್ತು. ಆ ಸಮಯದಲ್ಲಿ ಉಗ್ರಗಾಮಿ ಗುಂಪುಗಳು ಭಾರತದಲ್ಲಿ ಪ್ರಸ್ತುತ ಪರವಾನಗಿ ಹೊಂದಿಲ್ಲದ ಎಲಾನ್ ಮಸ್ಕ್ನ ಉಪಗ್ರಹ ಆಧಾರಿತ ಸ್ಟಾರ್ಲಿಂಕ್ ಸಾಧನಗಳನ್ನು ಬಳಸುತ್ತಿದ್ದವು ಎಂಬುದು ಪೊಲೀಸರ ಮೂಲಗಳಿಂದ ತಿಳಿದು ಬಂದಿದೆ.
ಕಳೆದ ತಿಂಗಳು, ಭದ್ರತಾ ಪಡೆಗಳು ಇಂಫಾಲ್ ಪೂರ್ವ ಜಿಲ್ಲೆಯ ಕೀರಾವೊ ಖುನೌ ಮೇಲೆ ದಾಳಿ ಮಾಡಿ, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಇಂಟರ್ನೆಟ್ ಉಪಕರಣಗಳನ್ನು ವಶಪಡಿಸಿಕೊಂಡಿದ್ದವು. ವಶಪಡಿಸಿಕೊಂಡ ವಸ್ತುಗಳ ಪೈಕಿ, ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಸ್ಟಾರ್ಲಿಂಕ್ ಉಪಗ್ರಹ ಇಂಟರ್ನೆಟ್ ಸಾಧನಗಳಿದ್ದವು. ಭದ್ರತಾ ಕಾಳಜಿಗಳ ನಡುವೆ ಭಾರತದಲ್ಲಿ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಲು ಸ್ಟಾರ್ಲಿಂಕ್ಗೆ ಅನುಮತಿ ಇಲ್ಲವಾದರೂ ನೆರೆಯ ಮಣಿಪುರದ ಮ್ಯಾನ್ಮಾರ್ ಇದನ್ನು ಅನುಮತಿಸಿದೆ ಎಂದು ತಿಳಿದು ಬಂದಿದೆ.
ಮಣಿಪುರದ ಪೀಪಲ್ಸ್ ಲಿಬರೇಶನ್ ಆರ್ಮಿ ಆಫ್ ಮಣಿಪುರ (ಪಿಎಲ್ಎ)ದ ಮೈತೆಯ್ ಪ್ರತ್ಯೇಕತಾವಾದಿ ಉಗ್ರಗಾಮಿ ಗುಂಪಿನ ನಾಯಕನೊಬ್ಬ ಮಣಿಪುರದಲ್ಲಿ ಹಿಂಸಾತ್ಮಕ ಘರ್ಷಣೆಗಳ ನಡುವೆ ಇಂಟರ್ನೆಟ್ ಬ್ಲ್ಯಾಕ್ಔಟ್ಗಳನ್ನು ವಿಧಿಸಿದ ಸಮಯದಲ್ಲಿ ಸ್ಟಾರ್ಲಿಂಕ್ ಸಾಧನಗಳನ್ನು ಬಳಸಿದ್ದಾನೆ ಎನ್ನಲಾಗಿದೆ. ಈ ಗುಂಪು ಆರಂಭದಲ್ಲಿ ಮ್ಯಾನ್ಮಾರ್ನಲ್ಲಿ ಸ್ಟಾರ್ಲಿಂಕ್ ಸಾಧನವನ್ನು ಬಳಸಿದೆ ಆದರೆ ನಂತರ ಅದು ಮಣಿಪುರದ ಗಡಿಯುದ್ದಕ್ಕೂ ಕೆಲಸ ಮಾಡಿದೆ ಎಂದು ಮೂಲಗಳು ತಿಳಿಸಿವೆ.
“ನಮ್ಮ ಆರಂಭದ ತನಿಖೆಯಿಂದಾಗಿ ಮಣಿಪುರದ ಕೆಲವು ಪ್ರದೇಶಗಳಲ್ಲಿ, ವಿಶೇಷವಾಗಿ ಮ್ಯಾನ್ಮಾರ್ ಗಡಿಗೆ ಹತ್ತಿರವಿರುವ ಕೆಲವು ಪ್ರದೇಶಗಳಲ್ಲಿ ಸ್ಟಾರ್ಲಿಂಕ್ ಕಾರ್ಯನಿರ್ವಹಿಸುತ್ತದೆ ಎಂದು ಸೂಚಿಸುತ್ತದೆ” ಎಂದು ಮಣಿಪುರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸ್ಟಾರ್ಲಿಂಕ್ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್
ಸ್ಟಾರ್ಲಿಂಕ್ ಬಳಕೆಯ ಆರೋಪವನ್ನು ಇತ್ತೀಚೆಗಷ್ಟೇ ಎಲಾನ್ ಮಸ್ಕ್ ನಿರಾಕರಿಸಿದ್ದರು. ಭಾರತದ ಮೇಲೆ ಸ್ಟಾರ್ಲಿಂಕ್ ಉಪಗ್ರಹ ಡಿವೈಸ್ ಬಳಕೆ ಮಾಡಲಾಗಿದ್ದು,ಅದರ ಸಾಧನವನ್ನು ಪ್ರಕ್ಷುಬ್ಧ ಮಣಿಪುರದಲ್ಲಿ ಬಳಸಲಾಗುತ್ತಿದೆ ಎಂಬ ಗಂಭೀರ ಆರೋಪಕ್ಕೆ ಸ್ಪೇಸ್ಎಕ್ಸ್ ಸಂಸ್ಥಾಪಕ ಎಲಾನ್ ಮಸ್ಕ್ ಪ್ರತಿಕ್ರಿಯೆ ನೀಡಿ ಆರೋಪವನ್ನು ತಳ್ಳಿ ಹಾಕಿದ್ದರು.
ಭದ್ರತಾ ಪಡೆಗಳು ಇತ್ತೀಚೆಗೆ ಇಂಫಾಲ್ ಪೂರ್ವ ಜಿಲ್ಲೆಯ ಕೀರಾವೊ ಖುನೌನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಕೆಲವು ಇಂಟರ್ನೆಟ್ ಸಾಧನಗಳನ್ನು ವಶಪಡಿಸಿಕೊಂಡಿದ್ದವು.
ಭಾರತೀಯ ಸೇನೆ ಸ್ಪಿಯರ್ ಕಾರ್ಪ್ಸ್ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳ ಫೋಟೊಗಳನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದರು. ಸಾಮಾಜಿಕ ಮಾಧ್ಯಮ ಬಳಕೆದಾರರು ಸಾಧನಗಳಲ್ಲಿ ಒಂದರಲ್ಲಿ “ಸ್ಟಾರ್ಲಿಂಕ್ ಲೋಗೋ” ಹೊಂದಿದ್ದನ್ನು ತ್ವರಿತವಾಗಿ ಗಮನಿಸಿದ್ದರು. ಇದು ಗಂಭೀರ ಚರ್ಚೆಗೆ ಕಾರಣವಾಗಿತ್ತು.
ಈ ಸುದ್ದಿಯನ್ನೂ ಓದಿ:Viral Video: ಅಬ್ಬಾ! ಇದೆಂಥ ಸಾಹಸ; ಎಲೆಕ್ಟ್ರಿಕ್ ಫ್ಯಾನ್ಗಳನ್ನು ನಾಲಗೆಯಿಂದ ನಿಲ್ಲಿಸುವ ಡ್ರಿಲ್ಮ್ಯಾನ್