ನವದೆಹಲಿ: ಕಿಸಾನ್ ಏಕ್ತಾ ಮೋರ್ಚಾ ಖಾತೆಯನ್ನ ಅಳಿಸಿ ಹಾಕಿದ್ದ ಫೇಸ್ಬುಕ್ ಸಂಸ್ಥೆ ಮತ್ತೆ ಈ ಖಾತೆಯನ್ನ ಸಕ್ರಿಯ ಗೊಳಿಸಿದೆ.
ಸೋಮವಾರ ರೈತರು ಸ್ವರಾಜ್ ಭಾರತದ ಮುಖಂಡ ಯೋಗೇಂದ್ರ ಯಾದವ್ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂಬ ಘೋಷಣೆ ಬೆನ್ನಲ್ಲೇ ಈ ಖಾತೆಯನ್ನ ಅಳಿಸಿ ಹಾಕಲಾಗಿತ್ತು.
ಕೃಷಿ ಮಸೂದೆ ವಿರೋಧಿಸಿ ರೈತರ ಹೋರಾಟವನ್ನ ಬೆಂಬಲಿಸಿ ಈ ಖಾತೆಯಲ್ಲಿ ಪೋಸ್ಟ್ಗಳನ್ನ ಶೇರ್ ಮಾಡಲಾಗುತ್ತಿತ್ತು. ಆದರೆ ಈ ಖಾತೆ ಸಮಾಜಕ್ಕೆ ವಿರೋಧವಾಗಿದೆ ಎಂದು ಆರೋಪಿಸಿ ಫೇಸ್ಬುಕ್ ಈ ಖಾತೆಯನ್ನ ಅಳಿಸಿಹಾಕಿತ್ತು.
ಇದರ ಸ್ಕ್ರೀನ್ಶಾಟ್ಗಳನ್ನ ಟ್ವಿಟರ್ನಲ್ಲಿ ಶೇರ್ ಮಾಡಿದ ರೈತ ಬೆಂಬಲಿಗರು ಫೇಸ್ಬುಕ್ ಸಂಸ್ಥೆ ವಿರುದ್ಧ ಆಕ್ರೋಶ ಹೊರಹಾಕಿ ದ್ದರು. ಸಾಕಷ್ಟು ವಿರೋಧ ಹಾಗೂ ಟೀಕೆಗಳನ್ನ ಎದುರಿಸಿದ ಬಳಿಕ ಫೇಸ್ಬುಕ್ ಸಂಸ್ಥೆ ಇದೀಗ ಈ ಖಾತೆಯನ್ನ ಮರು ಸ್ಥಾಪಿಸಿದೆ.