Wednesday, 8th January 2025

Nithin Kamath: ಬಾಲ್ಯ ಸ್ನೇಹಿತರ ಜತೆ ಕಳೆದ ದಿನವನ್ನು ಮೆಲುಕು ಹಾಕಿದ‌ ಜೆರೋಧಾ ಸಹ ಸಂಸ್ಥಾಪಕ ನಿತಿನ್‌ ಕಾಮತ್

viral post

ನವ ದೆಹಲಿ: ಜೆರೋಧಾ (Zerodha) ಸಹ ಸಂಸ್ಥಾಪಕ ನಿತಿನ್‌ ಕಾಮತ್‌ (Nithin Kamath) ಶಾಲಾ ದಿನದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಶಾಲಾ ಸ್ನೇಹಿತರು ಮತ್ತು ಅವರ ಕುಟುಂಬದೊಂದಿಗೆ ಸಮಯ ಕಳೆದ  ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ  ಹಂಚಿಕೊಂಡಿದ್ದು ‌ಇದೀಗ ಈ ಪೋಸ್ಟ್  ಬಹಳಷ್ಟು ವೈರಲ್ ಆಗಿದೆ (Viral Post).

ಇತ್ತೀಚೆಗೆ ಅವರು ಹಿಂದೊಮ್ಮೆ ಕಾಲ್ ಸೆಂಟರ್ ಉದ್ಯೋಗಿಯಾಗಿದ್ದಾಗ 2000ರ ದಶಕದ ಆರಂಭದಲ್ಲಿ ನಡೆದ ತಮ್ಮ ಮೊದಲ ವಿದೇಶ ಪ್ರವಾಸದ ಬಗ್ಗೆ ಹೇಳಿಕೊಂಡಿದ್ದರು. ಇದೀಗ ತನ್ನ ಬಾಲ್ಯದ ದಿನವನ್ನು ನೆನಪಿಸಿಕೊಂಡಿದ್ದಾರೆ. ವೈರಲ್ ಆಗಿರುವ  ಈ ಪೋಸ್ಟ್ ಸಾಮಾಜಿಕ ಬಳಕೆದಾರರ ಮೆಚ್ಚುಗೆಗೆ ಪಾತ್ರವಾಗಿದ್ದು, 42,000ಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ.‌

ಜೆರೋಧಾ ಸಹ ಸಂಸ್ಥಾಪಕ ನಿತಿನ್‌ ಕಾಮತ್‌ ತನ್ನ  ಬಾಲ್ಯದ ಸ್ನೇಹಿತರು ಮತ್ತು ಫ್ಯಾಮಿಲಿ ಫೋಟೊ ಹಂಚಿಕೊಂಡು ಈ ರೀತಿ ಬರೆದುಕೊಂಡಿದ್ದಾರೆ. ʼʼಸ್ನೇಹ ಅನ್ನೋದು ಅಮೂಲ್ಯವಾದುದು. ಇದು ಸ್ನೇಹದ ಮೌಲ್ಯ ಮತ್ತು  ಸಮಯದ ಪರೀಕ್ಷೆʼʼ ಎಂದಿದ್ದಾರೆ. ʼʼನನ್ನ ಶಾಲಾ ಸ್ನೇಹಿತರೊಂದಿಗೆ ಮತ್ತು ಈಗ ನನ್ನ  ಕುಟುಂಬದೊಂದಿಗೆ ಸುಮಾರು 30 ವರ್ಷಗಳನ್ನು ಕಳೆದಿರುವುದು ಹೆಮ್ಮೆ ಎನಿಸುತ್ತಿದೆ. ನಿಜವಾಗಿಯೂ ನಾನು  ಎಷ್ಟು ಅದೃಷ್ಟವಂತ ಎಂದು ಅರಿವಾಗುತ್ತದೆʼʼ ಎಂದು ಕಾಮತ್  ಅವರು ತಮ್ಮ ಪೋಸ್ಟ್‌ನಲ್ಲಿ  ಖುಷಿ ಹಂಚಿಕೊಂಡಿದ್ದಾರೆ.

ಸುಮಾರು ಮೂರು ದಶಕಗಳ ನಿರಂತರ ಈ  ಸ್ನೇಹಕ್ಕೆ  ಕೃತಜ್ಞತೆ ಸಲ್ಲಿಸುವ ಮೂಲಕ ಶಾಲಾ ಸ್ನೇಹಿತರೊಂದಿಗೆ ಕಳೆದ ನೆನಪನ್ನು ಮರುಕಳಿಸುವಂತೆ ಮಾಡಿದ್ದಾರೆ. ಈ ಫೋಟೊ ನೋಡಿದ ಬಳಕೆದಾರರು ತಮ್ಮ ಶಾಲಾ ದಿನದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಬಳಕೆದಾರರೊಬ್ಬರು ಈ ಸ್ನೇಹಕ್ಕೆ ಮೆಚ್ಚುಗೆ ಇರಲಿ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು ಎಂದಿಗೂ ಈ ನೆನಪು  ಮರೆಯಲಾಗದ್ದು ಎಂದು ಕಾಮೆಂಟ್‌ ಮಅಡಿದ್ದಾರೆ.

ಇದನ್ನು ಓದಿ: Janhvi Kapoor: ಬಾಯ್ ಫ್ರೆಂಡ್ ಜೊತೆ ನಟಿ ಜಾಹ್ನವಿ ಕಪೂರ್ ತಿರುಮಲ ದೇವಸ್ಥಾನಕ್ಕೆ ಭೇಟಿ- ವಿಡಿಯೊ ವೈರಲ್

Leave a Reply

Your email address will not be published. Required fields are marked *